MALENADUTODAY.COM |SHIVAMOGGA| #KANNADANEWSWEB
ಆನ್ಲೈನ್ ವಂಚನೆಗಳು ಹೀಗೆ ನಡೆಯುತ್ತವೆ ಎನ್ನುವುದನ್ನ ಹೇಳಲಾಗದು. ಏಕೆಂದರೆ ದಿನಕ್ಕೊಂದು ರೀತಿಯಲ್ಲಿ ವಂಚನೆ ನಡೆಯುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಇನ್ನೊಂದು ಕೇಸ್ ದಾಖಲಾಗಿದೆ. ಕೆಲಸ ಕೊಡುತ್ತೇವೆ ಅದಕ್ಕೂ ಮೊದಲು ಟಾಸ್ಕ್ವೊಂದನ್ನ ಕಂಪ್ಲೀಟ್ ಮಾಡಬೇಕು ಎಂದು ಪುಸಲಾಯಿಸಿ ಎರಡುವರೆ ಲಕ್ಷಕ್ಕೂ ಹೆಚ್ಚು ಹಣವನ್ನು ಅಗೋಚರ ವ್ಯಕ್ತಿಗಳು ಲಪಾಟಯಿಸಿದ್ದಾರೆ.
ದಿನಾಂಕ:03-03-2023 ರಂದು ಈ ಘಟನೆ ನಡೆದಿದೆ. ದೂರು ಕೊಟ್ಟವರ ವಾಟ್ಸಾಪ್ ಗೆ +2349064473933 ನಂಬರಿನಿಂದ ನಿಮಗೆ ಕೆಲಸ ನೀಡುವುದಾಗಿ ಹಾಗೂ ಟಾಸ್ ಪೂರೈಸಿ ಕಡಿಮೆ ಸಮಯದಲ್ಲಿ, ಹೆಚ್ಚಿನ ಹಣ ಗಳಿಸಲು ಅವಕಾಶವಿದೆ ಎಂದು ಸಂದೇಶ ಬಂದಿದೆ. ಇದನ್ನ ಸಂತ್ರಸ್ತರು ನಂಬಿದ್ದಾರೆ. ಜಾಹಿರಾತಿನಲ್ಲಿ ಬಂದಂತೆ, ಟೆಲಿಗ್ರಾಮ್ ಆ್ಯಪ್ನಲ್ಲಿ ಟಾಸ್ಕ್ ಪಡೆದುಕೊಂಡಿದ್ದಾರೆ.
— SP Shivamogga (@Shivamogga_SP) February 3, 2023
ಮೊದಲಿಗೆ 2000 ರೂಪಾಯಿಗಳ ಟಾಸ್ ಮುಗಿಸಿದ್ದಾರೆ, ಅದರ ಬೆನ್ನಲ್ಲೆ ಟಾಸ್ಕ್ ಪೂರ್ತಿ ಮಾಡಿದ್ದಕ್ಕಾಗಿ ಹಣವನ್ನು ಫೋನ್ ಪೇ ಮೂಲಕ ಪಡೆದಿದ್ದಾರೆ. ಇದಾದ ನಂತರ ದಿನಾಂಕ 04-3-2023 ರಂದು ಹೀಗೆ ಹಲವು ಟಾಸ್ಕ್ ಗಳನ್ನು ಕೈಗೊಂಡಿದ್ದಾರೆ. ಅದಕ್ಕೆ ತಕ್ಕಂತೆ ಅವರು ಹೇಳಿದ ಖಾತೆಗಳಿಗೆ ಹಣವನ್ನ ವರ್ಗಾಯಿಸಿದ್ದಾರೆ. ಒಟ್ಟು ರೂ. 2,60,000/- ಹಣ ವರ್ಗಾವಣೆ ಗೊಂಡಿದೆ. ಬಳಿಕ ಅನುಮಾನಗೊಂಡ ನಂತರ ಇದೊಂದು ಆನ್ಲೈನ್ ಪ್ರಾಢ್ ಎಂಬುದು ಗೊತ್ತಾಗಿದ್ದು, ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ಧಾರೆ.
READ | thirthahalli | ಕುಡಿಯಲು ಹಣ ಕೊಟ್ಟಿಲ್ಲ ಅಂತಾ ತೀರ್ಥಹಳ್ಳಿಯಲ್ಲಿ ಹಲ್ಲೆ !
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #