Wild Tusker sakrebylu | ಶೆಟ್ಟಿಹಳ್ಳಿ, ಮಂಡಗದ್ದೆ ವಲಯದಲ್ಲಿರುವ ಕಾಡಾನೆಗಳ ಸಂಖ್ಯೆ ಎಷ್ಟು ಗೊತ್ತಾ? !

Wild Tusker sakrebylu ,Shettihalli, Mandagadde , Wild Tusker sakrebylu ,ಶೆಟ್ಟಿಹಳ್ಳಿ, ಮಂಡಗದ್ದೆ ,

Wild Tusker sakrebylu | ಶೆಟ್ಟಿಹಳ್ಳಿ, ಮಂಡಗದ್ದೆ ವಲಯದಲ್ಲಿರುವ ಕಾಡಾನೆಗಳ ಸಂಖ್ಯೆ ಎಷ್ಟು ಗೊತ್ತಾ?  !
Wild Tusker sakrebylu

Wild Tusker sakrebylu ಶೆಟ್ಟಿಹಳ್ಳಿ ಮಂಡಗದ್ದೆ ವಲಯದಲ್ಲಿರುವ ಕಾಡಾನೆಗಳ ಸಂಖ್ಯೆ ಎಷ್ಟು ಗೊತ್ತಾ? .ಜಂಬುವಳ್ಳಿ ಕಾಡಿನಲ್ಲಿ ಒಂಟಿ ಸಲಗ ಪ್ರತ್ಯಕ್ಷದ ನಂತರ ಹೆಚ್ಚಾಯ್ತು ಆತಂಕ ಸಕ್ರೆಬೈಲಿನಿಂದ ಮಂಡಗದ್ದೆ ಹೋಗುವ ವಾಹನ ಸವಾರರೇ ನಿಮಗಿರಲಿ ಎಚ್ಚರ

ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ವರ್ಷ ವರ್ಷಕ್ಕೂ ಕಾಡಾನೆಗಳ ಸಂಖ್ಯೆ ಹೆಚ್ಚುತ್ತಿದೆ. ದಶಕದ ಹಿಂದೆ ಮೂರು ಸಂಖ್ಯೆಯಲ್ಲಿದ್ದ ಕಾಡಾನೆಗಳ ಸಂಖ್ಯೆ ಈಗ ಹದಿನೈದರ ಗಡಿ ದಾಟಿದೆ. ಶಿವಮೊಗ್ಗ ವನ್ಯಜೀವಿ ಡಿಸಿಎಪ್ ಐಎಂ ನಾಗರಾಜ್ ಹೇಳುವಂತೆ, ಭದ್ರಾ ಅಭಯಾರಣ್ಯದಿಂದ ನೀರು ಆಹಾರ ಹರಸಿಕೊಂಡು ತುಂಗಾ ನದಿಯಲ್ಲಿ ದಾಟಿಕೊಂಡು ಬಂದ ಕಾಡಾನೆಗಳು..ಇಲ್ಲಿನ ಪರಿಸರಕ್ಕೆ ಒಗ್ಗಿಕೊಂಡಿವೆ.ಕೆಲವು ಆನೆಗಳು ಹಿಂಡಿನಲ್ಲಿ ವಾಸಿಸುತ್ತಿದ್ದರೆ, ಮತ್ತೆ ಕೆಲವು ಒಂಟಿ ಸಲಗಗಳು ಕಾಡಂಚಿನ ತೋಟ ಗದ್ದೆಗಳಲ್ಲೇ ಬೀಡುಬಿಟ್ಟು ಬೆಳೆ ಹಾನಿ ಮಾಡುತ್ತಿದೆ. ಇತ್ತಿಚ್ಚಿಗೆ ಎರಡು ಕಾಡಾನೆಗಳು ಆಯನೂರು ಬಳಿಯ ಚೆನ್ನನಹಳ್ಳಿ ಬಗರ್ ಹುಕುಂ ಹೊಲದಲ್ಲಿ ವಿದ್ಯುತ್ ತಂತಿಗೆ ಸಿಲುಕಿ ಸಾವನ್ನಪ್ಪಿದೆ.

