ಜೀವವಿಲ್ಲದ ಎಲಿಪೆಂಟ್​ ಟಾಸ್ಕ್​ ಪೋರ್ಸ್​ನಿಂದ ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಸಾಧ್ಯವೇ JP Story exclusive

ವಿಧಾನಸಭೆ ಚುನಾವಣೆ ಸನಿಹವಾಗುತ್ತಿರುವ ಸಂದರ್ಭದಲ್ಲಿ ಮಲೆನಾಡ ಜನಾಕ್ರೋಶಕ್ಕೆ ತುತ್ತಾಗಬಾರದೆಂಬ ಕಾರಣಕ್ಕೆ ಆನೆ ಹಿಮ್ಮೆಟ್ಟಿಸಲು ಸರ್ಕಾರ ತುರ್ತಾಗಿ ಎಲಿಫೆಂಟ್ ಟಾಸ್ಕ್ ಫೋರ್ಸ್ ರಚನೆ ಮಾಡಿದೆ ಎಂಬುದು ಜಗ್ಗಜಾಹಿರ ವಿಚಾರ.

ಜೀವವಿಲ್ಲದ ಎಲಿಪೆಂಟ್​ ಟಾಸ್ಕ್​ ಪೋರ್ಸ್​ನಿಂದ ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಸಾಧ್ಯವೇ  JP Story exclusive
Is it possible to repel wild elephants from the lifeless Elephant Task Force JP Story exclusive

ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಹಾಸನ ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಮಾನವ ಮತ್ತು ಆನೆ ನಡುವಿನ ಸಂಘರ್ಷ ದಿನದಿನಕ್ಕೂ ಹೆಚ್ಚುತ್ತಿದೆ. ರೈತರ ಹೊಲಗದ್ದೆಗಳ ನಾಶ, ಆನೆ ದಾಳಿಯಿಂದಾಗುವ ಸಾವು ನೋವುಗಳನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ ಎಂಬಂತಾಗಿದೆ.

ಸ್ಥಳೀಯ ವಾಸಿಗಳು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕೆಂಡಕಾರುತ್ತಿದ್ದಾರೆ. ಮೂಡಿಗೆರೆ ತಾಲೂಕಿನಲ್ಲಾದ ಆನೆ ದಾಳಿಯಿಂದಾದ ಸಾವಿನ ನಂತರ ಸರ್ಕಾರ ತರಾತುರಿಯಲ್ಲಿ ಎಚ್ಚೆತ್ತುಕೊಂಡು ಕೆಲವೊಂದು ಎಡವಟ್ಟುಗಳನ್ನು ಮಾಡಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರೇ ಅರಣ್ಯ ಖಾತೆ ನಿರ್ವಹಿಸುತ್ತಿರುವುದರಿಂದ ಮೂಡಿಗೆರೆ ಸಾವಿನ ಪ್ರಕರಣಕ್ಕೆ ತರಾತುರಿಯಲ್ಲಿ ಇತಿಶ್ರೀ ಹಾಡಿದ್ದಾರೆ. 

ವಿ.ಹೆಚ್.ಪಿ ಮುಖಂಡನಿಗೆ ಸೆಂಟ್ರಲ್ ಜೈಲಿನಿಂದ ಹಣಕ್ಕಾಗಿ ಬೆದರಿಕೆ ಕರೆ! ಹಣ ಕೇಳಲು ಬಂದು ಸಿಕ್ಕಿಬಿದ್ದ ಕಟ್ಟಪ್ಪ !  ರೌಡಿಗಳಿಗೆ ಜೈಲುಗಳೇ ಹಣ ಸುಲಿಗೆಗೆ ರಾಜಮಾರ್ಗವಾಗುತ್ತಿದೆಯಾ?  BREAKING NEWS

ಏನಿದು ಎಲಿಫೆಂಟ್ ಟಾಸ್ಕ್ ಫೋರ್ಸ್? ...ಏನಿದರ ಕರ್ತವ್ಯ ನಿರ್ವಹಣೆ?

