ನಮ್ ಏರಿಯಾದಲ್ಲಿ ಗಾಂಜಾ ಮಾರುತ್ತೀಯಾ ಎಂದು ಯುವಕನ ಮೇಲೆ ಹಲ್ಲೆ!

A youth was attacked in Doddapet police station limits in Shivamogga ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಲಾಗಿದೆ

ನಮ್ ಏರಿಯಾದಲ್ಲಿ ಗಾಂಜಾ ಮಾರುತ್ತೀಯಾ ಎಂದು ಯುವಕನ ಮೇಲೆ ಹಲ್ಲೆ!

KARNATAKA NEWS/ ONLINE / Malenadu today/ Aug 26, 2023 SHIVAMOGGA NEWS

ನಿನ್ನ ಹೆಸರಲ್ಲಿ ನಮ್ ಏರಿಯಾದಲ್ಲಿ ಗಾಂಜ ಮಾರುತ್ತೀಯಾ ಎಂದು ಆರೋಪಿಸಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ (Doddapete police station) ದೂರು ದಾಖಲಾಗಿದೆ 

ಏನಿದು ಘಟನೆ 

ಕಳೆದ 23 ನೇ ತಾರೀಖು, ಸಂಜೆ ಶಿವಮೊಗ್ಗದ ಬಸ್ ನಿಲ್ದಾಣದಿಂದ ಬೈಪಾಸ್ ಕಡೆಗೆ ಬರುತ್ತಿದ್ದ ಯುವಕನೊಬ್ಬನನ್ನ ತಡೆದ ಆರೋಪಿಗಳು ಆತನ ಮೇಲೆ ಹಲ್ಲೆ ಮಾಡಿದ್ಧಾರೆ ಎನ್ನಲಾಗಿದೆ.  ಕೆಎಸ್ ಆರ್ ಟಿಸಿ ಡಿಪೋ  (KSRTC Depot)ಹತ್ತಿರ ದುಷ್ಕರ್ಮಿಗಳು ಯುವಕನನ್ನ ತಡೆದು ನಿನ್ನ ಹೆಸರಿನಲ್ಲಿ ನಮ್ಮ ಏರಿಯಾದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಿಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ  ಭರ್ಚಿಯಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಅಲ್ಲಿದ್ದವರು ಅಡ್ಡಬಂದು, ಆರೋಪಿಗಳಿಂದ ಯುವಕನನ್ನು ರಕ್ಷಣೆ ಮಾಡಿ ಮೆಗ್ಗಾನ್ ಆಸ್ಪತ್ರೆ ಗೆ (McGann Hospital ) ದಾಖಲಿಸಿದ್ದಾರೆ. ಈ ಸಂಬಂಧ ವಿಷಯ ತಿಳಿದ ದೊಡ್ಡಪೇಟೆ ಪೊಲೀಸರು ಗಾಯಾಳು ನೀಡಿದ ದೂರಿನನ್ವಯ ಕೇಸ್ ದಾಖಲಿಸಿಕೊಂಡಿದ್ಧಾರೆ.  


ಮೂರು ತಿಂಗಳಿನಲ್ಲಿಯೇ ಮರುಕಳಿಸಿದ ಆರೋಪ! ಈ ಸಲ ಬಿಜೆಪಿಯಿಂದಲೇ ಕೇಳಿಬಂತು! ದೂರು! ಸಾಗರ ಶಾಸಕರ ವಿರುದ್ಧ ಏನದು ಕಂಪ್ಲೆಂಟ್!?

ಶಿವಮೊಗ್ಗ ಜಿಲ್ಲೆಯ ರಾಜಕಾರಣದಲ್ಲೀಗ ಕಿರುಕುಳದ ಆರೋಪ ಮತ್ತೆ ಕೇಳಿಬಂದಿದೆ. ಈ ಹಿಂದಿನ ಸರ್ಕಾರದ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಕೇಳಿಬಂದಿದ್ದ ಆರೋಪ ಇದೀಗ ಕಾಂಗ್ರೆಸ್​ನವರ ವಿರುದ್ಧ  ಕೇಳಿಬರುತ್ತಿದೆ. 

 

ಕಳೆದ ಮೂರು ತಿಂಗಳಿನಿಂದ ಸಾಗರ ಕ್ಷೇತ್ರದ ಶಾಸಕರು ಹಾಗೂ ಅವರ ಬೆಂಬಲಿಗರು ಅಧಿಕಾರಿಗಳ ಮೂಲಕ ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ರತ್ನಾಕರ್ ಹೊನಗೋಡು ಆರೊಪಿಸಿದ್ಧಾರೆ. 

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹೊನಗೋಡು ರತ್ನಾಕರ್​ರವರು  ಸಾಗರ ತಾಲ್ಲೂಕಿನಲ್ಲಿ ಭಯದ ವಾತವಾರವಿದೆ. 2013ರ ಲ್ಲಿದ್ದ ಸನ್ನಿವೇಶ ಇದೀಗ ಮರುಕಳಿಸಿದೆ. ಈ ವಿಷಯದಲ್ಲಿ ಕಾಗೋಡು ತಿಮ್ಮಪ್ಪವರು ಮೌನ ವಹಿಸಬಾರದು ಎಂದು ಮನವಿ ಮಾಡಿದ್ದಾರೆ. 

 

ಕಲ್ಲುಕ್ವಾರಿ , ಮರಳು , ಮಣ್ಣು ಸಾಗಣೆಯಲ್ಲಿ ಪಕ್ಷದ ವಿಷಯಗಳು ಪ್ರವೇಶ ಮಾಡುತ್ತಿದ್ದು, ಬಿಜೆಪಿ ಪರವಾದವರ ವಿರುದ್ಧ ಕಾನೂನು ಸಮರ ಸಾರಲಾಗುತ್ತಿದೆ. ಬಿಜೆಪಿ ಪರವಿದ್ದವರ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಅಲ್ಲದೆ ಅವುಗಳನ್ನು ವಾರ ಕಳೆದರೂ ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಶಾಸಕರ ಬೆಂಬಲಿಗರ ವಾಹನಗಳು ಸೀಜ್​ ಆದರೆ ತಕ್ಷಣವೇ ಬಿಡುಗಡೆಯಾಗುತ್ತಿದೆ ಎಂದ ಹೊನಗೋಡು ರತ್ನಾಕರ್​,  ಇದು ಒಂದು ಇಲಾಖೆಗೆ ಸಿಮಿತವಾಗದೆ ಎಲ್ಲ ಇಲಾಖೆಗಳಲ್ಲೂ ನಡೆಯುತ್ತಿದೆ ಎಂದಿದ್ಧಾರೆ. 

ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆಯಲ್ಲಿ ಬೆಂಬಲ ನೀಡಲಿಲ್ಲ ಎನ್ನುವ ಕಾರಣಕ್ಕೆ, ಅಧಿಕಾರಿಗಳ ಮೂಲಕ ಜನಪ್ರತಿನಿಧಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದ್ಧಾರೆ.   




ಇನ್ನಷ್ಟು ಸುದ್ದಿಗಳು