ಆಗುಂಬೆ ಕಾಡಿನಲ್ಲಿ ಬೀಡುಬಿಟ್ಟಿರುವ ಒಂಟಿ ಸಲಗ ದಾಂಡೇಲಿಯವರೆಗೂ ತನ್ನ ಕಾರಿಡಾರ್ ಮಾಡಿಕೊಂಡಿದೆ. ಇತ್ತಿಚ್ಚೆಗೆ ಮಂಡಗದ್ದೆ ಕೀಗಡಿ ಬಳಿ ಕಾಡಾನೆಗಳು ಕಾಣಿಸಿಕೊಂಡು, ಅಡಿಕೆ ತೋಟ ನಾಶಗೊಳಿಸಿ  ರೈತರನ್ನು ಆತಂಕಗೊಳಿಸಿತ್ತು.ಈಗ ಜಂಬವಳ್ಳಿ ಕಾಡಾನೆಯಲ್ಲಿ ಒಂಟಿ ಸಲಗವೊಂದು ಬೀಡುಬಿಟ್ಟಿದ್ದು, ಸ್ವೆಚ್ಚೆಯಾಗಿ ಓಡಾಡಿಕೊಂಡಿದೆ. ಆನೆ ಕಾಡಿನಲ್ಲಿ ಪ್ರತ್ಯಕ್ಷವಾಗಿರುವುದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಹಾಗು ಕಾಡಂಚಿನ ಜನರು ಭಯಭೀತರಾಗಿದ್ದಾರೆ.

ಭದ್ರಾ ಅಭಯಾರಣ್ಯದಿಂದ ಹೆಚ್ಚು ಕಾಡಾನೆಗಳು, ಈಗ ತುಂಗಾ ನದಿ ದಾಟಿಕೊಂಡು ಶೆಟ್ಟಿಹಳ್ಳಿ ಮತ್ತು ಮಂಡಗದ್ದೆ ವಲಯದ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿದೆ. ಈ ಆನೆಗಳು ರಾತ್ರಿವೇಳೆ ನೀರು ಕುಡಿಯಲು ತುಂಗಾ ನದಿಗೆ ಬರುವ ಸಾಧ್ಯತೆಗಳು ಹೆಚ್ಚು. ಈ ಸಂದರ್ಭದಲ್ಲಿ ರಸ್ತೆ ದಾಟುವಂತ ಸನ್ನಿವೇಶದಲ್ಲಿ ವಾಹನ ಸವಾರರಿಗೆ ಆನೆ ಎದುರಾದರೂ, ಆಪತ್ತು ಕಟ್ಟಿಟ್ಟ ಬುತ್ತಿ.

ಹಗಲುಹೊತ್ತು ಕಾಡಿನಲ್ಲಿಯೇ ಇರುವ ಕಾಡಾನೆಗಳು ರಾತ್ರಿ ಹೊತ್ತು ರೈತರ ತೋಟ ಗದ್ದೆಗಳಿಗೆ ಲಗ್ಗೆ ಇಡುತ್ತಿವೆ. ಆದ್ರೆ ಜಂಬವಳ್ಳಿ ಕಾಡಿನಲ್ಲಿ ಹಗಲು ಹೊತ್ತು ಕಾಣಿಸಿಕೊಳ್ಳವ ಮೂಲಕ ಆತಂಕ ಸೃಷ್ಟಿಸಿದೆ. ಕಾಡಾನೆಗಳ ಎಂಟ್ರಿ ಸಕ್ರೆಬೈಲು ಆನೆ ಬಿಡಾರದ ಹೆಣ್ಣಾನೆಗಳಿಗೆ ಒಂದು ರೀತಿಯಲ್ಲಿ ವರದಾನವಾಗಿದೆ.ಆದ್ರೆ ಕಾಡಿಗೆ ಆನೆ ಬಿಡಲು ಹೋಗುವ ಮಾವುತರ ಜೀವಕ್ಕೆ ಸಂಚಕಾರ ತಂದೊಡ್ಡಿದೆ. ಏನೇ ಆಗಲಿ ಮೂರು ಸಂಖ್ಯೆಯಲ್ಲಿದ್ದ ಕಾಡಾನೆಗಳ ಸಂಖ್ಯೆ ಈಗ ಹದಿನೈದರ ಗಡಿ ದಾಟಿರುವುದು ಕಾಡಂಚಿನ ಜನರ ನಿದ್ದೆಗೆಡುವಂತೆ ಮಾಡಿದೆ.