ಕಾಡಾನೆ ದಾಳಿ ಬಳಿಕ ಮತ್ತೆ ಆಪರೇಷನ್​ಗೆ ಇಳಿದ ಡಾ.ವಿನಯ್! ಬೋನಿಗೆ ಬಿದ್ದ ಚಿರತೆ ನಡೆಸಿತು ಅಟ್ಯಾಕ್​! ಭದ್ರಾವತಿ VISL ಮರಿ ಚಿರತೆ ಸಿಕ್ಕಿಬಿದ್ದಿದ್ದೇಗೆ ಗೊತ್ತಾ? ಇನ್ನೂ 3 ದಿನ ಕಾರ್ಯಾಚರಣೆ!

A leopard spotted in Bhadravati VISL premises since last July has been capturedಭದ್ರಾವತಿ ವಿಐಎಸ್​ಎಲ್ ಆವರಣದಲ್ಲಿ ಕಳೆದ ಜುಲೈ ತಿಂಗಳಿನಿಂದ ಕಾಣಿಸಿದ ಚಿರತೆಯನ್ನು ಸೆರೆ ಹಿಡಿಯಲಾಗಿದೆ

ಕಾಡಾನೆ ದಾಳಿ ಬಳಿಕ ಮತ್ತೆ ಆಪರೇಷನ್​ಗೆ ಇಳಿದ ಡಾ.ವಿನಯ್! ಬೋನಿಗೆ ಬಿದ್ದ ಚಿರತೆ ನಡೆಸಿತು ಅಟ್ಯಾಕ್​! ಭದ್ರಾವತಿ VISL  ಮರಿ ಚಿರತೆ ಸಿಕ್ಕಿಬಿದ್ದಿದ್ದೇಗೆ ಗೊತ್ತಾ? ಇನ್ನೂ 3 ದಿನ ಕಾರ್ಯಾಚರಣೆ!

KARNATAKA NEWS/ ONLINE / Malenadu today/ Sep 27, 2023 SHIVAMOGGA NEWS’ 

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ವಿಐಎಸ್​ಎಲ್​ ನಲ್ಲಿ ಕಾಣಿಸಿದ್ದ ಚಿರತೆಯನ್ನು ಸೆರೆಹಿಡಿಯಲಾಗಿದೆ . ಕಳೆದ ಜುಲೈ 21 ರಂದು ಈ ಚಿರತೆ ವಿಎಸ್​ಎಲ್​ ಆವರಣದಲ್ಲಿ ಕಾಣಿಸಿತ್ತು. ಆನಂತರ ಅರಣ್ಯ ಇಲಾಖೆ 8 ಬೋನುಗಳು ಹಾಗೂ ಕ್ಯಾಮರಾಗಳನ್ನು ಅಳವಡಿಸಿತ್ತು. ಕ್ಯಾಮರಾಗಳಲ್ಲಿ ಆಗಾಗ ಚಿರತೆ ಹಾಗೂ ಮರಿಚಿರತೆ ಕಾಣಿಸಿಕೊಂಡಿತ್ತು. 

ಎಂಪಿಎಂ ಹಾಗೂ ವಿಎಸ್​ಐಎಲ್​ ಆವರಣದಲ್ಲಿ ಕಾಣಿಸಿಕೊಳ್ತಿದ್ದ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಅಲ್ಲಿನ ಸಿಬ್ಬಂದಿಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಕಾರ್ಯಗಾರ ನಡೆಸಲಾಗಿತ್ತು. ಇನ್ನೂ ಕಳೆದ ವಾರ ಅರಣ್ಯ ಇಲಾಖೆ ಸುಮಾರು 50 ಜನರು ನಿಲ್ಲಬಹುದಾದ ದೊಡ್ಡ ಬೋನು ಒಂದನ್ನು ತುಮಕೂರಿನಿಂದ ತರಿಸಿಕೊಂಡು ವಿಐಎಸ್​ಎಲ್​ ಆವರಣದಲ್ಲಿ ಇಡಲಾಗಿತ್ತು. 

