ಭಯಂಕರ ಮಾರೆಽ! ನಾಟಗಳನ್ನ ಹೀಗೂ ಸಾಗಿಸ್ತಾರಾ? ಎಂತಾರು ಆದ್ರೆ ಎಂಥಾ ಕಥೆ? PEOPLE TODAY

Malenadu Today

SHIVAMOGGA |   Dec 7, 2023 |   ಶಿವಮೊಗ್ಗ ಜಿಲ್ಲೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಮರದ ದಿಮ್ಮಿಗಳನ್ನ ಸಾಗಿಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಮರದ ದಿಮ್ಮಿಗಳನ್ನ ಸುರಕ್ಷಿತವಾಗಿ ಸಾಗಿಸುವುದಕ್ಕೂ ಸಾಕಷ್ಟು ನಿಯಮಗಳಿವೆ. 

ಸಾರಿಗೆ ವ್ಯವಸ್ಥೆಯಲ್ಲಿ ನಿರ್ಧಿಷ್ಟ ವಸ್ತುಗಳನ್ನು ಇಂತದ್ದೆ ವಾಹನಗಳಲ್ಲಿ ಸಾಗಿಸಬೇಕೆಂಬ ನಿಯಮವಿದೆ. ಆದರೆ ಆ ನಿಯಮಾವಳಿಗಳು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಪಾಲಿಸಲಾಗುತ್ತಿಲ್ಲ ಎಂಬುದು ತೀರ್ಥಹಳ್ಳಿ ಭಾಗದ ಜನರ ದೂರು 

READ : ಶಿರಾಳಕೊಪ್ಪ, ಆನಂದಪುರ ಅಡಿಕೆ ಕಳ್ಳತನ ಕೇಸ್! ಉತ್ತರ ಕನ್ನಡದ ಭಟ್ಕಳ ಮೂಲದ ಮೂವರು ಅರೆಸ್ಟ್!

ಇದಕ್ಕೆ ಸಾಕ್ಷಿ ಎಂಬಂತೆ ದೊಡ್ಡ ಮರದ ದಿಮ್ಮಿಗಳನ್ನು ಗುತ್ತಿಗೆ ಪಡೆದಿರುವವರು ಎಲ್ ಪಿ ಲಾರಿಗಳಲ್ಲಿ ಮರಗಳನ್ನು ಸುರಕ್ಷಿತವಾಗಿ ಸಾಗಿಸುವುದನ್ನು ಬಿಟ್ಟು ಟಿಪ್ಪರ್ ಲಾರಿಗಳಲ್ಲಿ ದಿಮ್ಮಿಗಳನ್ನು ಅಸುರಕ್ಷಿತವಾಗಿ ಸಾಗಿಸುತ್ತಿದ್ದಾರೆ.  ತೀರ್ಥಹಳ್ಳಿ ಯಿಂದ ಮೆಗರವಳ್ಳಿಗೆ ಸಾಗಾಣಿಕೆಯಾಗುತ್ತಿರುವ ದೊಡ್ಡ ಮರದ ತುಂಡುಗಳನ್ನು ಟಿಪ್ಪರ್ ಲಾರಿಯಲ್ಲಿ ಸಾಗಿಸಲಾಗುತ್ತಿದೆ. 

ಅತಿಯಾದ ತೂಕವನ್ನ ಹೊರುವ ಲಾರಿ ಎಲ್ಲಿ ಮಗುಚಿ ಬೀಳುತ್ತೋ ಎಂಬಂತೆಯೇ ದಾರಿಯಲ್ಲಿ ಸಾಗುತ್ತದೆ. ಇನ್ನೂ ದಿಮ್ಮಿಗಳಿಗೆ ಕಟ್ಟಿರುವ ಹಗ್ಗವೇ ಅರ್ದ ಭಯಹುಟ್ಟಿಸುತ್ತದೆ ಎನ್ನುತ್ತಾರೆ ತೀರ್ಥಹಳ್ಳಿಯ ವಾಹನಸವಾರರೊಬ್ಬರು.ಹೀಗೆ ಅಪಾಯಕಾರಿ ಸ್ಥಿತಿಯಲ್ಲಿ ಮರ ಸಾಗಿಸಲು ಅನುಮತಿ ಹೇಗೆ ಕೊಡುತ್ತಾರೆ..ಜಿಲ್ಲಾಡಳಿತವೆ ಇಂತಹದ್ದನ್ನ ಗಮನಿಸಿ ಅಪಾಯ ತಪ್ಪಿಸಬೇಕು ಎಂಬುದು ಸ್ಥಳೀಯರ ಆಗ್ರಹ

 

Share This Article