ಕೂದಲೆಳೆ ಅಂತರ ಅಂದರೆ ಎಷ್ಟು ತೋರಿಸಿದ ಕರಡಿ ಕಾಡಾನೆ! ಜೀವ ಉಳಿಸಿಕೊಂಡು ಕಾರಡಿ ಅಡಗಿದ ಕಾರ್ಮಿಕ! ವಿಡಿಯೋ ಸ್ಟೋರಿ
Video of labourer escaping wild elephant attack in Hassan's Sakleshpur

Shivamogga Mar 4, 2024 ಹಾಸನ ಜಿಲ್ಲೆಯಲ್ಲ್ಲೊಬ್ಬ ಕಾರ್ಮಿಕ ಕಾಡಾನೆಯಿಂದ ಜಸ್ಟ್ ಬಚಾವ್ ಆದ ಘಟನೆಯೊಂದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೆಲವೇ ಸೆಕೆಂಡ್ಗಳ ಅಂತರದಲ್ಲಿ ತನ್ನ ಜೀವ ಉಳಿಸಿಕೊಂಡ ಬಡ ಕಾರ್ಮಿಕ ಕಾರೊಂದರ ಅಡಿಯಲ್ಲಿ ಹೋಗಿ ಅಡಗಿ ಕುಳಿತು ಜೀವ ಉಳಿಸಿಕೊಂಡಿದ್ದಾನೆ. ಇದಕ್ಕೂ ಮೊದಲು ಒಬ್ಬಾತ ಕಾಡಾನೆಯನ್ನ ನೋಡುತ್ತಲೇ ದಿಕ್ಕಾಪಾಲಾಗಿ ಓಡಿದ್ದಾನೆ. ಆ ಬಳಿಕ ಬಂದು ಇನ್ನೊಬ್ಬ ಕಾರ್ಮಿಕನನ್ನ ಉಳಿಸಲು ಹುಡುಕಾಡಿದ್ದಾನೆ. ಬಳಿಕ ಇಬ್ಬರು ಮನೆಯ ಬೀಗ ತೆಗೆದು ಅದರೊಳಗೆ ಹೋಗಿ ಜೀವ ಉಳಿಸಿಕೊಂಡಿದ್ದಾರೆ. ಇದಿಷ್ಟು ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.
ಹಾಸನದಲ್ಲಿ ಕಾಡಾನೆ ಯೊಂದರ ಉಪಟಳ ವಿಪರೀತವಾಗಿದೆ.ಮನುಷ್ಯರ ಕಂಡರೆ ಸಾಕು ಅಟ್ಟಿಸಿಕೊಂಡು ಬರುತ್ತಿರುವ ಕಾಡಾನೆಗೆ ಇಲ್ಲಿ ಕರಡಿ ಕಾಡಾನೆ ಎಂದು ಹೆಸರಿಟ್ಟು ಸ್ಥಳೀಯರು ಕರೆಯುತ್ತಿದ್ದಾರೆ. ಈ ಕಾಡಾನೆಯು ಕಳೆದ ಜನವರಿ 4 ರಂದು ಬೇಲೂರು ತಾಲ್ಲೂಕಿನ, ಮತ್ತಾವರದಲ್ಲಿ ವಂಸತ್ ಎಂಬುವವರನ್ನು ಬಲಿ ಪಡೆದಿತ್ತು.
ಹದಿನೈದು ದಿನಗಳ ಹಿಂದೆ ಹೆಬ್ಬನಹಳ್ಳಿಯಲ್ಲಿ ಮೂವರ ಮೇಲೆ ದಾಳಿ ಮಾಡಿತ್ತು. ಇದೀಗ ಮತ್ತೊಂದು ಕಡೆಯಲ್ಲಿ ದಾಳಿ ನಡೆಸಿದೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಆನೆ ಬರುತ್ತಿರುವ ಸುಳಿವು ಸಹ ಸಿಕ್ಕಿರಲಿಲ್ಲ. ಆಕಸ್ಮಿಕವಾಗಿ ತಿರುಗಿ ನೋಡಿದಾಗ ಎದುರುಗಡೆ ಭೀಮಗಾತ್ರದ ಕಾಡಾನೆ ಘೀಳಿಟ್ಟುಕೊಂಡು ಬರಲು ಆರಂಭಿಸಿದೆ. ಆನೆ ಬರುವ ದಿಕ್ಕಿಗೆ ಅಡ್ಡಲಾಗಿ ಓಡಿದ ಕಾರ್ಮಿಕನನ್ನ ಕಾಡಾನೆ ಬೆನ್ನಟ್ಟಿ ಬಂದು ಸೊಂಡಿಲಿಂದ ಹಿಡಿಯಲು ನೋಡಿದೆ. ಕೂದಲೆಳೆಯ ಅಂತರ ಅಂದರೆ ಎಷ್ಟಿರಬಹುದು ಎಂಬುದನ್ನ ತೋರಿಸುವಂತೆ ಸಿಸಿ ಕ್ಯಾಮರಾ ದಲ್ಲಿ ದೃಶ್ಯ ಸೆರೆಯಾಗಿದೆ. ‘ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಕೆಸಗುಲಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ಘಟನೆ ನಡೆದಿದೆ. ಘಟನೆಯಲ್ಲಿ ಪಿಂಟು ಎಸ್ಟೇಟ್‌ನ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕೂಲಿ ಕಾರ್ಮಿಕರು ಸ್ವಲ್ಪದರಲ್ಲಿಯೇ ಪಾರಾಗಿದ್ದಾರೆ.