ಏನೂ ಮಾಡದೇನೆ ನಿಮ್ ಅಕೌಂಟ್​ಗೆ ₹10 ಸಾವಿರ ರೂಪಾಯಿ ಬರುತ್ತೆ! ನಂಬ್ತೀರಾ?

A case has been registered at CEN police station in Shivamogga for duping people of Rs 7 lakh by depositing Rs 10,000 in their account ಅಕೌಂಟ್​ಗೆ ಹತ್ತು ಸಾವಿರ ರೂಪಾಯಿ ಹಾಕಿ, 7 ಲಕ್ಷ ರೂಪಾಯಿ ಮೋಸದ ಮಾಡಿದ ಪ್ರಕರಣ ಶಿವಮೊಗ್ಗ ಸಿಇಎನ್​ ಪೊಲೀಸ್ ಸ್ಟೇಷನ್​ನಲ್ಲಿ ದಾಖಲಾಗಿದೆ

ಏನೂ ಮಾಡದೇನೆ ನಿಮ್ ಅಕೌಂಟ್​ಗೆ ₹10 ಸಾವಿರ ರೂಪಾಯಿ ಬರುತ್ತೆ! ನಂಬ್ತೀರಾ?

KARNATAKA NEWS/ ONLINE / Malenadu today/ Aug 26, 2023 SHIVAMOGGA NEWS

ಪ್ರತಿಸಲವೂ ಆನ್​ಲೈನ್​ನಲ್ಲಿ ಬರುವ ಆಮೀಷಗಳನ್ನು ನಂಬಿ ಕ್ಲಿಕ್ ಮಾಡಬೇಡಿ ಎಂದು ಹೇಳುತ್ತಲೇ ಇರುತ್ತೇವೆ. ಆದಾಗ್ಯು ನಂಬಿ ಮೋಸಹೋಗುವವರ ಸಂಖ್ಯೆ ಸೈಬರ್​ ಪೊಲೀಸ್ ಸ್ಟೇಷನ್​ನಲ್ಲಿ ಜಾಸ್ತಿಯಾಗುತ್ತಲೇ ಇದೆ. 

7 ಲಕ್ಷ ಗುಳುಂ

10 ಸಾವಿರ ಕೊಟ್ಟು  ಏಳು ಲಕ್ಷ ಹಣವನ್ನು ಆನ್​ಲೈನ್​ನಲ್ಲಿ ಲೂಟಿ ಮಾಡಿದ ಪ್ರಕರಣವೊಂದು ಶಿವಮೊಗ್ಗದ ಸಿಇಎನ್ ಪೊಲೀಸ್ ಸ್ಟೇಷನ್ (CEN Police Station Shimoga)  ನಲ್ಲಿ ದಾಖಲಾಗಿದೆ. ಪ್ರಕರಣದಲ್ಲಿ ವರ್ಕ್​ ಫ್ರಾಮ್​ ಹೋಮ್​ (Work from home scam) ಹೆಸರಿನಲ್ಲಿ ನಂಬಿದ ಗ್ರಾಹಕನಿಗೆ ಮೋಸ ಮಾಡಿದ್ದಾರೆ. 

ಏನಿದು ಪ್ರಕರಣ ?

ಶಿವಮೊಗ್ಗದ ನಿವಾಸಿಯೊಬ್ಬರು ವರ್ಕ್​ ಫ್ರಾಮ್​ ಹೋಮ್​ ಆಫರ್​ಗಾಗಿ ಹುಡುಕಾಡುತ್ತಿದ್ರು, ಅದೇ ಟೈಂನಲ್ಲಿ  ಅವರ ಟೆಲಿಗ್ರಾಮ್​ಗೆ ಅಕೌಂಟ್​ಗೆ ಮೆಸೇಜ್​ ವೊಂದು ಬಂದಿದೆ.  MARRIOT Bonvoy

ಕಂಪನಿಯ ಹೆಸರಿನಲ್ಲಿ ಬಂದ ಮೆಸೇಜ್​ ನೋಡಿ , ನಿವಾಸಿ ಕ್ಲಿಕ್ ಮಾಡಿದ್ಧಾರೆ. ಕ್ಲಿಕ್​ ಮಾಡಿ ಅದರ ಪೂರ್ವಪರ ವಿಚಾರಿಸಿ ಲಾಗಿನ್ ರಿಜಿಸ್ಟರ್ ಆಗುತ್ತಲೇ,  ದೂರುದಾರರ ಅಕೌಂಟ್​ಗೆ 10 ಸಾವಿರ ರೂಪಾಯಿ ಬಂದಿದೆ. ಅಲ್ಲದೆ  ಒಂದರೆಡು ದಿನಗಳಲ್ಲಿ ಹೆಚ್ಚುವರಿಯಾಗಿ ಸಾವಿರ ರೂಪಾಯಿ ಲಾಭ ಕೂಡ ಅಕೌಂಟ್​ಗೆ ಬಂದಿದೆ. ಇದನ್ನ ನಂಬಿದ ಗ್ರಾಹಕರು, ಅದರಲ್ಲಿ ಇನ್ವೆಸ್ಟ್ ಮಾಡತೊಡಗಿದ್ಧಾರೆ. ಹಂತಹಂತವಾಗಿ ಸರಿಸುಮಾರು ಏಳು ಲಕ್ಷದವರೆಗೂ ಇನ್​ವೆಸ್ಟ್ ಮಾಡಿದ್ದಾರೆ. ಯಾವಾದ ಅಮೌಂಟ್​ ದೊಡ್ಡದಾಗುತ್ತಾ ಬಂತೋ, ಆ ಕಡೆಯಿಂದ ರಿಪ್ಲೆ ಬಂದ್ ಆಗಿದೆ. ಇದನ್ನ ನೋಡಿ ಅನುಮಾನಗೊಂಡು ವಿಚಾರಿಸಿದಾಗ ತಮಗೆ ಮೋಸವಾಗಿದೆ ಎಂಬುದು ಅರಿವಿಗೆ ಬಂದಿದೆ. ಹೀಗಾಗಿ ತಕ್ಷಣವೇ ಸೈಬರ್ ಪೊಲೀಸರಿಗೆ ನೊಂದ ಗ್ರಾಹಕರು ದೂರು ನೀಡಿದ್ದಾರೆ.  

ಇಂತಹ ಮೋಸಗಳಿಗೆ ಜನರು ಬಲಿಯಾಗದಿರಲಿ ಎಂಬ ಕಾರಣಕ್ಕೇನೇ ಶಿವಮೊಗ್ಗ ಪೊಲೀಸರು ಆಗಾಗ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಕೈಗೊಳ್ಳುತ್ತಲೇ ಇದ್ದಾರೆ. ಇದಕ್ಕೆ ಪೂರಕವಾಗಿ ಇತ್ತೀಚೆಗೆಷ್ಟೆ ಶಿವಮೊಗ್ಗದ  @112shivamogga ಖಾತೆಯಲ್ಲಿ ಸೋಶಿಯಲ್ ಮೀಡಿಯಾಗಳನ್ನು ಹೇಗೆ ನಿರ್ವಹಿಸಬೇಕು ಎಂದು ಪೋಸ್ಟ್ ವೊಂದನ್ನ ಹಾಕಿದ್ದಾರೆ. 


ಇನ್ನಷ್ಟು ಸುದ್ದಿಗಳು