ಜಸ್ಟ್​ ಎರಡು ಹನಿ ಒಂದು ದೈತ್ಯ ಆನೆಯನ್ನು ಎರಡೇ ನಿಮಿಷದಲ್ಲಿ ನೆಲಕ್ಕುರುಳಿಸುತ್ತದೆ. ಕಾಡಾನೆ ಸೆರೆಹಿಡಿಯಲು ಬಳಸುವ ಆ ವಂಡರ್ ಡ್ರಗ್ ಯಾವುದು?

An interesting story about an operation to catch wild elephants

ಜಸ್ಟ್​ ಎರಡು ಹನಿ ಒಂದು ದೈತ್ಯ ಆನೆಯನ್ನು ಎರಡೇ ನಿಮಿಷದಲ್ಲಿ ನೆಲಕ್ಕುರುಳಿಸುತ್ತದೆ. ಕಾಡಾನೆ ಸೆರೆಹಿಡಿಯಲು ಬಳಸುವ ಆ ವಂಡರ್ ಡ್ರಗ್ ಯಾವುದು?
An interesting story about an operation to catch wild elephants

An interesting story about an operation to catch wild elephants / ಆ ಎರಡು ಹನಿ ಒಂದು ದೈತ್ಯ ಆನೆಯನ್ನು ಎರಡು ನಿಮಿಷದಲ್ಲಿ ನೆಲಕ್ಕುರುಳಿಸುತ್ತದೆ. ಕಾಡಾನೆ ಸೆರೆಹಿಡಿಯಲು ಬಳಸುವ ಆ ವಂಡರ್ ಡ್ರಗ್ ಯಾವುದು ?Malenadu today story / SHIVAMOGGA

ಡಾಟಿಂಗ್ ಪ್ರಕ್ರಿಯೆ ಹೇಗಿರುತ್ತೆ? ಇಷ್ಟಕ್ಕೂ ಡಾಟಿಂಗ್ ಅಂದರೆ ಏನು?

ಕಾಡಾನೆಯನ್ನು ಸೆರೆಹಿಡಿಯಲು ಡಾಟಿಂಗ್ ಮಾಡುವುದು ಪ್ರಮುಖ ಪ್ರಕ್ರೀಯೆಯಾಗಿದೆ.ಬಂದೂಕಿನ ಮೂಲಕ ಅರವಳಿಕೆ ಮದ್ದನ್ನು ಕಾಡಾನೆಯ ದೇಹಕ್ಕೆ ಪ್ರಯೋಗಿಸುವುದು ಡಾಟಿಂಗ್ ಆಗಿದೆ.

ಈ ಡಾಟಿಂಗ್ ಪ್ರಕ್ರೀಯೆಗೆ ಕ್ಜೈಲೋಜಿನ್ ಹೈಡ್ರೋ ಕ್ಲೋರೈಡ್ (Xylozine hydro chloride) ಹಾಗು ಕೆಟಾಮೈನ್ ಹೈಡ್ರೋ ಕ್ಲೋರೈಡ್(Catamine hydrochloride)ಎಂಬ ಡೋಸೆಜ್ ಅನ್ನು ಅರವಳಿಕೆಯನ್ನಾಗಿ ಪ್ರಯೋಗಿಸಲಾಗುತ್ತದೆ.

ಒಂದು ಆನೆಗೆ ಒಂದವರೆಯಿಂದ ಎರಡು ಎಂಎಲ್ ಡೋಸೇಜ್ ಅರವಳಿಕೆ ಮದ್ದನ್ನು, ಬಂದೂಕಿನ ಮೂಲಕ ಆನೆಗೆ ಪ್ರಯೋಗಿಸಿದಾಗ ,ಆನೆಯೂ ಪ್ರಜ್ಞೆ ತಪ್ಪಲು ಸುಮಾರು 45 ನಿಮಿಷವಾದರೂ ಬೇಕಾಗುತ್ತದೆ.

ಆ 45 ನಿಮಿಷ ಅದು ಮತ್ತಿನಲ್ಲಿಯೇ ದಿಕ್ಕುಕಾಣದೆ ಓಡಲು ಪ್ರಯತ್ನಿಸುತ್ತದೆ.45 ನಿಮಿಷದಲ್ಲಿ ಅದು 3 ರಿಂದ ನಾಲ್ಕು ಕಿಲೋಮೀಟರ್ ದೂರವನ್ನಾದರೂ ಕ್ರಮಿಸಿ,ನಂತರ ಪ್ರಜ್ಞೆತಪ್ಪಿ ಬೀಳಬಹುದು.ನಂತರ ಅದರ ಎಫೆಕ್ಟ್ ಕೂಡ 40 ರಿಂದ 50 ನಿಮಿಷ ಅದು ಪ್ರಜ್ಞೆತಪ್ಪಿದ ವ್ಯವಸ್ಥೆಯಲ್ಲಿ ಮಲಗಿರುತ್ತದೆ.

