ತನ್ನೊಂದಿಗೆ ಇದ್ದ ಮಹಿಳೆಯನ್ನ ಕತ್ತು ಹಿಸುಕಿ ಕೊಲೆ ಮಾಡಿದ ವ್ಯಕ್ತಿ! ಭದ್ರಾವತಿಯಲ್ಲಿ ನಡೆದ ಘಟನೆ

Information has been received from police sources that a man has killed a woman in Bhadravatiಭದ್ರಾವತಿಯಲ್ಲಿ ವ್ಯಕ್ತಿಯೊಬ್ಬ ಮಹಿಳೆಯನ್ನು ಹತ್ಯೆ ಮಾಡಿರುವ ಬಗ್ಗೆ ಪೊಲೀಸ್​ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ

ತನ್ನೊಂದಿಗೆ ಇದ್ದ ಮಹಿಳೆಯನ್ನ ಕತ್ತು ಹಿಸುಕಿ ಕೊಲೆ ಮಾಡಿದ ವ್ಯಕ್ತಿ! ಭದ್ರಾವತಿಯಲ್ಲಿ ನಡೆದ ಘಟನೆ

KARNATAKA NEWS/ ONLINE / Malenadu today/ Sep 18, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನಲ್ಲಿ ಮಹಿಳೆಯೊಬ್ಬರನ್ನು ಕೊಲೆ ಮಾಡಲಾಗಿದೆ. ಭಧ್ರಾವತಿ ಗ್ರಾಮಾಂತರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.  ಸುಮಾರು 30 ವರ್ಷದ ರೂಪ ಮೃತ ಮಹಿಳೆ, ಈಕೆ ಚಿತ್ರುದರ್ಗ ಜಿಲ್ಲೆ ಭರಮಸಾಗರದ ನಿವಾಸಿ ಎಂದು ತಿಳಿದುಬಂದಿದೆ. ಭದ್ರಾವತಿಯಲ್ಲಿ ನೀಲಿಗಿರಿ ಮರಗಳನ್ನು ಕತ್ತರಿಸುವ ಕೆಲಸ ಮಾಡುತ್ತಿದ್ದ ಈಕೆಯ ಪತಿಯು ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದ್ದ. 

ಈ ನಡುವೆ ಭದ್ರಾವತಿಯ ವ್ಯಕ್ತಿಯ ಜೊತೆ ಲೀವಿಂಗ್ ರಿಲೆಷನ್​ನಲ್ಲಿದ್ದಳು. ಆತನಿಗೂ ಮದುವೆಯಾಗಿತ್ತು. ಆತನ ಪತ್ನಿ ಕೆಲವರ್ಷಗಳ ಹಿಂದೆ ಸಾವನ್ನಪ್ಪಿದ್ದಳು. 

ಚೆನ್ನಾಗಿ ಇದ್ದ ಇಬ್ಬರ ನಡುವೆ ನಿನ್ನೆ ರಾತ್ರಿ ಜಗಳವಾಗಿದ್ದು ಹೊಡೆದಾಟವಾಗಿದೆ. ಈ ವೇಳೆ ಆರೋಪಿ ಕಾಲಿನಿಂದ ಒದ್ದು ರೂಪಾಳ ಕತ್ತುಹಿಸುಕಿ ಕೊಲೆ ಮಾಡಿದ್ದಾರೆ. 

ಪ್ರಕರಣ ಸಂಬಂಧ ಕೇಸ್ ದಾಖಲಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಪ್ರಾಥಮಿಕ ವಿಚಾರಣೆ ವೇಳೆ ಆರೋಪಿ ಕೊಲೆ ಮಾಡಿರುವುದನ್ನ ಒಪ್ಪಿಕೊಂಡಿದ್ದಾನೆ.  


ಇನ್ನಷ್ಟು ಸುದ್ದಿಗಳು