ಒಂದೇ ದಿನ ಮೂರು ಕಡೆ ದರೋಡೆ, ಮೂವರ ಮೇಲೆ ಹಲ್ಲೆ ! ಎಲೆಕ್ಷನ್‌ ಟೈಂನಲ್ಲಿ ಪಲ್ಸರ್‌ ಬೈಕ್‌ ತಿಬ್ಬಲ್‌ ರೈಡರ್ಸ್‌ ಆತಂಕ!

Pulsar bike tibble riders worried ahead of election time Three robberies, three attacked on the same day What happened on the Bhadravathi-Holehonnur road?

ಒಂದೇ ದಿನ ಮೂರು ಕಡೆ ದರೋಡೆ,  ಮೂವರ ಮೇಲೆ ಹಲ್ಲೆ ! ಎಲೆಕ್ಷನ್‌ ಟೈಂನಲ್ಲಿ ಪಲ್ಸರ್‌ ಬೈಕ್‌ ತಿಬ್ಬಲ್‌ ರೈಡರ್ಸ್‌ ಆತಂಕ!
Bhadravathi-Holehonnur road

Shivamogga Mar 20, 2024 Bhadravathi-Holehonnur road ಒಂದೇ ದಿನ ಮೂರು ಕಡೆ ಪಲ್ಸರ್‌ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ದರೋಡೆ ಮಾಡಿದ್ದಷ್ಟೆ ಅಲ್ಲದೆ ಮಾರಣಾಂತಿಕ ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ. ಇವತ್ತು ಬೆಳಗ್ಗೆ ಮಲೆನಾಡು ಟುಡೆ ಹೊಳೆಹೊನ್ನೂರು ಪೊಲೀಸ್‌ ಸ್ಟೇಷನ್‌ ಲಿಮಿಟ್ಸ್‌ ನಲ್ಲಿ ನಡೆದ ದರೋಡೆ ಹಾಗೂ ದರೋಡೆ ಯತ್ನದ ಘಟನೆ ಬಗ್ಗೆ ವರದಿ ಮಾಡಿತ್ತು. ಇದರೆ ಬೆನ್ನಲ್ಲೆ, ಈ ಪ್ರಕರಣಕ್ಕೆ ಪೂರಕವಾದ ಮತ್ತೊಂದು ಘಟನೆ  ಅದೇ ದಿನ ಅಂದರೆ ಹದಿನೆಂಟನೇ ತಾರೀಖು ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. 

ಭದ್ರಾವತಿ ಗ್ರಾಮಾಂತರ ಪೊಲೀಸ್‌ ಸ್ಟೇಷನ್‌ 

ಭದ್ರಾವತಿ ಗ್ರಾಮಾಂತರ ಪೊಲೀಸ್‌ ಸ್ಟೇಷನ್‌ನಲ್ಲಿ ಈ ಸಂಬಂಧ ಎಫ್‌ಐಆರ್‌ ದಾಖಲಾಗಿದೆ. ಭದ್ರಾವತಿ ಹೊಳೆಹೊನ್ನೂರು ರಸ್ತೆಯ ಕಾಗೆಹಳ್ಳ ಕ್ರಾಸ್‌ ಬಳಿ ಹಣ್ಣಿನ ವ್ಯಾಪಾರಕ್ಕಾಗಿ ಚಪ್ಪರ ಹಾಕುತ್ತಿದ್ದರು. ಈ ವೇಳೆ ಹೊಳೆಹೊನ್ನೂರು ಕಡೆಯಿಂದ ಬಂದ ಫಲ್ಸರ್‌ ಬೈಕ್‌ನಲ್ಲಿದ್ದ ಮೂವರು ಬಾಬಳ್ಳಿಗೆ ದಾರಿ ಕೇಳಿದ್ದಾರೆ. 

ಇನ್ನೇನು ವಿಳಾಸ ಹೇಳಿ ದಾರಿ ತೋರಿಸಬೇಕು ಎನ್ನುವಷ್ಟರಲ್ಲಿ ಬೈಕ್‌ನಿಂದ ಇಳಿದ ಒಬ್ಬಾತ ಲೋಕೇಷನ್‌ ಕಳುಹಿಸಿದ್ದಾರೆ ಸ್ವಲ್ಪ ನೋಡಿ ಎಂದು ಹತ್ತಿರ ಬಂದು ದೂರುದಾರರ ಮೊಬೈಲ್‌ ಕಸಿದುಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಪ್ರತಿರೋಧ ಒಡ್ಡಿದ ಹಿನ್ನೆಲೆ, ಆರೋಪಿಗಳ ಪೈಕಿ ಒಬ್ಬ ಅಲ್ಲಿಯೇ ಇದ್ದ ಹಾರೆಯಿಂದ ದೂರುದಾರರ ತಲೆಗೆ ಹೊಡೆದಿದ್ದಾನೆ. ಇನ್ನೊಬ್ಬ ತನ್ನ ಬಳಿ ಇದ್ದ ಚಾಕುವಿನಿಂದ ಚುಚ್ಚಿದ್ದಾನೆ. ಅಲ್ಲದೆ ಮೊಬೈಲ್‌ ಕಿತ್ತುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. 

ಘಟನೆ ಬೆನ್ನಲ್ಲೆ ಅಲ್ಲಿಗೆ ಬಂದ ದೂರುದಾರರ ಸಂಬಂಧಿಕರು ಗಾಯಾಳುವನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಬಳಿಕ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಕರೆತಂದು ಅಡ್ಮಿಟ್‌ ಮಾಡಿದ್ದಾರೆ. ಸದ್ಯ ಪ್ರಕರಣ ಸಂಬಂಧ ಕೇಸ್‌ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಹೊಳೆಹೊನ್ನೂರು ಭಾಗದಲ್ಲಿ ನಡೆದ ಘಟನೆಗಳಿಗೂ ಇಲ್ಲಿನ ಘಟನೆಗೂ ಸಾಮ್ಯತೆ ಇದ್ದು ಒಂದೇ ತಂಡ ಈ ದುಷ್ಕೃತ್ಯವೆಸಗಿರುವ ಬಲವಾದ ಅನುಮಾನ ಪೊಲೀಸರದ್ದಾಗಿದೆ. ಈ ಮಧ್ಯೆ ಪಲ್ಸರ್‌ ಬೈಕ್‌ ದುಷ್ಕರ್ಮಿಗಳಿಂದಾಗಿ ಹೊಳೆಹೊನ್ನೂರು-ಭದ್ರಾವತಿ ಭಾಗದಲ್ಲಿ ಆತಂಕ ಎದುರಾಗಿದೆ. ಆರೋಪಿಗಳನ್ನ ಶೀಘ್ರವೇ ಪತ್ತೆ ಮಾಡಿ ಪೊಲೀಸರು ಆತಂಕ ದೂರ ಮಾಡುತ್ತಾರೆ ಎಂಬ ನಂಬಿಕೆಯಲ್ಲಿ ಜನರಿದ್ದಾರೆ. 

ಇದನ್ನ ಸಹ ಓದಿ : ದರೋಡೆಕೋರರಿದ್ದಾರೆ ಎಚ್ಚರಿಕೆ ! ರಸ್ತೆ ಬದಿಯಲ್ಲಿದ್ದವರಿಗೆ ಚಾಕು ತೋರಿಸಿ ರಾಬರಿ! ಪಲ್ಸರ್‌ ಬೈಕ್‌ನಲ್ಲಿ ಬಂದವರಿಂದ 2 ಕಡೆ ಕೃತ್ಯ