ಕಾಡಾನೆ ಕಾರ್ಯಾಚರಣೆ! ಸಾವು ನೋವಿಗೆ ಕಾರಣ ಏನು ಗೊತ್ತಾ? SOP ಪಾಲಿಸ್ತಿಲ್ಲ ಏಕೆ! JP ಬರೆಯುತ್ತಾರೆ

SHIVAMOGGA |   Dec 7, 2023 |  ಅವೈಜ್ಞಾನಿಕ  ಕಾರ್ಯಾಚರಣೆಯಿಂದ ಕಾಡಾನೆಗಳು ಸಾಯುತ್ತಿವೆ. ಬಿಡಾರದ ಆನೆಗಳು ಸಾಯುತ್ತಿವೆ…ಸಿಬ್ಬಂದಿಗಳು ಕೂಡ ಸಾಯುತ್ತಿದ್ದಾರೆ…ಆನೆ ಕಾರ್ಯಾಚರಣೆಯ ಎಸ್.ಓ.ಪಿ ಮಾರ್ಗಸೂಚಿಯನ್ನು ಅಧಿಕಾರಿಗಳು ಅನುಸರಿಸುತ್ತಿಲ್ಲ ಏಕೆ? ಜೆಪಿ ಬರೆಯುತ್ತಾರೆ.

 ಎಸ್.ಓ.ಪಿ ಮಾರ್ಗಸೂಚಿ

ಆನೆಗಳ ಮೇಲೆ ಕೆಲಸ ಮಾಡುವುದು ಒಂದು ಸಾಂಪ್ರಾದಾಯಿಕ ಕಲೆ. ಇಲ್ಲಿ ವೈಜ್ಞಾನಿಕ ಪದ್ಧತಿಗಳು ಅಷ್ಟು ಹೆಚ್ಚಾಗಿ ಕೆಲಸಕ್ಕೆ ಬರುವುದಿಲ್ಲ. ಆನೆ ಹುಟ್ಟಿನಿಂದ ಸಾಯುವವರಿಗೆ ಮಾವುತ ಆನೆಯ ನಡುವೆ ಕೊಂಡಿಯಾಗಿ ಉಳಿಯುವುದು ಪ್ರೀತಿ ವಿಶ್ಸಾಸ ಮಾತ್ರ. ಅದರಲ್ಲೂ ಕಾಡಾನೆ ಹಿಮ್ಮೆಟ್ಟಿಸುವ ಅಥವ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಸೈಟಿಂಫಿಕ್ ಮೆತೆಡ್​ಗಳು ಕೆಲಸ ಮಾಡುವುದಿಲ್ಲ.

READ : ಭಯಂಕರ ಮಾರೆಽ! ನಾಟಗಳನ್ನ ಹೀಗೂ ಸಾಗಿಸ್ತಾರಾ? ಎಂತಾರು ಆದ್ರೆ ಎಂಥಾ ಕಥೆ? PEOPLE TODAY

ಆನೆಗಳ ಸಂರಕ್ಷಣೆ

ಕೇವಲ ಡಾರ್ಟ್ ಮಾಡುವುದನ್ನು ಹೊರತು ಪಡಿಸಿದರೆ ಉಳಿದೆಲ್ಲಾ ಕೆಲಸ ಕಾರ್ಯಗಳು ಸಾಂಪ್ರಾದಾಯಿಕ ಬದ್ಧವಾಗಿಯೇ ನಡೆಯಬೇಕು. ಆದರೆ ಇಲ್ಲಿ ಹಿರಿಯ ಅರಣ್ಯಾಧಿಕಾರಿಗಳು ಕೇವಲ ಎನ್.ಜಿ ಓ ಎಕ್ಸ್ ಪರ್ಟ್ ಪ್ರಾಣಿ ಪ್ರೀಯರ ಮಾಹಿತಿ ಕೇಳಿ ಎಸ್.ಓ.ಪಿ ಯನ್ನು ಮಾಡಿದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ. ಈಗಾಗಲೇ ರಾಜ್ಯದಲ್ಲಿ ಹೆಚ್ಚುತ್ತಿರುವ ಕಾಡಾನೆ ಹಾಗು ಸಾಕಾನೆಗಳ ಸಾವಿನಿಂದ ಎಚ್ಚೆತ್ತಿರುವ ಅರಣ್ಯ ಭವನ ಈಗ ಆನೆಗಳ ಸಂರಕ್ಷಣೆಗಾಗಿ ಟೊಂಕಕಟ್ಟಿ ನಿಂತಿದೆ. ಅರಣ್ಯ ಮಂತ್ರಿಗಳು ಕೂಡ ಆನೆಗಳ ಜೀವಭದ್ರತೆ ಸಂಬಂಧ ಫರ್ಮಾನು ಹೊರಡಿಸಿದ್ದಾರೆ..ಇದೆಲ್ಲಾ ಜನರನ್ನು ಕಣ್ಣೊರೆಸುವ ತಂತ್ರದ ಭಾಗವಾಗಿದೆ. 

