ಹಣಗೆರೆ ಕಟ್ಟೆ ಸಮೀಪ, ನಾಯಿ ಮುಟ್ಟದ ಹಳ್ಳದ ಬಳಿ ಮರಳು ಲಾರಿ ಪಲ್ಟಿ
Sand lorry overturns near Hanagere Katte, near Nayi Muttada Halla
SHIVAMOGGA | MALENADUTODAY NEWS | May 22, 2024 ಮಲೆನಾಡು ಟುಡೆ
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಹಣಗರೆಕಟ್ಟೆ ಸಮೀಪ ಮರಳು ಲಾರಿಯೊಂದು ರಸ್ತೆಪಕ್ಕ ಉರುಳಿ ಬಿದ್ದ ಘಟನೆ ಬಗ್ಗೆ ವರದಿಯಾಗಿದೆ. ತಾಲ್ಲೂಕಿನ ಹಣಗೆರೆ ಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನಾಯಿ ಮುಟ್ಟದ ಹಳ್ಳದ ಸೇತುವೆ ಬಳಿ ಈ ಘಟನೆ ಸಂಭವಿಸಿದೆ. ಕೆರೆಹಳ್ಳಿ-ಹಣಗೆರೆಕಟ್ಟೆ ಊರು ಸಂಪರ್ಕಿಸುವ ಸೇತುವೆ ಇದಾಗಿದ್ದು ಇಲ್ಲಿ ಸೇತುವೆ ಕಾಮಗಾರಿ ಅಪೂರ್ಣಗೊಂಡಿದೆ.
ಈ ಮಾರ್ಗದಲ್ಲಿ ಬರುತ್ತಿದ್ದ ಮರಳು ತುಂಬಿದ ಲಾರಿ ಅರೆಬರೇ ಕಾಮಗಾರಿ ಕಂಡಿದ್ದ ರಸ್ತೆಯಲ್ಲಿ ಸಾಗುತ್ತಾ, ತಡೆಗೋಡೆಯಿಲ್ಲದ ಸೇತುವೆ ಪಕ್ಕ ಉರುಳಿ ಬಿದ್ದಿದೆ. ಹಳ್ಳಬಿದ್ದ ಲಾರಿ ನುಜ್ಜುಗುಜ್ಜಾಗಿದ್ದು, ಸ್ಥಳೀಯರು ಕಾಮಗಾರಿ ಬೇಗ ಮುಗಿಸಿ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.