ಕಾರಿನ ವ್ಹೀಲ್​ನೊಳಗೆ ಸಿಕ್ಕಿಬಿದ್ದ ಹಾವು

ನಗರದ ಹೊರವಲಯದ ಬಡಾವಣೆಗಳಲ್ಲಿ ಹಾವುಗಳು ಮನೆಬಾಗಿಲಲ್ಲಿಯೇ , ಆಗಾಗ ಪ್ರತ್ಯಕ್ಷವಾಗುತ್ತಿರುತ್ತದೆ. ಇದಕ್ಕೆ ಪೂರಕವಾಗಿ ಶಿವಮೊಗ್ಗ ನಗರದ ಜೆ.ಎಚ್.ಪಟೇಲ್ ಬಡಾವಣೆಯಲ್ಲಿ ಹಾವೊಂದು ಮನೆ ಬಾಗಿಲಲ್ಲಿಯೇ ಕಾಣಿಸಿಕೊಂಡಿತ್ತು

ಕಾರಿನ ವ್ಹೀಲ್​ನೊಳಗೆ  ಸಿಕ್ಕಿಬಿದ್ದ ಹಾವು

ಶಿವಮೊಗ್ಗ  : ನಗರದ ಹೊರವಲಯದ ಬಡಾವಣೆಗಳಲ್ಲಿ ಹಾವುಗಳು ಮನೆಬಾಗಿಲಲ್ಲಿಯೇ , ಆಗಾಗ ಪ್ರತ್ಯಕ್ಷವಾಗುತ್ತಿರುತ್ತದೆ. ಇದಕ್ಕೆ ಪೂರಕವಾಗಿ ಶಿವಮೊಗ್ಗ ನಗರದ ಜೆ.ಎಚ್.ಪಟೇಲ್ ಬಡಾವಣೆಯಲ್ಲಿ ಹಾವೊಂದು ಮನೆ ಬಾಗಿಲಲ್ಲಿಯೇ ಕಾಣಿಸಿಕೊಂಡಿತ್ತು. ಅದನ್ನ ನೋಡಿದ ಮನೆಯವರು ನೀರು ಹಾಕಿ ಅದನ್ನು ಓಡಿಸುವ ಪ್ರಯತ್ನ ಮಾಡಿದ್ದರು.

ಆನಂತರ ಭಯದಿಂದ ದೂರ ಸರಿದಿದ್ದರು. ಇದರ ನಡುವೆ ಹಾವು , ಮನೆಯ ಮುಂದೆ ನಿಲ್ಲಿಸಿದ್ದ ಕಾರೊಂದರ ವ್ಹೀಲ್​ನಲ್ಲಿ  ಸೇರಿಕೊಂಡು ಬಿಟ್ಟಿತ್ತು. ಎಷ್ಟೊತ್ತಾದರೂ ಆಚೆಬರದಿದ್ದನ್ನ ಗಮನಿಸಿದ ಸ್ಥಳೀಯರು ಸಹ ಆತಂಕ ಗೊಂಡಿದ್ದರು.

ಇದನ್ನು ಸಹ ಓದಿ : BREAKING NEWS : ಶಿವಮೊಗ್ಗ KSRTC ಬಸ್​ಸ್ಟಾಂಡ್​ ಪಕ್ಕದಲ್ಲಿಯೇ ಪತ್ತೆಯಾಯ್ತು ಮೃತದೇಹ

ಇನ್ನೂ ವಿಷಯವನ್ನು ಸ್ನೇಕ್​ ಕಿರಣ್​ಗೆ ಮುಟ್ಟಿಸಿ, ಸ್ಥಳಕ್ಕೆ ಕರೆಸಿಕೊಳ್ಳಲಾಯ್ತು. ಸ್ಥಳಕ್ಕೆ ಬಂದು ನೋಡಿದ ಸ್ನೇಕ್​ ಕಿರಣ್​ ಹಾವನ್ನು ಹಿಡಿದು, ಸಂರಕ್ಷಿಸಿದರು. ಮೂರು ಅಡಿ ಉದ್ದದ ನೀರಾವು ವಿಷಕಾರಿ ಅಲ್ಲ, ಹಾಗಾಗಿ ಯಾವುದೇ ಅಪಾಯವಿಲ್ಲ ಎಂದು ಸ್ಥಳೀಯರಿಗೆ ಮಾಹಿತಿ ನೀಡಿದರು. 

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link