  • 1.ಸರ್ಕಾರ ಗುರುತಿಸಿರುವಂತೆ ಮೈಸೂರು ಕೊಡಗು ಹಾಸನ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಎಲಿಫೆಂಟ್ ಟಾಸ್ಕ್ ಫೋರ್ಸ್ ಕಾರ್ಯ ನಿರ್ವಹಿಸಲಿದೆ. 
  • 2.ಪ್ರತಿ ಜಿಲ್ಲೆಗೂ ಒಬ್ಬ ಡಿಸಿಎಫ್, ಒಬ್ಬ ಎಸಿಎಪ್, ಒಬ್ಬ ಆರ್.ಎಪ್.ಓ ಮತ್ತು ನಾಲ್ಕು ಡಿ.ಆರ್.ಎಫ್.ಓ ಹಾಗು 06 ಅರಣ್ಯ ರಕ್ಷಕರು 32 ಹೊಗಗುತ್ತಿಗೆ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಾರೆ. ಈ ಜಿಲ್ಲಾ ಟಾಸ್ಕ್ ಫೋರ್ಸ್ ಗಳು ಆಯಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ನಿರ್ದೇಶನದಂತೆ ಕಾರ್ಯ ನಿರ್ವಹಿಸಬೇಕು.
  • 3.ಈ ಜಿಲ್ಲಾ ಟಾಸ್ಕ್ ಫೋರ್ಸ್ ತಂಡಗಳು ಕಾಡಾನೆ ಹಾವಳಿ ಇರುವ ಪ್ರದೇಶಗಳಲ್ಲಿ ಗಸ್ತು ತಿರುಗುವುದು ಮತ್ತು ಜನ ವಸತಿ ಪ್ರದೇಶಗಳಲ್ಲಿ, ಕೃಷಿ ಪ್ರದೇಶಗಳಲ್ಲಿ ಹಾಗೂ ಕಾಫಿ ಎಸ್ಟೇಟ್‌ಗಳಲ್ಲಿ ಆನೆಗಳ ಚಲನವಲನಗಳನ್ನು ಗುರುತಿಸಿ ಕೂಡಲೇ ಸ್ಥಳಕ್ಕೆ ಧಾವಿಸಿ ಆನೆಗಳನ್ನು ಅರಣ್ಯ ಪ್ರದೇಶಕ್ಕೆ ಹಿಮ್ಮೆಟ್ಟಿಸುವುದು. 
  • 4. ಕಾಡಾನೆ ಹಾವಳಿ ಕಂಡು ಬರುವ ಪುದೇಶಗಳ ಹಳ್ಳಿಗಳಲ್ಲಿನ ಸಾರ್ವಜನಿಕರಿಗೆ ಆನೆಗಳ ಚಲನವಲನ ಕುರಿತು ಮಾಹಿತಿ ನೀಡುವುದಲ್ಲದೇ, ಅರಣ್ಯ ಪುದೇಶದ ಒಳಗೆ ಸಂಚರಿಸದಂತೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಿ ಪ್ರಚುರ ಪಡಿಸುವುದು. 