ನೇಚರ ಟ್ರಸ್ಟ್ ನ ವೈಲ್ಡ್  ಟಸ್ಕರ್​

ರಾಜ್ಯದ ಬಿಡಾರದ ಆನೆಗಳ ಬಗ್ಗೆ ಸಾಂಪ್ರಾದಾಯಿಕ ಅಧ್ಯಯನ ನಡೆಸುತ್ತಿರುವ ನೇಚರ ಟ್ರಸ್ಟ್ ನ ವೈಲ್ಡ್ ಟಸ್ಕರ್​ ಸಂಸ್ಥೆ ಕೆಲವು ಮಹತ್ವದ ಸಂಗತಿಗಳನ್ನು ಕಲೆ ಹಾಕಿದೆ. ಆನೆ ಕಾರ್ಯಚರಣೆಯಲ್ಲಿ ಮಹತ್ವದ ಬದಲಾವಣೆಗಳು ಆಗಬೇಕಾದ ತುರ್ತು ಈಗ ಎದುರಾಗಿದೆ.  ಆನೆ ಕಾರ್ಯಾಚರಣೆಯಲ್ಲಿ ಅರಣ್ಯಾಧಿಕಾರಿಗಳು ಸಿಬ್ಬಂದಿಗಳು ಡಾರ್ಟ್ ಎಕ್ಸ್ ಪರ್ಟ್, ಟ್ರಾಕರ್ಸ್​,, ಮಾವುತ, ಕಾವಾಡಿಗಳ ತಂಡ  ಸಮೂಹವಾಗಿ ಕಾರ್ಯಾಚರಣೆ ಮಾಡುತ್ತದೆ. ಆದರೆ ಈ ತಂಡಗಳಲ್ಲಿ ನುರಿತ ಮಾವುತ ಜಮೇದಾರ್ ಗಳ ಕೊರತೆ ಎದ್ದು ಕಾಣುತ್ತಿದೆ.

ರಾತ್ರಿ ವೇಳೆ ಕಾರ್ಯಾಚರಣೆ ಮಾಡುವುದೇ ತಪ್ಪು

ಆನೆ ಕಾರ್ಯಾಚರಣೆಯಲ್ಲಿ ಮಾರ್ಗಸೂಚಿಗಳನ್ನು ಈಗಿನ ಅಧಿಕಾರಿ ಸಿಬ್ಬಂದಿಗಳು ಸರಿಯಾಗಿ ಪಾಲಿಸುತ್ತಿಲ್ಲ. ಆನೆ ಕಾರ್ಯಾಚರಣೆಯಲ್ಲಿ ಪ್ರಮುಖವಾಗಿ ರಾತ್ರಿ ಸಂದರ್ಭದಲ್ಲಿ ಕಾರ್ಚಾಚರಣೆಯನ್ನೇ ಕೈಗೊಳ್ಳುವಂತಿಲ್ಲ. ಆದರೆ ಇತ್ತಿಚ್ಚೆಗೆ ಮೂಡಿಗೆರೆಯಲ್ಲಿ ಸೆರೆಹಿಡಿದು ಸಕ್ರೆಬೈಲು ಕ್ಯಾಂಪ್ ಗೆ ಸ್ಥಳಾಂತರಿಸಿದ ಕಾಡಾನೆಯನ್ನು ರಾತ್ರಿ ವೇಳೆ ಕಾರ್ಚಾಚರಣೆಯಲ್ಲಿ ಸೆರೆ ಹಿಡಿಯಲಾಗಿದೆ. 

ನುರಿತ ಡಾರ್ಟ್ ಎಕ್ಸ್ ಪರ್ಟ್ ಗಳು ಬೇಕು

ಈಗ ರಾಜ್ಯದಲ್ಲಿ ಕೇವಲ ನಾಲ್ಕು ಮಂದಿ ವನ್ಯಜೀವಿ ವೈದ್ಯ ಡಾರ್ಟ್ ಎಕ್ಸ್ ಪರ್ಟ್ ಗಳಿದ್ದಾರೆ. ಇನ್ನು ಡಾರ್ಟ್ ಮಾಡುವ ವೈದ್ಯರು ಹಾಗು ತಜ್ಞರ ಕೊರತೆ ಇದೆ. ಕಾಡಾನೆಯ ಗಾತ್ರ ಹಾಗು ತೂಕವನ್ನು ಕಣ್ಣಳತೆಯಲ್ಲಿಯೇ ತೂಗಿ ಇಂತಿಷ್ಟೇ ಎಂಎಲ್ ಅರವಳಿಕೆ ಮದ್ದು ಪ್ರಯೋಗಿಸುವ ತಜ್ಞರ ಅವಶ್ಯಕತೆಯಿದೆ. ಅಲ್ಲಿ ಡಾರ್ಟ್ ಮಾಡುವಾಗ ಕಡಿಮೆ ಅಥವಾ ಹೆಚ್ಚು ಅರವಳಿಕೆ ಮದ್ಧು ನೀಡಿದ್ರೂ ಅಪಾಯ ತಪ್ಪಿದ್ದಲ್ಲ.