ಆನೆ ಸೆರೆಹಿಡಿಯಲು ಬಂದಿದೆ ಹೊಸ ಅರವಳಿಕೆ ಮದ್ದು,
ಎರಡು ಎಂಲ್ ಗೆ ಕ್ಷಣಾರ್ದದಲ್ಲಿ ಪ್ರಜ್ಞೆ ತಪ್ಪಿಸುತ್ತದೆ ವಂಡರ್ ಡ್ರಗ್.

ಈ ಹಿಂದೆ ಹಾಸನ ಮತ್ತು ಉಬ್ರಾಣಿಯಲ್ಲಿ ಕಾಡಾನೆಗಳನ್ನು ಸೆರೆಹಿಡಿಯಲು ಕ್ಲೈಲೋಜಿನ್ ಹೈಡ್ರೋಕ್ಲೋರೈಡ್ ಅರವಳಿಕೆ ಮದ್ದನ್ನು ನೀಡಲಾಗುತ್ತಿತ್ತು.ಆದರೆ ಈಗ ಆನೆಗಳನ್ನು ಸೆರೆಹಿಡಿಯಲು ಅತ್ಯಾಧುನಿಕ ನಾರ್ಕೋಟಿಕ್ ಅರವಳಿಕೆ ಮದ್ದು ಲಭ್ಯವಾಗಿದೆ.

ಎಟರೋಪಿನ್ ಹೈಡ್ರೋಕ್ಲೋರೈಡ್(Etorophine HCL) ಅನ್ನೋ ಅರವಳಿಕೆ ಮದ್ದನ್ನು ಕೇಂದ್ರ ಅರಣ್ಯ ಇಲಾಖೆ ಆಪ್ರಿಕಾ ದೇಶದಿಂದ ಆಮದು ಮಾಡಿಕೊಂಡಿದೆ.ಕೇಂದ್ರ ಸರ್ಕಾರದ ಪರವಾನಿಗೆ ಮೇರೆಗೆ ಈ ಔಷಧಿ ಕೇವಲ ಅರಣ್ಯ ಇಲಾಖೆಗೆ ಲಭ್ಯವಾಗಿದೆ

.ಸದ್ಯಕ್ಕೆ ಈ ಔಷದಿ ಮೈಸೂರು ಮೃಗಾಲಯ ಪ್ರಾಧಿಕಾರದ ಬಳಿಯಿರುವುದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಎಟರೋಪಿನ್ ಅರವಳಿಕೆಯ ಒಂದುವರೆಯಿಂದ ಎರಡು ಎಂಎಲ್ ಔಷಧಿಯನ್ನು ಕಾರ್ಯಚಾರಣೆಯ ಗುರಿ ಹೊಂದಿರುವ ಆನೆಯ ದೇಹದ ಮೇಲೆ ಡಾಟ್ ಮಾಡಿದರೆ ಆನೆ ಕೇವಲ ಎರಡರಿಂದ ಮೂರು ನಿಮಿಷದಲ್ಲಿ ಪ್ರಜ್ಞೆ ತಪ್ಪುತ್ತದೆ.

ಈ ಸಂದರ್ಭದಲ್ಲಿ ಆನೆ ಮತ್ತಿನಲ್ಲಿ ನೂರು ಮೀಟರ್ ದಾಟುವುದು ಕೂಟ ಕಷ್ಟಸಾಧ್ಯವಾಗುತ್ತದೆ.ನಂತರ ಆನೆಯನ್ನು ಹಗ್ಗಕಟ್ಟಿ ಬಂಧಿಸಿ ಕರೆತರಬಹುದು.

ಈ ಹಿಂದಿನ ಔಷಧಿಗಳನ್ನು ಹೋಲಿಸಿದರೆ ನೂರು ಪಟ್ಟು ಸ್ಟ್ರಾಂಗ್ ಈ ಎಟರೋಪಿನ್ ಹೈಡ್ರೋಕ್ಲೊರೈಡ್.ಇದನ್ನು ವಂಡರ್ ಡ್ರಗ್ ಎಂದು ಕರೆಯುತ್ತಾರೆ.

ವಂಡರ್​ ಡ್ರಗ್​ನ ರೇಟ್ ಎಷ್ಟು ಗೊತ್ತಾ?