  • 5. ಪ್ರತಿ ಟಾಸ್ಕ್ ಫೋರ್ಸ್‌ ಕೇಂದ್ರಸ್ಥಾನದಲ್ಲಿ Control Roam (ನಿಯಂತ್ರಣ ಕೊಠಡಿ) ಕಾರ್ಯನಿರ್ವಹಿಸತಕ್ಕದ್ದು ಮತ್ತು Control Room ನ ದೂರವಾಣಿ ಸಂಖ್ಯೆಯನ್ನು ಸಾರ್ವಜನಿಕರಲ್ಲಿ ಪ್ರಚುರ ಪಡಿಸುವುದು.
  • 6. ಈ ಟಾಸ್ಕ್ ಪೋರ್ಸ್‌ಗಳಿಗೆ ಆನೆ ಹಾವಳಿ ತಡೆಗಟ್ಟುವ ಹಿಮ್ಮೆಟಿಸುವ ಕಾರ್ಯಕ್ಕೆ ಬೇಕಾಗುವ ವಾಕಿಟಾಕಿ, ಬಂದೂಕು, ಪಟಾಕಿ ಹಾಗೂ ಸಾರ್ವಜನಿಕ ಜಾಗೃತಿ ಮೂಡಿಸಲು ಉಪಯೋಗಿತ ಸಲಕರಣೆಗಳು ಹಾಗೂ ಇನ್ನಿತರ ಅವಶ್ಯಕ ಸಲಕರಣೆ ಮತ್ತು ಸೌಲಭ್ಯಗಳನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥರು) ಇವರು ಒದಗಿಸುವುದು.
  • 7. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಮರು) ಇವರು ಪುತಿ ಜಿಲ್ಲೆಯ ಟಾಸ್, ಫೋರ್ಸ್‌ಗೆ ವಲಯಾರಣ್ಯಾಧಿಕಾರಿ ಉಪವಲಯಾರಣಾಧಿಕಾರಿ ಮತ್ತು ಅರಣ್ಯ ರಕ್ಷಕರನ್ನು ಸ್ಥಳನಿಯುಕ್ತಿಗೊಳಿಸಿ ಕೂಡಲೇ ಆದೇಶ ಹೊರಡಿಸಲು ಕ್ರಮವಹಿಸತಕ್ಕದ್ದು.
  • 8. ಸದರಿ ಟಾಸ್ಕ್ ಫೋರ್ಸ್‌ಗಳು, ಆನೆ ಹಾವಳಿ ಪ್ರದೇಶಗಳಿಗೆ ಶೀಘ್ರುವಾಗಿ ತಲುವಲು ಅನುವಾಗುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯಪಡ ಮುಖ್ಯ ಸ್ಮರು) ಇವರು ಪ್ರತಿ ಜಿಲ್ಲೆಯ ಟಾಸ್ಕ್‌ ಫೋರ್ಸ್‌ಗೆ 03 ಬೊಲೆರೋ ಜೀಪ್‌ಗಳನ್ನು ಒದಗಿಸತಕ್ಕದ್ದು. ಇದ್ಯಲ್ಲದ 02 Canter ವಾಹನಗಳನ್ನು ಬಾಡಿಗೆ ಆಧಾರದ ಮೇಲೆಪಡೆದು ನಿಯೋಜಿಸತಕ್ಕದ್ದು. 
  • 9. ಕಾಡಾನೆ ದಾಳಿ ತಡೆಗಟ್ಟುವ ಆನೆಗಳನ್ನು ಹಿಮ್ಮೆಟ್ಟಿಸುವ ಸಂದರ್ಭಗಳಲ್ಲಿ ಸ್ಥಳೀಯ ಪೊಲೀಸ್ ಇಲಾಖೆಯ ಸಹಾಯ ಪಡೆಯತಕ್ಕದ್ದು.