ಚಿರತೆಯನ್ನು ಸೆಳೆಯಲು ಬೋನ್​ನಲ್ಲಿ ಮೇಕೆ ಹಾಗೂ ನಾಯಿಗಳನ್ನು ಕಟ್ಟಲಾಗಿತ್ತು. ಅದನ್ನ ತಿನ್ನುವ ಆಸೆಯಲ್ಲಿ ಬೋನಿನೊಳಗೆ ಸೇರಿಕೊಂಡ ಚಿರತೆ ಅಲ್ಲಿಯೇ ಟ್ರ್ಯಾಪ್​ ಆಗಿತ್ತು. ಆನಂತರ ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಹಾಗೂ ವನ್ಯಜೀವಿ ವೈದ್ಯ ಡಾ.ವಿನಯ್​  ಚಿರತೆಗೆ ಅರವಳಿಕೆ ಮದ್ದು ನೀಡಿ, ಸೆರೆಸಿಕ್ಕ ಬೋನಿನಿಂದ ,ಸಣ್ಣ ಕೇಜ್​ನೊಳಗೆ ಚಿರತೆಯನ್ನು ಶಿಫ್ಟ್ ಮಾಡಲಾಗಿತ್ತು. 

ಸದ್ಯ ಸಿಕ್ಕಿರುವುದು ಮರಿ ಚಿರತೆಯಾಗಿದ್ದು, ಅರಣ್ಯ ಇಲಾಖೆ ತಾಯಿ ಚಿರತೆಯನ್ನು ಹಿಡಿಯಲು ಕಾರ್ಯಾಚರಣೆ ಆರಂಭಿಸಿದೆ , ಇದಕ್ಕಾಗಿ ಮರಿಚಿರತೆಯನ್ನು ಅಲ್ಲಿಯೇ ಇರಿಸಲಾಗಿದ್ದು, ಮರಿ ಚಿರತೆಯನ್ನು ಹಿಡಿದುಕೊಂಡು ತಾಯಿ ಚಿರತೆ ಸ್ಥಳಕ್ಕೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ .ಇನ್ನೂ ಸೆರೆಸಿಕ್ಕಿರುವ ಗಂಡು ಚಿರತೆ ಒಂದುವರೆ ವರ್ಷದ ಚಿರತೆ ಇರಬಹುದು ಎಂದು ಅಂದಾಜಿಸಲಾಗಿದೆ. 

ಅರಣ್ಯ ಇಲಾಖೆಯ ಮೂಲಗಳ ಮಾಹಿತಿ ಪ್ರಕಾರ, ಅರಣ್ಯ ಸಿಬ್ಬಂದಿ ಹಾಗೂ ವನ್ಯಜೀವಿ ವೈದ್ಯ ಡಾ.ವಿನಯ್​ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದು, ಮೂರು ದಿನಗಳ ಕಾರ್ಯಾಚರಣೆ ಮುಂದುವರಿಯುವ ಸಾಧ್ಯತೆ ಇದೆ. ವಿಶೇಷ ಅಂದರೆ, ಕಾಡಾನೆ ಕಾರ್ಯಾಚರಣೆಯಲ್ಲಿ ಆನೆಯಿಂದ ದಾಳಿಗೊಳಗಾಗಿದ್ದ ಡಾ. ವಿನಯ್​ ಚೇತರಿಸಿಕೊಂಡು ಪುನಃ ನಡೆಸ್ತಿರುವ ಮೊದಲ ವೈಲ್ಡ್​ ಲೈಫ್​ ಕಾರ್ಯಾಚರಣೆ ಇದಾಗಿದೆ 


ಇನ್ನಷ್ಟು ಸುದ್ದಿಗಳು 

  1. BREAKING NEWS / ಜೋಗದ ಸಮೀಪ ನೀರಿಗಿಳಿದಿದ್ದ ಓರ್ವ ಅಧಿಕಾರಿ ಮತ್ತು ಬ್ಯಾಂಕ್ ಉದ್ಯೋಗಿ ಸಾವು! ಕಾರ್ಗಲ್​ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದ್ದೇನು?

  2. ಲೋಡ್ ಗಾಡಿಯಿಂದ ಬಿದ್ದ ಮರದ ತುಂಡು ಬಡಿದು ಬೈಕ್​ ಸವಾರನ ಸ್ಥಿತಿ ಗಂಭೀರ! ಹೀಗೂ ಆಗುತ್ತೆ ಹುಷಾರು ತಪ್ಪದಿರಿ ವಾಹನ ಸವಾರರೇ?

  3. ದೌರ್ಜನ್ಯ ಪ್ರಕರಣ ! ಶಿವಮೊಗ್ಗ ಡಿಸಿಯಿಂದ 15 ಸೂಚನೆ! ಯುವಕನ ಸಾವು, ಮರಳು, ಅಧಿಕಾರಿಗಳಿಂದ ಕಿರುಕುಳ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದೇನು?