ಗಂಗೆ ಪೂಜೆ ಮಾಡುತ್ತಿದ್ದ 50 ಕ್ಕೂ ಹೆಚ್ಚು ಮಂದಿ ಮೇಲೆ ಹೆಜ್ಜೇನಿನ ದಾಳಿ | ನೋವಿನಲ್ಲಿಯು 2 ವರ್ಷದ ಮಗುವನ್ನ ರಕ್ಷಿಸಿದ ಬಾಲಕ

Over 50 people attacked by Honey bee for performing Ganga puja | Boy rescues 2-year-old boy in pain

ಗಂಗೆ ಪೂಜೆ ಮಾಡುತ್ತಿದ್ದ 50 ಕ್ಕೂ ಹೆಚ್ಚು ಮಂದಿ ಮೇಲೆ ಹೆಜ್ಜೇನಿನ ದಾಳಿ | ನೋವಿನಲ್ಲಿಯು 2 ವರ್ಷದ ಮಗುವನ್ನ ರಕ್ಷಿಸಿದ ಬಾಲಕ
Honey bee attack

SHIVAMOGGA | MALENADUTODAY NEWS | May 22, 2024  ಮಲೆನಾಡು ಟುಡೆ

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಬಾಬಳ್ಳಿಯಲ್ಲಿ ಗಂಗಾ ಪೂಜೆ ಮಾಡಲು ಹೋಗಿದ್ದವರ ಮೇಲೆ ಹೆಜ್ಜೇನು ದಾಳಿ ನಡೆಸಿದ ಘಟನೆ ನಡೆದಿದೆ. ಘಟನೆಯಲ್ಲಿ 50ಕ್ಕೂ ಹೆಚ್ಚು ಜನರ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು, ಹಲವರನ್ನ ಶಿವಮೊಗ್ಗ ಹಾಗೂ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಭದ್ರಾವತಿಯಲ್ಲಿ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಇದಕ್ಕಾಗಿ ಸಿದ್ದತೆ ಮಾಡಿಕೊಳ್ಳಲಾಗುತ್ತಿತ್ತಷ್ಟೆ ಅಲ್ಲದೆ, ಪೂರ್ವ ವಿಧಿವಿಧಾನಗಳನ್ನ ನಡೆಸಲಾಗುತ್ತಿತ್ತು. ಅದರಂತೆ ಬಾಬಳ್ಳಿಯ ನಿವಾಸಿಗಳು ಗಂಗೆ ಪೂಜೆ ಮಾಡಲು ಹೊರಟಿದ್ದರು. ಈ ವೇಳೆ ಅಲ್ಲಿಯೇ ಪೊದೆಯೊಂದರಲ್ಲಿ ಕಟ್ಟಿದ್ದ ಹೆಜ್ಜೇನುಗಳು ಮೇಲಕ್ಕೆದ್ದಿವೆ. ಅಲ್ಲದೆ ಗಂಗೆಪೂಜೆಯಲ್ಲಿದ್ದವರ ಮೇಲೆ ದಾಳಿ ಮಾಡಿವೆ. 

ಇನ್ನೂ ವಿಶೇಷ ಅಂದರೆ, ಈ ಹೆಜ್ಜೇನುಗಳ ದಾಳಿಯಲ್ಲಿ ಎರಡು ವರ್ಷದ ಮಗು ಸಹ ಸಿಲುಕಬೇಕಿತ್ತು. ಅದೃಷ್ಟಕ್ಕೆ ದೇವರಂತೆ ಬಂದ ಬಾಲಕನೊಬ್ಬ ಮಗುವನ್ನು ಎತ್ತಿಕೊಂಡು ರಕ್ಷಣೆ ಮಾಡಿದ್ದಾನೆ. ಆತನ ಮೇಲೆ ಹೆಜ್ಜೇನು ಬಿಗಿಯಾಗಿ ದಾಳಿ ನಡೆಸಿ ಕಚ್ಚಿದರೂ ಮಗುವನ್ನ ಬಿಡದೇ ರಕ್ಷಣೆ ಮಾಡಿದ ಬಾಲಕನನ್ನ ಸ್ಥಳೀಯರು ಶ್ಲಾಘಿಸಿದ್ದಾರೆ.