SHIVAMOGGA | Dec 7, 2023 | ಶಿರಾಳಕೊಪ್ಪ ಮತ್ತು ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಡಕೆ ಕಳವು ಮಾಡಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ..
ಈ ಸಂಬಂಧ ಉತ್ತರ ಕನ್ನಡ ಜಿಲ್ಲೆಯ ಮೂವರನ್ನು ಬಂಧಿಸಿದ್ದಾರೆ. ಅಲ್ಲದೆ ಬಂಧಿತರಿಂದ 941586 ಮೌಲ್ಯದ ಅಡಿಕೆ ಹಾಗೂ ವಾಹನವನ್ನ ರಿಕವರಿ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಅಬ್ರಾರ್ ಶೇಖ್ (21), ಇಮ್ರಾನ್ (20) ಮತ್ತು ಅಬ್ದುಲ್ ವಾಹೀದ್ ತಾರ್(22) ಬಂಧಿತರು
ಶಿರಾಳಕೊಪ್ಪ ಪೊಲೀಸ್ ಸ್ಟೇಷನ್
ಕಳೆದ ನವೆಂಬರ್ 17ರಂದು ರಾತ್ರಿ ಶಿರಾಳಕೊಪ್ಪ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಬಳ್ಳಿಗಾವಿ ಗ್ರಾಮದ ರಮೇಶ್ ಎಂಬುವರ ಮನೆ ಮುಂದಿನ ಕಟ್ಟೆ ಮೇಲಿರಿಸಿದ್ದ 1.45 ಲಕ್ಷ ರೂ. ಮೌಲ್ಯದ 3.50 ಕ್ವಿಂಟಾಲ್ ಒಣ ಅಡಕೆ ಕಳವಾಗಿತ್ತು. ಈ ಬಗ್ಗೆ ರಮೇಶ್ ಅವರು ಪೊಲೀಸರಿಗೆ ದೂರು ನೀಡಿದ್ದರು.
READ : ವಾಹನ ಸವಾರರೇ ಎಚ್ಚರ! ಮೂವರಿಗೆ 23 ಸಾವಿರ ರೂಪಾಯಿ ದಂಡ ವಿಧಿಸಿದ ಕೋರ್ಟ್!
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶಿಕಾರಿಪುರ ಡಿವೈಎಸ್ಪಿ ಶಿವಾನಂದ ಮದರಖಂಡಿ ಮತ್ತು ಶಿಕಾರಿಪುರ ಟೌನ್ ಸಿಪಿಐ ರುದ್ರೇಶ್ ಮೇಲ್ವಿಚಾರಣೆಯಲ್ಲಿ ಶಿರಾಳಕೊಪ್ಪ ಪಿಎಸ್‌ಐ ಮಂಜುನಾಥ್ ಎಸ್. ಕುರಿ ನೇತೃತ್ವದಲ್ಲಿ ಸಿಬ್ಬಂದಿ ಸಂತೋಷ್, ಸಲ್ಮಾನ್ ಖಾನ್, ಕಾರ್ತಿಕ್, ಅಶೋಕ್ ನಾಯ್, ನಾಗರಾಜ, ತಾಂತ್ರಿಕ ವಿಭಾಗದ ಗುರುರಾಜ್, ಇಂದ್ರೇಶ್, ವಿಜಯ್ ಅವರನ್ನೊಳಗೊಂಡ ತನಿಖಾ ತಂಡ ಕಾರ್ಯಾಚರಣೆ ನಡೆಸಿ ಬುಧವಾರ ಆರೋಪಿಗಳನ್ನು ಬಂಧಿಸಿದೆ.
ಆರೋಪಿಗಳು ಶಿರಾಳಕೊಪ್ಪ ಮತ್ತು ಆನಂದಪುರ ಪೊಲೀಸ್ ಠಾಣೆಯ ಪ್ರತ್ಯೇಕ ಎರಡು ಅಡಕೆ ಕಳ್ಳತನದಲ್ಲಿ ಭಾಗಿಯಾಗಿದ್ದು, 2,41,586 ಮೌಲ್ಯದ ಅಡಕೆ ಮತ್ತು 7 ಲಕ್ಷ ರೂ. ಮೌಲ್ಯದ ಬುಲೇರೋ ಕಾರನ್ನು ಜಪ್ತಿ ಮಾಡಲಾಗಿದೆ.