ಗೊಂದಲವಾಗಿರುವುದೆಲ್ಲಿ?

ವಿಧಾನಸಭೆ ಚುನಾವಣೆ ಸನಿಹವಾಗುತ್ತಿರುವ ಸಂದರ್ಭದಲ್ಲಿ ಮಲೆನಾಡ ಜನಾಕ್ರೋಶಕ್ಕೆ ತುತ್ತಾಗಬಾರದೆಂಬ ಕಾರಣಕ್ಕೆ ಆನೆ ಹಿಮ್ಮೆಟ್ಟಿಸಲು ಸರ್ಕಾರ ತುರ್ತಾಗಿ ಎಲಿಫೆಂಟ್ ಟಾಸ್ಕ್ ಫೋರ್ಸ್ ರಚನೆ ಮಾಡಿದೆ ಎಂಬುದು ಜಗ್ಗಜಾಹಿರ ವಿಚಾರ.

ಹಾಲಿ ನಿಗದಿತ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಿಸಿಎಪ್, ಎಸಿಎಪ್ ಆರ್ ಎಫ್ ಓ ಗಳನ್ನು ತರಾತುರಿಯಲ್ಲಿ  ಜಿಲ್ಲಾ ಎಲಿಫೆಂಟ್ ಟಾಸ್ಕ್ ಫೋರ್ಸ್ ಗೆ ವರ್ಗಾವಣೆ ಮಾಡಿರುವುದು ಅಧಿಕಾರಿಗಳ ವಲಯದಲ್ಲಿ ತೀವೃ ಅಸಮಧಾನವನ್ನುಂಟುಮಾಡಿದೆ. ಕೆಲವು ಅಧಿಕಾರಿಗಳು ನಿಗದಿತ ಸ್ಥಳದಲ್ಲಿ ಒಂದು ವರ್ಷವೂ ಪೂರೈಸಿಲ್ಲ..

ಮತ್ತೆ ಕೆಲವರು ನಿವೃತ್ತಿಯ ಆಸುಪಾಸಿನಲ್ಲಿರುವವರು..ಇವರೆಲ್ಲಾ ಈಗಾಗಲೇ ಎಲಿಫೆಂಟ್ ಏರಿಯಾಗಳಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳೇ ಆಗಿದ್ದಾರೆ. ಅನುಭವವನ್ನು ಮುಂದಿಟ್ಟುಕೊಂಡು ಇವರನ್ನೇ ಟಾಸ್ಕ್ ಪೋರ್ಸ್ ಗೆ ಬಳಸಿಕೊಳ್ಳುವುದಕ್ಕಿಂತ ಹೊಸದಾಗಿ ಇಲಾಖೆ ಸೇರಿದ ನೂರಾರು ಮಂದಿ ಅಧಿಕಾರಿ ಸಿಬ್ಬಂದಿಗಳನ್ನು ನಿಯೋಜಿಸಿದರೆ,

ಅವರು ಉತ್ಸಾಹದಲ್ಲಿ ಕೆಲಸ ಮಾಡುತ್ತಾರೆ,ಇವರಲ್ಲಿ ಬಹಳಷ್ಟು ಮಂದಿ ಪೋಸ್ಟಿಂಗ್ ಗಾಗಿ ಕಾಯುತ್ತಿದ್ದಾರೆ. ವನ್ಯಪ್ರಾಣಿಗಳ ಬಗ್ಗೆ ಆಸಕ್ತಿ ಹೊಂದಿರುವ ಯುವ ಪಡೆಯನ್ನು ಟಾಸ್ಕ್ ಫೋರ್ಸ್ ಗೆ ಬಳಸಿಕೊಳ್ಳಬೇಕು.

ಸರ್ಕಾರಿ ಅಧಿಕಾರಿಗಳೇ ಹುಷಾರ್ |  ರಹಸ್ಯ ಕ್ಯಾರ್ಯಾಚರಣೆ ​ ಹೆಸರಿನಲ್ಲಿ ಹೆದರಿಸುವವರಿದ್ದಾರೆ? 

