ಆನೆಗಳ ಕಾರಿಡಾರ್ ಬದಲಾಗಲು ಲಂಟಾನ ಗಿಡಗಳು ಕೂಡ ಕಾರಣ! ಆನೆ ಯೋಜನೆಯಡಿ ಲಂಟಾನ ನಿರ್ಮೂಲನೆಗೆ ಸರ್ಕಾರ ಮುಂದಾಗಬಾರದೇಕೆ?

do-you-know-why-lantana-plants-are-also-responsible-for-changing-the-elephant-corridor

ಆನೆಗಳ ಕಾರಿಡಾರ್ ಬದಲಾಗಲು ಲಂಟಾನ ಗಿಡಗಳು ಕೂಡ ಕಾರಣ! ಆನೆ ಯೋಜನೆಯಡಿ ಲಂಟಾನ ನಿರ್ಮೂಲನೆಗೆ ಸರ್ಕಾರ ಮುಂದಾಗಬಾರದೇಕೆ?
do-you-know-why-lantana-plants-are-also-responsible-for-changing-the-elephant-corridor

ಆನೆಗಳ ಕಾರಿಡಾರ್ ಬದಲಾಗಲು ಲಂಟಾನ ಗಿಡಗಳು ಕೂಡ ಕಾರಣ. ಹುಲ್ಲು ಸಹ ಹುಟ್ಟಲು ಬಿಡದ ವಿದೇಶಿ ಸಸ್ಯಗಳಿಗೆ ಮುಕ್ತಿ ಹಾಡದೆ ಹೋದರೆ ಸಸ್ಯಹಾರಿ ವನ್ಯಜೀವಿಗಳಿಗೆ ಎದುರಾಗುತ್ತೆ ಆಹಾರದ ಕೊರತೆ. ಆನೆ ಯೋಜನೆಯಡಿ ಲಂಟಾನ ನಿರ್ಮೂಲನೆಗೆ ಸರ್ಕಾರ ಮುಂದಾಗಬಾರದೇಕೆ?

ದೇಶದಲ್ಲಿ ಅತೀ ಹೆಚ್ಚು ಆನೆಗಳನ್ನು ಹೊಂದಿರುವ ಕರ್ನಾಟಕ ರಾಜ್ಯದಲ್ಲಿ ಇತ್ತಿಚ್ಚಿಗೆ ಆನೆ ಮತ್ತು ಮಾನವ ನಡುವಿನ ಸಂಘರ್ಷ ದಿನೇ ದಿನೇ ಹೆಚ್ಚುತ್ತಿದೆ. ಇದಕ್ಕೆ ಕಾರಣಗಳು ಹಲವು.

ಕಾಡಿನಲ್ಲಿ ಆಹಾರದ ಕೊರತೆ, ಗಜಪಡೆಯ ದಿಕ್ಕಿನ ಜಾಗವನ್ನು ಮನುಷ್ಯ ಅತಿಕ್ರಮಿಸಿಕೊಂಡು ತೋಟ ಗದ್ದೆಗಳನ್ನ ಮಾಡಿರುವುದೇ ಆಗಿದೆ. ಹಿಂಡಿನಂದ ಬೇರ್ಪಟ್ಟೋ..ಅಥವಾ ಸಾಂಪ್ರದಾಯಿಕ ಪಥ ಬದಲಾದಾಗ ಆನೆಗಳು ಸಹಜವಾಗಿ ಕಾಡಂಚಿನ ರೈತರ ಹೊಲ ಗದ್ದೆಗಳಿಗೆ ಲಗ್ಗೆಯಿಟ್ಟು ಕೃಷಿ ಹಾನಿ ಜೀವಹಾನಿ ಮಾಡುತ್ತಿವೆ.

ಅಭಯಾರಣ್ಯಕ್ಕೆ ಎದುರಾಗಿದೆ ಲಂಟಾನಾ ಆತಂಕ

ಕೇಂದ್ರ ಸರ್ಕಾರದ ಮಹತ್ವದ ಆನೆ ಯೋಜನೆಯಲ್ಲಿ ರಾಷ್ಟ್ರೀಯ ಉದ್ಯಾನವನಗಳು, ವನ್ಯಜೀವಿ ಅಭಯಾರಣ್ಯಗಳು ಮೀಸಲು ಅರಣ್ಯ ಗಳಲ್ಲಿ ಆನೆಗಳ ಆವಾಸ ಸ್ಥಾನಗಳ ಸಂರಕ್ಷಣೆ ಮಾಡುವುದು ಮುಖ್ಯವಾಗಿದೆ.

ಆನೆ ನಿರೋಧಕ ಕಂದಕ, ಸೌರವಿದ್ಯುತ್ ಬೇಲಿಗಳ ನಿರ್ಮಾಣ ಮತ್ತು ನಿರ್ವಹಣೆ.ರ್ಯಾಪಿಡ್ ಆಕ್ಷನ್ ಫೋರ್ಸ್ ರಚನೆ, ಕಳ್ಳ ಬೇಟೆ ತಡೆ ಶಿಬಿರಗಳು ಆನೆ ಹಿಮ್ಮೆಟ್ಟಿಸುವ ಶಿಬಿರಗಳ ರಚನೆ ಮತ್ತು ನಿರ್ವಹಣೆ, ಹಾವಳಿ ನಡೆಸುವ ಪುಂಡಾನೆ ಸೆರೆಹಿಡಿದು ಸ್ಥಳಾಂತರಿಸುವುದು,

