ವಿರಾಜಮಾನವಾಗಿ ಪ್ರತಿಷ್ಟಾಪನೆಗೊಂಡ ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ! ಇಲ್ಲಿದೆ ವಿವರ!

The Hindu Mahasabha Ganapati installation was held at the Bhimeshwar temple in Shimogaಶಿವಮೊಗ್ಗದ ಭೀಮೇಶ್ವರ ದೇವಾಲಯದಲ್ಲಿ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಟಾಪನೆ ನಡೆಯಿತು

ವಿರಾಜಮಾನವಾಗಿ ಪ್ರತಿಷ್ಟಾಪನೆಗೊಂಡ ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ! ಇಲ್ಲಿದೆ ವಿವರ!

KARNATAKA NEWS/ ONLINE / Malenadu today/ Sep 18, 2023 SHIVAMOGGA NEWS

ಗೌರಿ ಗಣೇಶ ಹಬ್ಬ ಶಿವಮೊಗ್ಗದಲ್ಲಿ ಮನೆ ಮನೆಗಳಲ್ಲಿ ವಿಶೇಷವಾಗಿ ಆಚರಿಸಲಾಗುತ್ತಿದೆ. ಇದರ ನಡುವೆ ಶಿವಮೊಗ್ಗ ಪ್ರಮುಖ ಗಣಪತಿಗಳಲ್ಲಿ ಒಂದಾದ ಹಿಂದೂ ಮಹಾಸಭಾ ಗಣಪತಿಯ ಪ್ರತಿಷ್ಟಾಪನೆಯು ಪ್ರತೀತಿಯ ಪ್ರಕಾರವಾಗಿ ನಡೆದಿದೆ. ಕುಂಬಾರ ಗುಂಡಿಯಿಂದ ವಿಶೇಷವಾಗಿ ತಯಾರಿಸಲಾಗಿದ್ದ ಗಣಪತಿಯನ್ನು ಭೀಮೇಶ್ವರ ದೇವಾಲಯಕ್ಕೆ ತರಲಾಗಿದೆ. ಟ್ರ್ಯಾಕ್ಟರ್​ನಲ್ಲಿ ದೇವಾಲಯ ಮೂರ್ತಿಯನ್ನು ತಂದು , ದೇವಾಲಯದಲ್ಲಿ ಪ್ರದಕ್ಷಿಣೆ ಹಾಕಿಸಿ ನಂತರ ಪ್ರತಿಷ್ಟಾಪನೆ ಮಾಡಲಾಗಿದೆ. 

10 ದಿನಗಳ ಕಾಲ ಗಣೇಶನ ಕೂರಿಸಿ, ಆನಂತರ ಸೆಪ್ಟೆಂಬರ್​ 28 ರಂದು ರಾಜಬೀದಿ ಉತ್ಸವದೊಂದಿಗೆ ಗಣೇಶನ ವಿಸರ್ಜನೆ ನಡೆಯಲಿದೆ. ಇನ್ನೂ ಗಣಪತಿ ಪ್ರತಿಷ್ಟಾಪನೆ ಬಳಿಕ ಮಾತನಾಡಿದ ಶಾಸಕ ಎಸ್​ಎನ್ ಚನ್ನಬಸಪ್ಪ,   ಈ ವರ್ಷ ವಿಜೃಂಭಣೆಯಿಂದ ಗಣೇಶೋತ್ಸವವನ್ನು ಆಚರಿಸಲಾಗುತ್ತಿದೆ ಎಂದರು,ಪೂಜಾವಿಧಿವಿಧಾನಗಳೊಂಗಿದೆ  ಐತಿಹಾಸಿಕ ಗಣಪನನ್ನ‌ ಪ್ರತಿಷ್ಠಾಪಿಸಲಾಗಿದೆ. ಪ್ರತಿದಿನ ಪೂಜಾ ಕೈಂಕರ್ಯಗಳು ಸಾಗಲಿವೆ.ಸೆ.27 ರಂದು ವೀರ ಶಿವಮೂರ್ತಿಯ ಬಲಿದಾನದ ಪುಣ್ಯಸ್ಮರಣೆ, ಗಣಪತಿಯ ಮಹಾ ಮಂಗಳಾರತಿ ನಡೆಯಲಿದೆ. ಮರುದಿನ ರಾಜಬೀದಿ ಉತ್ಸವ ನಡೆದು, ಗಣಪತಿ ವಿಸರ್ಜನೆಯೊಂದಿಗೆ  79 ನೇ ಗಣೇಶೋತ್ಸವ ಮುಕ್ತಾಯಗೊಳ್ಳಲಿದೆ ಎಂದು ಮಾಹಿತಿ ನೀಡಿದ್ರು. 


ಇನ್ನಷ್ಟು ಸುದ್ದಿಗಳು