ಆನೆಗಳನ್ನು ಹಿಮ್ಮೆಟ್ಟಿಸುವುದು ವೈಲ್ಡ್ ಲೈಫ್ ಅಫೆನ್ಸ್

ವನ್ಯಜೀವಿ ಕಾಯ್ದೆ ಪ್ರಕಾರ ಆನೆಗಳನ್ನು ಕಾಡಿನಿಂದ ಹಿಮ್ಮೆಟ್ಟಿಸುವುದು ಅಪರಾಧವಾಗಿದೆ. ಈ ಭೂಮಿಯ ಮೇಲೆ ಮನುಷ್ಯನಿಗೆ ಎಷ್ಟು ಹಕ್ಕಿದೆಯೋ..ಅಷ್ಟೆ ಹಕ್ಕು ವನ್ಯಪ್ರಾಣಿಗಳಿಗೂ ಇದೆ. ಆರ್ಟಿಕಲ್ 51 ಎಜಿ ಪ್ರಕಾರ ಪ್ರತಿಯೊಬ್ಬ ಮನುಷ್ಯನಿಗೂ ಪ್ರಾಣಿಗಳ ಮೇಲೆ ಸಹಾನುಭೂತಿ ಹೊಂದಿರಬೇಕು ಎಂದು ಸುಪ್ರಿಂ ಕೋರ್ಟ್ ಹೇಳಿದೆ. ವನ್ಯಪ್ರಾಣಿಗಳ ಸಂಘರ್ಷ ಹೆಚ್ಚಾದರೆ, ಅದಕ್ಕೆ ಮಾರ್ಗ ಸೂಚಿಗಳನ್ನು ಇಲಾಖೆ ರೂಪಿಸಿದೆ. 

2012 ರಿಂದಲೇ ಟಾಸ್ಕ್ ಫೋರ್ಸ್ ಜಾರಿಯಲ್ಲಿದೆ.

2012 ರಿಂದಲೇ ಎಲಿಫೆಂಟ್ ಟಾಸ್ಕ್ ಫೋರ್ಸ್ ರಚನೆಯಾಗಿದೆ. ಆದರೆ ಅದಕ್ಕೆ ಜೀವ ನೀಡುವ ಕೆಲಸ ಸರ್ಕಾರದಿಂದ ಆಗಿರಲಿಲ್ಲ, ಹಾಗೆ ನೋಡಿದರೆ ಮೊದಲು ಎಸಿಫೆಂಟ್ ಎಕ್ಸ್ ಪರ್ಟ್ ಕಮಿಟಿ ರಚನೆ ಮಾಡಬೇಕು. ಈಗ ತರಾತುರಿಯಲ್ಲಿ ನಾಲ್ಕು ಜಿಲ್ಲೆಗಳಲ್ಲಿ ಟಾಸ್ಕ್ ರಚನೆ ಮಾಡಿದ್ರೂ, ಆ ಅಧಿಕಾರಿಗಳಿಗೆ ಕಛೇರಿಯಿಲ್ಲ.

ಓಡಾಡಲು ಜೀಪಿನ ವ್ಯವಸ್ಥೆಯಿಲ್ಲ. ಸಕಲೇಶಪುರ ಹೊರತು ಪಡಿಸಿದರೆ ಉಳಿದೆಡೆ ಟಾಸ್ಕ್ ಫೋರ್ಸ್ ಶೂನ್ಯಾವಸ್ಥೆಯಲ್ಲಿದೆ. ಎಲಿಫೆಂಟ್ ಟಾಸ್ಕ್ ಫೋರ್ಸ್ ನಲ್ಲಿ ಕೆಲಸ ಮಾಡುವವರಿಗೆ 30 ಪಸ್ಸೆಂಟ್ ಹೆಚ್ಚುವರಿ ಸಂಬಳ ನೀಡಬೇಕು.

ಇಲ್ಲಿ ಕರ್ತವ್ಯ ನಿರ್ವಹಿಸಿದ ನಂತರ ಬೇರೆಡೆ ಪೋಸ್ಟಿಂಗ್ ಮಾಡಲಾಗುತ್ತದೆ. ಆದರೆ ಸ್ಟೇಟ್ ವೈಲ್ಡ್ ಲೈಫ್ ಬೋರ್ಡ್ ನ ಎಕ್ಸ್ ಪರ್ಟ್ ಕಮಿಟಿ ಸಭೆ ನಡೆಸದೆ,ಏಕಾಎಕಿ ತೀರ್ಮಾನ ಮಾಡಿದ್ದು ಸರಿಯಾದ ಕ್ರಮವಲ್ಲ. ರಾಜ್ಯದ ವನ್ಯಜೀವಿ ವಿಚಾರದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಬೇಕೆಂದರೂ, ಈ ಬೋರ್ಟ್ ನಲ್ಲಿ ಚರ್ಚೆಯಾಗಿ ತೀರ್ಮಾನವಾಗಬೇಕು. 

