KARNATAKA NEWS/ ONLINE / Malenadu today/ Aug 26, 2023 SHIVAMOGGA NEWS
ಸ್ಟೇಷನ್ ಬಳಿಯಲ್ಲಿಯೇ ಯುವತಿಯೊಬ್ಬಳು ವಿಷ ಕುಡಿದ ಪ್ರಕರಣವೊಂದು 10 ದಿನಗಳ ನಂತರ ಬೆಳಕಿಗೆ ಬಂದಿದ್ದು, ಈ ಸಂಬಂಧ ಸುಮುಟೋ ಕೇಸ್ ದಾಖಲಾಗುವುದರೊಂದಿಗೆ ಬೆಳಕಿಗೆ ಬಂದಿದೆ.
ಏನಿದು ಘಟನೆ
ಭದ್ರಾವತಿ ನ್ಯೂಟೌನ್ ಪೊಲೀಸ್ ಸ್ಟೇಷನ್ನಲ್ಲಿ ಕಳೆದ 15 ರಂದು ಯುವತಿಯೊಬ್ಬಳು ಪೊಲೀಸರಿಗೆ ತನಗೊಬ್ಬ ಯುವಕ ಮೋಸ ಮಾಡಿದ್ದು, ಆತನನ್ನು ಕರೆದು ಮದುವೆಗೆ ಒಪ್ಪಿಸಿ ಎಂದು ದೂರುಕೊಟ್ಟಿದ್ದಳು. ಈ ದೂರಿನನ್ವಯ ಪೊಲೀಸರು ಮರುದಿನ ಪೊಲೀಸರು ಎರಡು ಕಡೆಯವರನ್ನು ವಿಚಾರಣೆಗೆ ಕರೆದಿದ್ಧಾರೆ. ಈ ಮಧ್ಯೆ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿರುವಾಗಲೇ ಯುವತಿ ಹಾಗೂ ಆಕೆ ದೂರಿದ್ದ ಯುವಕ ಸ್ಟೇಷನ್ನಿಂದ ಹೊರಕ್ಕೆ ನಡೆದಿದ್ಧಾರೆ, ಆನಂತರ ಕೆಲವೇ ಹೊತ್ತಿನಲ್ಲಿ ಯುವತಿ ಸ್ಟೇಷನ್ ಗೇಟ್ ಬಳಿ ವಿಷ ಕುಡಿದಿದ್ಧಾಳೆ. ತಕ್ಷಣ ಆಕೆಯನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆ ಹಾಗೂ ಅಲ್ಲಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಿದ್ದಾರೆ. ಸದ್ಯ ಇದೇ ವಿಚಾರವಾಗಿ ನ್ಯಾಯಾಲಯದ ಅನುಮತಿ ಪಡೆದ ಪೊಲೀಸರು ಸುಮುಟೋ ಕೇಸ್ ದಾಖಲಿಸಿಕೊಂಡಿದ್ದಾರೆ.
ಇನ್ನಷ್ಟು ಸುದ್ದಿಗಳು
ಗಾಂಧೀಜಿ ಪ್ರತಿಮೆ ಧ್ವಂಸ! ಆರೋಪಿಗಳ ಪತ್ತೆಗೆ ಮೂರು ಟೀಂ! ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?ಉದ್ಯೋಗಕ್ಕಾಗಿ ಹುಡಕಾಡ್ತಿದ್ದೀರಾ?
ಇಲ್ಲಿದೆ ಅವಕಾಶ! ವಿದ್ಯಾರ್ಹತೆ ಎಸ್ಎಸ್ಎಲ್ಸಿ-ಪದವಿ! ಪೂರ್ತಿ ವಿವರ ಇಲ್ಲಿದೆ
ಬಾಂಬ್ ಇನ್ ದಿ ಸಿಟಿ ಗೇಮ್ ಆಡ್ತಿರಾ! ಮಹಿಳೆಯರಿಗೆ ಮಾತ್ರ ಅವಕಾಶ! ಪುರುಷರಿಗೂ ಇದೆ
