ಶಿವಮೊಗ್ಗದ ಕ್ರೈಂ ಪೊಲೀಸರಿಗೆ ವಿಶೇಷ ಟ್ರೈನಿಂಗ್! ವಿವರ ಓದಿ

Special training for Crime Police in Shimoga! Read Details

ಶಿವಮೊಗ್ಗದ ಕ್ರೈಂ ಪೊಲೀಸರಿಗೆ ವಿಶೇಷ ಟ್ರೈನಿಂಗ್! ವಿವರ ಓದಿ

KARNATAKA NEWS/ ONLINE / Malenadu today/ Jun 5, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆಯ ಪೊಲೀಸರಿಗೆ ವಿಶೇಷ ತರಭೇತಿಯನ್ನ ನೀಡಲಾಗುತ್ತಿದೆ.ಇದಕ್ಕೆ ಪೂರಕವಾಗಿ ದಿನಾಂಕಃ 03-06-2023 ಮತ್ತು 04-06-2023 ರಂದು ಜಿಲ್ಲೆಯ ವಿವಿಧ ಠಾಣೆಗಳ ಅಪರಾಧ ವಿಭಾಗದ ಪೊಲೀಸರಿಗೆ ಫಿಂಗರ್​ ಪ್ರಿಂಟ್​ನ ವಿಚಾರವಾಗಿ ತರಭೇತಿ ನೀಡಲಾಗಿದೆ. 

ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ, ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಕ್ರೈಂ ವಿಭಾಗದ ಅಧಿಕಾರಿ ಮತ್ತು ಸಿಬ್ಬಂಧಿಗಳಿಗೆ ಫಿಂಗರ್ ಪ್ರಿಂಟ್, ಲೈವ್ ಸ್ಕ್ಯಾನರ್ ಮತ್ತು ಎಂಸಿಸಿಟಿಎನ್ಎಸ್ ಅಪ್ಲಿಕೇಷನ್ ಗಳ ಕುರಿತಂತೆ ತರಬೇತಿ ಕಾರ್ಯಾಗಾರವನ್ನು ನಡೆಸಿ, ಅವುಗಳ ಬಳಕೆ ಮತ್ತು ಉಪಯೋಗಗಳ ಬಗ್ಗೆ ಮಾಹಿತಿ ನೀಡಲಾಗಿದೆ.  

ರುದ್ರೇಶ್, ಪೊಲೀಸ್ ಉಪಾಧೀಕ್ಷಕರು, ಬೆಳರುಮುದ್ರೆ ಘಟಕ, ಪೂರ್ವ ವಲಯ ದಾವಣಗೆರೆ ಮತ್ತು ಕೆಂಚಪ್ಪ, ಪೊಲೀಸ್ ಉಪ ನಿರೀಕ್ಷಕರು, ಬೆರಳು ಮುದ್ರೆ ಘಟಕ ಮತ್ತು ಇಲ್ಲಿನ ಅಧಿಕಾರಿಗಳು ಸಿಬ್ಬಂದಿಗೆ ಟ್ರೈನಿಂಗ್ ನೀಡಿದರು. 

DJ ಹಾಡಿಗೆ ಕಿರಿಕ್​! ಆರ್ಕೆಸ್ಟ್ರಾ ಮುಗಿಯುತ್ತಲೇ ನಡೀತು ಮರ್ಡರ್​! ಕಬಾಬ್ ಮೂರ್ತಿ ಸೇರಿ ಏಳು ಮಂದಿ ಅರೆಸ್ಟ್!

ಚಿಕ್ಕಮಗಳೂರು:  ತರಿಕೆರೆ ಶಾಸಕರು ಶ್ರೀನಿವಾಸ್​ರವರ ಅಭಿನಂದನಾ ಸಮಾರಂಭದಲ್ಲಿ ನಡೆದ ಕೊಲೆ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಪೊಲೀಸರು ಒಟ್ಟು 7 ಆರೋಪಿಗಳನ್ನ ಬಂಧಿಸಿದ್ದಾರೆ. 

ಕಟ್ಟಿದ 16 ನೇ ವರ್ಷಕ್ಕೆ ಮುಳುಗಿದ ಡ್ಯಾಂ ಬಗ್ಗೆ ನಿಮಗೆ ಗೊತ್ತಾ!ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿಸಿದ ಅಣೆಕಟ್ಟಲ್ಲಿ ವಿಶ್ವವೇ ಅಚ್ಚರಿ ಪಡುವಂತಹ ವಿಷಯವಿದೆ ! 55 ವರ್ಷದಲ್ಲಿ 2 ಸಲ ಕಾಣಸಿಕ್ಕ ಜಲಾಶಯದ ರೋಚಕ ಕಹಾನಿ! JP ಬರೆಯುತ್ತಾರೆ

ನಡೆದಿದ್ದೇನು? 

