ಮೂರು ತಿಂಗಳಿನಲ್ಲಿಯೇ ಮರುಕಳಿಸಿದ ಆರೋಪ! ಈ ಸಲ ಬಿಜೆಪಿಯಿಂದಲೇ ಕೇಳಿಬಂತು! ದೂರು! ಸಾಗರ ಶಾಸಕರ ವಿರುದ್ಧ ಏನದು ಕಂಪ್ಲೆಂಟ್!?

Malenadu Today

KARNATAKA NEWS/ ONLINE / Malenadu today/ Aug 26, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆಯ ರಾಜಕಾರಣದಲ್ಲೀಗ ಕಿರುಕುಳದ ಆರೋಪ ಮತ್ತೆ ಕೇಳಿಬಂದಿದೆ. ಈ ಹಿಂದಿನ ಸರ್ಕಾರದ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಕೇಳಿಬಂದಿದ್ದ ಆರೋಪ ಇದೀಗ ಕಾಂಗ್ರೆಸ್​ನವರ ವಿರುದ್ಧ  ಕೇಳಿಬರುತ್ತಿದೆ. 

 

ಕಳೆದ ಮೂರು ತಿಂಗಳಿನಿಂದ ಸಾಗರ ಕ್ಷೇತ್ರದ ಶಾಸಕರು ಹಾಗೂ ಅವರ ಬೆಂಬಲಿಗರು ಅಧಿಕಾರಿಗಳ ಮೂಲಕ ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ರತ್ನಾಕರ್ ಹೊನಗೋಡು ಆರೊಪಿಸಿದ್ಧಾರೆ. 

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹೊನಗೋಡು ರತ್ನಾಕರ್​ರವರು  ಸಾಗರ ತಾಲ್ಲೂಕಿನಲ್ಲಿ ಭಯದ ವಾತವಾರವಿದೆ. 2013ರ ಲ್ಲಿದ್ದ ಸನ್ನಿವೇಶ ಇದೀಗ ಮರುಕಳಿಸಿದೆ. ಈ ವಿಷಯದಲ್ಲಿ ಕಾಗೋಡು ತಿಮ್ಮಪ್ಪವರು ಮೌನ ವಹಿಸಬಾರದು ಎಂದು ಮನವಿ ಮಾಡಿದ್ದಾರೆ. 

 

ಕಲ್ಲುಕ್ವಾರಿ , ಮರಳು , ಮಣ್ಣು ಸಾಗಣೆಯಲ್ಲಿ ಪಕ್ಷದ ವಿಷಯಗಳು ಪ್ರವೇಶ ಮಾಡುತ್ತಿದ್ದು, ಬಿಜೆಪಿ ಪರವಾದವರ ವಿರುದ್ಧ ಕಾನೂನು ಸಮರ ಸಾರಲಾಗುತ್ತಿದೆ. ಬಿಜೆಪಿ ಪರವಿದ್ದವರ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಅಲ್ಲದೆ ಅವುಗಳನ್ನು ವಾರ ಕಳೆದರೂ ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಶಾಸಕರ ಬೆಂಬಲಿಗರ ವಾಹನಗಳು ಸೀಜ್​ ಆದರೆ ತಕ್ಷಣವೇ ಬಿಡುಗಡೆಯಾಗುತ್ತಿದೆ ಎಂದ ಹೊನಗೋಡು ರತ್ನಾಕರ್​,  ಇದು ಒಂದು ಇಲಾಖೆಗೆ ಸಿಮಿತವಾಗದೆ ಎಲ್ಲ ಇಲಾಖೆಗಳಲ್ಲೂ ನಡೆಯುತ್ತಿದೆ ಎಂದಿದ್ಧಾರೆ. 

ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆಯಲ್ಲಿ ಬೆಂಬಲ ನೀಡಲಿಲ್ಲ ಎನ್ನುವ ಕಾರಣಕ್ಕೆ, ಅಧಿಕಾರಿಗಳ ಮೂಲಕ ಜನಪ್ರತಿನಿಧಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದ್ಧಾರೆ.   


ಇನ್ನಷ್ಟು ಸುದ್ದಿಗಳು


 

Share This Article