ಗಾಯಗೊಂಡ ಆನೆಗಳ ಶೂಶ್ರೂಷೆ ಮಾಡುವುದು ಮರಣೋತ್ತರ ಪರೀಕ್ಷೆ ಮತ್ತು ಮುಂತಾದ ವಿಚಾರಗಳಲ್ಲಿ ಪಶುವೈದ್ಯರಿಗೆ ತರಬೇತಿ ನೀಡುವುದು, ಆನೆ ಆವಾಸ ಪ್ರದೇಶದಲ್ಲಿ ಮತ್ತು ಸುತ್ತಮುತ್ತ ಅವುಗಳ ಸಂರಕ್ಷಣೆ ಮತ್ತು ಸಂತತಿ ಉಳಿಸುವಿಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಇನ್ನಿತರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ವಿವರಣೆ ನೀಡಲಾಗಿದೆ.

ಆನೆಗಳ ಸಂರಕ್ಷಣೆಗಾಗಿ ಅರಣ್ಯ ಇಲಾಖೆ ಇಷ್ಟೆಲ್ಲಾ ಕಾರ್ಯಕ್ರಮಗಳನ್ನು ರೂಪಿಸಿದೆಯಾದರೂ,,ಅವುಗಳ ಕಾರಿಡಾರ್ ಸುತ್ತಮುತ್ತಲ ಪ್ರದೇಶದಲ್ಲಿ ಅವುಗಳ ಹೊಟ್ಟೆ ತುಂಬಿಸಲು ಯಾವ ಕಾರ್ಯ ಕೈಗೊಂಡಿದೆ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ.

ರಾಷ್ಟ್ರೀಯ ಉದ್ಯಾನವನಗಳು ಅಭಯಾರಣ್ಯ ಪ್ರದೇಶಗಳ ಒಳಹೊಕ್ಕರೆ ಇಂದು ಲಂಟಾನ ಪಾರ್ಥೇನಿಯಂ ಗಿಡಗಳೇ ಕೈಬೀಸಿ ಕರೆಯುತ್ತಿವೆ. ಲಂಟಾನ ಗಿಡ ಅವ್ಯಾಹಿತವಾಗಿ ಬೆಳೆದು ಮಾಂಸಹಾರಿ ಪ್ರಾಣಿಗಳಿಗೆ ಅಡಗುದಾಣಗಳಾಂತಾಗಿದೆ.

ಲಂಟಾನ ಬೆಳೆದ ಜಾಗದಲ್ಲಿ ಹುಲ್ಲು ಕೂಡ ಹುಟ್ಟುವುದಿಲ್ಲ

ಬಂಡಿಪುರ ನಾಗರಹೊಳೆ ಭದ್ರಾ ಅಭಯಾರಣ್ಯ ಪ್ರದೇಶಗಳು ಲಂಟಾನ ಕಾಡುಗಳಾಗುತ್ತಿವೆ. ಕಾಡು ಮಾರ್ಗದ ಅಕ್ಕಪಕ್ಕದಲ್ಲಿ ಲಂಟಾನ ವೀಡಿಂಗ್ ಮಾಡಿದಂತೆ ಕಾಣುತ್ತದೆಯಾದ್ರೂ, ಕಾಡನ್ನೇ ಸಂಪೂರ್ಣ ಲಂಟಾನ ಮುಕ್ತ ಮಾಡಲು ಸರ್ಕಾರ ಯಾವ ಯೋಜನೆ ಹಾಕಿಕೊಂಡಿದೆ ಎಂಬುದಕ್ಕೆ ಸಧ್ಯಕ್ಕೆ ಉತ್ತರವಿಲ್ಲ.

ಮಧ್ಯ ಮತ್ತು ದಕ್ಷಿಣ ಅಮೇರಿಕಾ ಮೂಲದ ಲಂಟಾನ ಕಳೆ ಸಸ್ಯವಾಗಿ ಗುರುತಿಸಿಕೊಂಡಿದೆ.ಲಂಟಾನಾ ಗಿಡವು ಇತರೆ ಪ್ರಭೇದದ ಗಿಡಗಳನ್ನು ಹಿಂದಿಕ್ಕಿ ಬೆಳೆಯುವ ಕಾಡು ಕಳೆಯಾಗಿದ್ದು, ಜೀವವೈವಿಧ್ಯವನ್ನು ಹಾಳು ಮಾಡುತ್ತೆ.

ಲಂಟಾನ ಬೆಳೆದ ಜಾಗದಲ್ಲಿ ಹುಲ್ಲು ಕೂಡ ಹುಟ್ಟುವುದಿಲ್ಲ.ಯಾವ ಕಾಡು ಜಾತಿಯ ಗಿಡಗಳು ಹುಟ್ಟುವುದಿಲ್ಲ. ಇದು ಆನೆ ಜಿಂಕೆಯಂತ ಸಸ್ಯಹಾರಿ ವನ್ಯಪ್ರಾಣಿಗಳಿಗೆ ಆಹಾರದ ಕೊರತೆಯನ್ನು ಎದುರಿಸುವಂತೆ ಮಾಡುತ್ತೆ. ಕಳೆದ ವರ್ಷ ಕಾಡಿನಲ್ಲಿರುವ ಲಂಟಾನ ಸವರಿದಂತೆ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳು ನಂತರ