ತರೀಕೆರೆ (Tarikere) ಪಟ್ಟಣದಲ್ಲಿ ಶಾಸಕ ಶ್ರೀನಿವಾಸ್​ಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭದಲ್ಲಿ ಆರ್ಕೆಸ್ಟ್ರಾ ನಡೆಯುತ್ತಿತ್ತು. ಆಗ ಡಿಜೆ ಹಾಡನ್ನ ಬದಲಾಯಿಸುವ ವಿಚಾರದಲ್ಲಿ ಕಬಾಬ್ ಮೂರ್ತಿ ಹಾಗೂ ವರುಣ್ ಎಂಬವರ ಮಧ್ಯೆ ಗಲಾಟೆ ನಡೆದಿದೆ. ಈ ಗಲಾಟೆ ಕಾರ್ಯಕ್ರಮ ಮುಗಿದ ಬಳಿಕ ಇನ್ನೊಂದು ಹಂತಕ್ಕೆ ಹೋಗಿದೆ. ಕಾರ್ಯಕ್ರಮ ಮುಗಿಯುತ್ತಲೆ ಮತ್ತೆ ಇಬ್ಬರ ನಡುವೆ ಗಲಾಟೆಯಾಗಿದ್ದು,  ಕಬಾಬ್ ಮೂರ್ತಿ ವರುಣ್​ಗೆ ಡ್ರ್ಯಾಗರ್​ನಿಂದ ಇರಿದಿದ್ದಾನೆ. ಈ ವೇಳೆ ಮಂಜು ಹಾಗೂ ಸಂಜು ಎಂಬಿಬ್ಬರಿಗೂ ಗಾಯವಾಗಿದೆ. ಘಟನೆಯಲ್ಲಿ ವರುಣ್(28) ಸಾವನ್ನಪ್ಪಿದ್ದಾನೆ.  

ಏಳು ಮಂದಿ ಬಂಧನ

ಇನ್ನೂ ಈ ಕೊಲೆ ಪ್ರಕರಣ ಸಂಬಂಧ  ತರಿಕೆರೆ ಪೊಲೀಸರು  7 ಆರೋಪಿಗಳನ್ನು  ತರೀಕೆರೆ ನಿವಾಸಿಗಳಾದ ಮೂರ್ತಿ, ಮಂಜು, ನವೀನ್​​, ಧನು, ಈಶ್ವರ್​, ಪರಮೇಶ್ವರ್​, ನಿತಿನ್​ ಬಂಧಿತರು. ಘಟನೆ ಸಂಬಂಧ 12 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. 

ಮತ್ತೆ ಕಾಂಗ್ರೆಸ್ ನಾಯಕರ ಜೊತೆ ಕಾಣಿಸಿಕೊಳ್ತಿರುವ ವೈ.ಹೆಚ್. ನಾಗರಾಜ್​! ಕುತೂಹಲ ಮೂಡಿಸಿದ ಉಚ್ಚಾಟಣೆ ಪ್ರಶ್ನೆ!

  ಅಗತ್ಯ ಸಮಯದಲ್ಲಿ ಕೈಕೊಟ್ಟವರನ್ನ ಕ್ಷಮಿಸುವ ಮಾತೇ ಇಲ್ಲ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹೇಳುತ್ತಿದೆ. ಅಂತವರನ್ನ ಪಕ್ಷಕ್ಕೆ ಕರೆದುಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಿರುವ ಬೆನ್ನಲ್ಲಿಯು, ಕಾಂಗ್ರೆಸ್​ನಿಂದ ಹೊರಕ್ಕೆ ಹೋದವರು ಪಕ್ಷಕ್ಕೆ ವಾಪಸ್ ಆಗುತ್ತಿದ್ಧಾರೆ ಎಂಬುದುಕ್ಕೆ ಮತ್ತೊಮ್ಮೆ ಸಾಕ್ಷಿ ಸಿಕ್ಕಿದೆ. 

ಕಾಂಗ್ರೆಸ್​ನಿಂದ ಜೆಡಿಎಸ್​ಗೆ ಹೋಗಿ ಆಯನೂರು ಮಂಜುನಾಥ್​ರಿಗೆ ಸಪೋರ್ಟ್​ ಮಾಡಿದ್ದ ವೈ.ಹೆಚ್​.ನಾಗರಾಜ್​ ಇದೀಗ ಮತ್ತೆ ಕಾಂಗ್ರೆಸ್ ವಲಯದಲ್ಲಿ ಕಾಣಿಸಿಕೊಳ್ತಿದ್ದಾರೆ. ಇತ್ತೀಚೆಗೆ ಡಿಸಿಎಂ ಡಿಕೆ ಶಿವಕುಮಾರ್​ರವರ ಜೊತೆಗೆ ಕಾಣಿಸಿಕೊಂಡಿದ್ದ ಅವರು ಇದೀಗ ನಿನ್ನೆ ಭದ್ರಾವತಿಯಲ್ಲಿ ನಡೆದ ಲಕ್ಷ್ಮೀ ಹೆಬ್ಬಾಳ್ಕರ್​ರವರ ಕಾರ್ಯಕ್ರಮದಲ್ಲಿಯು ಕಾಣಿಸಿಕೊಂಡಿದ್ದಾರೆ.  

ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಪರ ಕೆಲಸ ಮಾಡಿದ್ದಕ್ಕೆ , ಅವರನ್ನ ಆರು ವರ್ಷಗಳ ಕಾಲ ಉಚ್ಚಾಟಣೆ ಮಾಡಲಾಗಿತ್ತು. ಆದರೆ ಇದೀಗ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸನ್ಮಾನ ಮತ್ತು ಅಭಿನಂದನೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.

ಖಾಸಗಿ ಕಾರ್ಯಕ್ರಮವಾಗಿದ್ದರೂ, ನಾಗರಾಜ್​ರವರ ಕಾಂಗ್ರೆಸ್​ ವಲಯದಲ್ಲಿನ ಉಪಸ್ಥಿತಿ ಮತ್ತೆ ಅವರನ್ನ ಪಕ್ಷಕ್ಕೆ ಸೇರಿಸಿಕೊಳ್ಳಲಾಯ್ತಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.ಇನ್ನೂ ಜಿಲ್ಲೆಯ ವೈ.ಹೆಚ್​.ನಾಗರಾಜ್​ ರವರು ತಮ್ಮದೆ ಆದ ವಿಶಿಷ್ಟ ವ್ಯಕ್ತಿತ್ವ ಹಾಗೂ ಸ್ವಭಾವದಿಂದಲೆ ಗುರುತಿಸಿಕೊಂಡವರು, ಅದೇ ರೀತಿಯಲ್ಲಿಯೇ ಇದೀಗ ಮತ್ತೆ ಕಾಂಗ್ರೆಸ್​ ನಾಯಕರನ್ನು ಟಚ್ ಮಾಡುತ್ತಿದ್ದಾರೆ. 

ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ನೋವ್ಹಾ ಕಾರಿಗೆ ಜಿಂಕೆ ಡಿಕ್ಕಿ! ರಸ್ತೆಯಲ್ಲಿಯೇ ಸಾವನ್ನಪ್ಪಿದ ವನ್ಯಜೀವಿ!

ಶಿವಮೊಗ್ಗ ತಾಲೂಕಿನ ಚೋರಡಿ ಸಮೀಪ, ನಿನ್ನೆ  ಭಾನುವಾರ ಸಂಜೆ ವಾಹನಕ್ಕೆ ಡಿಕ್ಕಿಯಾಗಿ ಜಿಂಕೆಯೊಂದು ಸಾವಿಗೀಡಾಗಿದೆ.  ಬಿ.ಹೆಚ್.ರಸ್ತೆಯ ಕುಮದ್ವತಿ ಸೇತುವೆಗೆ ಅನತಿದೂರದಲ್ಲಿಯೇ ಈ ಘಟನೆ ಸಂಭವಿಸಿದೆ. 

ಹೇಗಾಯ್ತು ಘಟನೆ ?

ಸಾಗರದಿಂದ ಶಿವಮೊಗ್ಗ ಕಡೆ ಬರುತಿದ್ದ ಇನ್ನೋವಾಃ ಕಾರಿಗೆ, ಅದೇ ಸಂದರ್ಭದಲ್ಲಿ ವೇಗವಾಗಿ ರಸ್ತೆ ದಾಟುತಿದ್ದ ಗಂಡು ಜಿಂಕೆಯೊಂದು ಡಿಕ್ಕಿ ಹೊಡೆದಿದೆ. ಜಿಂಕೆ ರಸ್ತೆ ದಾಟುತ್ತಿರುವುದು,  ಚಾಲಕನ ಗಮನಕ್ಕೆ ಬಾರದೆ ಹೋಗಿದ್ದರಿಂದ ಜಿಂಕೆ ಕಾರಿಗೆ ಡಿಕ್ಕಿಯಾಗಿದೆ. 

ಇನ್ನೂ ಜಿಂಕೆ ಡಿಕ್ಕಿ ಹೊಡೆದ ರಬಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದ್ದು, ಅದರ. ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಜಿಂಕೆ ಸಠಾವನ್ನಪ್ಪಿದೆ. ಇನ್ನೂ ಘಟನೆ ಸಂಬಂಧ ಸ್ಥಳ ಮಹಜರು ನಡೆಸಿರುವ ಅರಣ್ಯ ಇಲಾಖೆ ಸಿಬ್ಬಂದಿ ದೂರು ದಾಖಲಿಸಿಕೊಂಡಿದ್ದಾರೆ.