ಸ್ಟ್ಯಾಂಡರ್ಡ್ ಆಪರೇಷನ್ ಪ್ರೊಸಿಜರ್ ಫಾಲೋ ಆಗ್ತಿಲ್ಲ

ಅದೇ ಮೂಡಿಗೆರೆಯಲ್ಲಿ ರಾತ್ರಿ ವೇಳೆ ಕಾಡಾನೆ ಡಾರ್ಟ್ ಮಾಡುವಾಗ ಅದು ಗುಡ್ಡದಿಂದ ಕುಸಿದು ಸಾವನ್ನಪ್ಪಿತ್ತು. ಅಲ್ಲದೆ ಓವರ್ ಡೋಸ್ ಅರವಳಿಕೆ ನೀಡಲಾಗಿತ್ತು ಎಂಬ ಆರೋಪವಿದೆ .ಆದರೆ ಪ್ರಪ್ರಥಮವಾಗಿ ಅಧಿಕಾರಿಗಳು ರಾತ್ರಿ ವೇಳೆ ಕಾರ್ಯಾಚರಣೆಯನ್ನು ಮಾಡುವುದೇ ತಪ್ಪು., ಇದ್ದು ಸ್ಟಾಡರ್ಟ್ ಆಪರೇಷನ್ ಪ್ರೊಸಿಜರ್ ನ ವಿರುದ್ಧವಾಗಿದೆ. 

ನಿವೃತ್ತ ಮಾವುತ ಕಾವಾಡಿ ಜಮೇದಾರಗಳ ಬಳಕೆ ಅನಿವಾರ್ಯ-ವೈಲ್ಡ್ ಟಸ್ಕರ್ ಸಂಸ್ಥೆ ಆಗ್ರಹ 

ಆನೆಗಳ ಕಾರ್ಯಾಚರಣೆಯಲ್ಲಿ ಅನುಭವ ಹೊಂದಿರುವ ಜಮೇದಾರ್ ಮಾವುತ ಕಾವಾಡಿಗಳಲ್ಲಿ ಬಹಳಷ್ಟು ಮಂದಿ ನಿವೃತ್ತಿಯಾಗಿದ್ದಾರೆ. ಇವರುಗಳ ಅನುಭವ ಅವರ ನಿವೃತ್ತಿಯಲ್ಲಿಯೇ ಅಳಿಸಿ ಹೋಗುತ್ತಿದೆ. ಇಂತಹ ಮಾವುತರ ಅನುಭವ ತಿಳುವಳಿಕೆ ಪ್ರಸ್ಥುತ ದಿನಮಾನಗಳಲ್ಲಿ ಅತ್ಯಗತ್ಯವಾಗಿದೆ. 

ಅಂತಹ ನಿವೃತ್ತ ಮಾವುತ ಕಾವಾಡಿಗಳ ಅನುಭವವನ್ನು ಕಾರ್ಯಾಚರಣೆಯಲ್ಲಿ ಬಳಸಿಕೊಂಡರೆ, ಸಾಂಪ್ರಾದಾಯಿಕವಾಗಿ ಸೆರೆ ಹಿಡಿಯುವ ಪದ್ಧತಿಗೆ ಮೆರಗು ನೀಡಿದಂತಾಗುತ್ತದೆ. ಕೇವಲ ಎನ್. ಜಿ. ಓ ತಜ್ಞರ ಸಲಹೆ ಪಡೆದು, ಆನೆ ಕಾರ್ಯಾಚರಣೆಯ ಎಸ್.ಓ. ಪಿ ಮಾಡದರೆ ಅದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ.

 ಬಿಡಾರದ ಸಾಕಾನೆಯನ್ನು ಬಿಟ್ಟು ಕಾಡಾನೆಯನ್ನು ಆಕರ್ಷಿಸುವಂತೆ ಮಾಡಿ, ಡಾರ್ಟ್ ಮಾಡಿದ ಸಣ್ಣ ಉದಾಹರಣೆ ಹಿರಿಯ ಮಾವುತರ ಅದ್ಬುತ ಅನುಭವಕ್ಕೆ ಹಿಡಿದ ಕೈ ಗನ್ನಡಿಯಾಗಿದೆ. ಇನ್ನಾದರೂ, ಆನೆ ಕಾರ್ಯಾಚರಣೆ ಇಂತಹ ನಿವೃತ್ತ ಅನುಭವಿ ಮಾವುತ ಜಮೇದಾರ್ ಗಳ ಮಾರ್ಗದರ್ಶನದಲ್ಲಿ ಕೂಡ ಸಾಗಲಿ ಎಂದು ವೈಲ್ಡ್ ಟಸ್ಕರ್ ಸಂಸ್ಥೆ ಆಗ್ರಹಿಸುತ್ತದೆ.

 

Leave a Comment