ಎಟರೋಪಿನ್ ಹೈಡ್ರೊಕ್ಲೊರೈಡ್ ಎಂಬುದು ನಾರ್ಕೋಟಿಕ್ ಡ್ರಗ್ ಸಾಲಿಗೆ ಸೇರಿದ ಔಷಧಿ.ಕೇವಲ ಎರಡು ಎಂಎಲ್ ನಷ್ಟು ಮದ್ದು ಒಂದು ಆನೆಯನ್ನು ಪ್ರಜ್ಞಾವಸ್ಥೆಗೆ ತಳ್ಳುತ್ತದೆ ಎಂದರೆ ಅದು ಎಷ್ಟು ಪರಿಣಾಮಕಾರಿ ಎಂಬುದು ಅರ್ಥವಾಗುತ್ತದೆ

.ಹೀಗಾಗಿ ಈ ಅರವಳಿಕೆಯನ್ನು ಕಾರ್ಯಾಚರಣೆಯ ಸಂದರ್ಭದಲ್ಲಿ ಮಾತ್ರ ಉಪಯೋಗಿಸಲಾಗುತ್ತದೆ.ಐದು ಎಂಎಲ್ ವೈಯಲ್ ಗೆ ಒಂದು ಲಕ್ಷಕ್ಕೂ ಅಧಿಕ ಬೆಲೆಯಿರುವ ಈ ಅರವಳಿಕೆ ಮದ್ದಿನಲ್ಲಿ ಒಂದು ಎಂಎಲ್ ದುರುಪಯೋಗ ಪಡಿಸಿಕೊಂಡರೂ..ಅದನ್ನು ಬೇರೆ ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದಾದ ಸಾದ್ಯತೆಗಳು ಹೆಚ್ಚಿರುತ್ತದೆ.

ಹೀಗಾಗಿ ವನ್ಯಜೀವಿ ವೈದ್ಯರು ಡಾಟ್ ಮಾಡುವಾಗ ಇದನ್ನು ಸೂಕ್ಷ್ಮವಾಗಿ ಪ್ರಯೋಗಿಸುತ್ತಾರೆ.ಇದರ ಒಂದು ಹನಿ ದೇಹದ ಮೇಲೆ ಬಿದ್ದರೂ..ಅದರ ಪರಿಣಾಮ ಊಹಿಸಿಕೊಳ್ಳಲು ಸಾಧ್ಯವಿಲ್ಲ.

ಕಣ್ಣು ಶಾಶ್ವತವಾಗಿ ಕುರುಡಾಗುವ ಸಾಧ್ಯತೆಗಳಿವೆ.ಆನೆಯ ದೇಹದ ತೂಕವನ್ನು ಪರಿಗಣಿಸಿ ಇದನ್ನು ಪ್ರಯೋಗಿಸಲಾಗುತ್ತದೆ.

ರಾಮನಗರದ ಆನೆ ಕಾರ್ಯಾಚರಣೆಯಲ್ಲಿ ಇದೇ ಎಟರೋಪಿನ್ ಹೈಡ್ರೋಕ್ಲೋರೈಡ್ ಅರವಳಿಕೆಯನ್ನು ಡಾಟ್ ಮಾಡುವಾಗ ನೀಡಲಾಗಿತ್ತು.ಈಗ ಆಗುಂಬೆ ಉಂಭ್ಳೆಬೈಲು ನಲ್ಲಿ ಬೀಡುಬಿಟ್ಟಿರುವ ಕಾಡಾನೆಯನ್ನು ಸೆರೆಹಿಡಿಯಲು ಈ ಎಟರೋಪಿನ್ ಅರವಳಿಕೆ ಸಹಕಾರಿಯಾಗುತ್ತದೆ.

ಇಷ್ಟುದಿನ ಅರಣ್ಯ ಇಲಾಖೆ ಅಧಿಕಾರಿಗಳು,ಆನೆ ಸೆರೆಹಿಡಿಯಲು ಪ್ರಜ್ಞಾವಸ್ಥೆ ವಿಳಂಬವಾಗುವುದರಿಂದ ದುರ್ಗಮ ಕಾಡಿನಲ್ಲಿ ಸೆರೆಹಿಡಿಯುವ ಮನಸ್ಸು ಮಾಡುತ್ತಿರಲಿಲ್ಲ. ಟ್ರಾನ್ಸ್ ಪೋರ್ಟ್ ಸಮಸ್ಯೆ ಕಾಡುತ್ತಿತ್ತು.

ಈಗ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಎಟರೋಪಿನ್ ಅರವಳಿಕೆ ಲಭ್ಯವಿರುವುದರಿಂದ ರಾಜ್ಯದಲ್ಲಿನ ಆನೆ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಬಳಸಲಾಗುತ್ತಿದೆ.

ಡಾಟಿಂಗ್​ ಪ್ರಕ್ರಿಯೇ ಹೇಗಿರುತ್ತೆ ಅನ್ನೋದನ್ನ ನೋಡಲು ಈ ವಿಡಿಯೋಗಳನ್ನು ನೋಡಿ