ವನ್ಯಜೀವಿ ನಿಯಮಾವಳಿಗಳನ್ನು ಗಾಳಿಗೆ ತೂರಿ, ಏಕಾಏಕಿ ಟಾಸ್ಕ್ ಪೋರ್ಸ್ ರಚನೆ ಮಾಡಿದ್ದು ಸರಿಯಾದ ಕ್ರಮವಲ್ಲ. ಸರಿಯಾದ ಮಾನದಂಡದ ಅಡಿಯಲ್ಲಿ ಟಾಸ್ಕ್ ಫೋರ್ಸ್ ರಚನೆಯಾಗಿದ್ದಲ್ಲಿ, ಜನರು ನೆಮ್ಮದಿಯ ನಿಟ್ಟುಸಿರು ಬಿಡಬಹುದು.

ಶಿವಮೊಗ್ಗ – ಮೈಸೂರು ದಿನಕ್ಕೆ ಎಷ್ಟು ಟ್ರೈನ್​ಗಳಿವೆ | ಎಷ್ಟೊತ್ತಿಗೆ ಹೊರಡುತ್ತವೆ | ಎಲ್ಲೆಲ್ಲಿ ನಿಲ್ಲುತ್ತವೆ | ಟೈಮಿಂಗ್ಸ್​ ಏನು| ಪ್ರಯಾಣಿಕರೇ ಗಮನಿಸಿ

ಮತ್ತೆ ಮಾಡಬೇಕಿದೆ ಆಪರೇಷನ್ ಖೆಡ್ಡಾ ?

ಕಾಕನಕೋಟೆ ಖೆಡ್ಡಾದ ನಂತರ ರಾಜ್ಯದಲ್ಲಿ ಅಂತಹ ಬೃಹತ್ ಖೆಡ್ಡಾ ಮತ್ತೆ ನಡೆಯಲೇ ಇಲ್ಲ. ಹಾಗೆ ನೋಡಿದ್ರೆ ರಾಜ್ಯದಲ್ಲಿ ಆನೆಗಳ ಸಂಖ್ಯೆ ಸರ್ಕಾರಿ ಲೆಕ್ಕದಲ್ಲಿ ಆರುವರೆ ಸಾವಿರವಿದ್ದರೂ, ಅನುಭವಸ್ಥರ ಲೆಕ್ಕದಲ್ಲಿ ಹತ್ತು ಸಾವಿರಕ್ಕೂ ಅಧಿಕ ಸಂಖ್ಯೆ ಇದೆ ಎಂದು ಹೇಳಲಾಗುತ್ತಿದೆ.

ಕಾಡಂಚಿನ ಗ್ರಾಮಗಳಿಗೆ ಲಗ್ಗೆ ಇಡುವ ಕಾಡಾನೆಗಳನ್ನು ಹಿಮ್ಮೆಟ್ಟಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಅವು ಮತ್ತೆ ರೈತರ ತೋಟಗದ್ದೆಗಳಿಗೆ ಲಗ್ಗೆ ಇಡುತ್ತವೆ. ಇಂತ ಕಾಡಾನೆಗಳು ರೈತರ ಆಕ್ರೋಶಕ್ಕೆ ಬಲಿಯಾದ ಉದಾಹರಣೆಗಳು ಕಣ್ಣ ಮುಂದಿದೆ. ಹೀಗಾಗಿ ಕಾಡಾನೆಗಳನ್ನು ಸೆರೆಹಿಡಿದು ಪಳಗಿಸುವುದೇ ಸೂಕ್ತ ಎಂಬ ಅಭಿಪ್ರಾಯ ಬಹಳಷ್ಟು ಜನರಿಂದ ಕೇಳಿಬರುತ್ತಿದೆ.

ರಾಜ್ಯದಲ್ಲಿ ನುರಿತ ಮಾವುತ ಕಾವಾಡಿಗಳಿದ್ದಾರೆ. ಅವರ ಸಹಕಾರದಿಂದ ನಾಲ್ಕು ಜಿಲ್ಲೆಗಳಲ್ಲಿ ತಲೆನೋವಾಗಿರುವ ಕಾಡಾನೆಗಳನ್ನು ಸೆರೆಹಿಡಿದು, ಆನೆ ಬಿಡಾರಗಳಲ್ಲಿ ಪಳಗಿಸುವುದೇ ಲೇಸು, ಮಾವನ ಮತ್ತು ಆನೆ ಸಂಘರ್ಷದ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಪ್ರಾಮಾಣಿಕ ಪ್ರಯತ್ನ ಅಧಿಕಾರಿಗಳಿಂದ ಆಗಬೇಕು.

BREAKING NEWS : ಚುನಾವಣಾ ಕಣದಿಂದ ಹಿಂದೇ ಸರಿದರಾ ಡಾ.ಧನಂಜಯ್​ ಸರ್ಜಿ/ ಸದ್ಯದಲ್ಲಿಯೇ ಬಿಜೆಪಿಗೆ

ಆನೆಗಳನ್ನು ಸೆರೆಹಿಡಿದು ಪಳಗಿಸಿವುದರಿಂದ ರೈತರಿಗೆ ಶಾಶ್ವತ ಪರಿಹಾರ ಸಿಕ್ಕಿದಂತಾಗುತ್ತದೆ.ಇದರಿಂದ ಸರ್ಕಾರಕ್ಕೆ ಕೊಂಚ ಹೊರೆಯಾದ್ರೂ, ಮಾವುತ ಕಾವಾಡಿ ಎಂಬ ಪುರಾತನ ಸಾಂಪ್ರಾದಾಯಿಕ ಕಲೆಯೂ ಮುಂದುವರೆಯುತ್ತದೆ.

ರಾಜ್ಯದ ಐದು ಬಿಡಾರಗಳಲ್ಲಿ , ಹದಿನಾಲ್ಕು ಆನೆಗಳನ್ನು ಮದ್ಯ ಪ್ರದೇಶಕ್ಕೆ ಕಳಿಸಿದರೆ, 75 ಸಾಕಾನೆ ಉಳಿದರೂ ಹೆಚ್ಚು. ಮಾವುತ ಕಾವಾಡಿಗೂ ಕೆಲಸ ಇಲ್ಲದಂತಾಗುತ್ತದೆ.

ಹೀಗಾಗಿ ನಾಲ್ಕು ಜಿಲ್ಲೆಗಳಲ್ಲಿ ಆನೆಗಳನ್ನು ಹಿಮ್ಮೆಟ್ಟಿಸುವ ಬದಲು, ಸೆರೆಹಿಡಿದು ರೇಡಿಯೋ ಕಾಲರ್ ಹಾಕಿ ಬೇರೆ ಕಾಡಿಗೆ ಸ್ಥಳಾಂತಿರಿಸುವ ಬದಲು, ಅದನ್ನು ಪಳಗಿಸಿ ಇಲಾಖೆಯ ಕಾರ್ಯಗಳಿಗೆ ಬಳಸಿಕೊಳ್ಳುವುದು ಸೂಕ್ತ ಎಂಬುದು ವೈಲ್ಡ್ ಟಸ್ಕರ್ ಸಕ್ರೆಬೈಲು ಸಂಸ್ಥೆಯ ಆಗ್ರಹವಾಗಿದೆ.

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link