ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಹಿನ್ನೆಲ್ಲೆ 15 ವ್ಯಕ್ತಿಗಳ ವಿರುದ್ಧ Externment Order! ಏನಿದು?

Externment Order against 15 persons in the background of Hindu Mahasabha Ganapati procession! ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ 15 ವ್ಯಕ್ತಿಗಳ ವಿರುದ್ಧ Externment Order! ಏನಿದು?

ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಹಿನ್ನೆಲ್ಲೆ  15 ವ್ಯಕ್ತಿಗಳ ವಿರುದ್ಧ Externment Order! ಏನಿದು?

KARNATAKA NEWS/ ONLINE / Malenadu today/ Sep 27, 2023 SHIVAMOGGA NEWS’ 

ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಬಂದೋಬಸ್ತ್ ಹಿನ್ನೆಲೆಯಲ್ಲಿ 1300 ಕ್ಕೂ ಹೆಚ್ಚು ರೌಡಿ ಶೀಟರ್​ ವಿರುದ್ದ ಪ್ರಿವೆಂಟೀವ್ ಕೇಸ್​ನ್ನ ಮುಂದುವರಿಸಲಾಗಿದೆ. ಈ ಬಗ್ಗೆ ಮಾತನಾಡಿದ ಎಸ್​ಪಿ ಮಿಥುನ್ ಕುಮಾರ್​, ರೌಡಿ ಶೀಟರ್ಸ್​ ಹಾಗೂ ಜೈಲಿನಿಂದ ಹೊರಬಂದವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ಅಲ್ಲದೆ ಕಳೆದ 25 ದಿನಗಳಲ್ಲಿ ಸಮಸ್ಯೆ ಸೃಷ್ಟಿಸುವ 15 ವ್ಯಕ್ತಿಗಳ ವಿರುದ್ಧ Externment Order (ಸಮಾಜ ಶಾಂತಿಗೆ ಭಂಗ ಉಂಟುಮಾಡುವ ವ್ಯಕ್ತಿಗಳನ್ನು ನಿರ್ದಿಷ್ಟ ಕಾಲಾವಧಿಯಲ್ಲಿ ನಿರ್ದಿಷ್ಟ ಸ್ಥಳದಿಂದ ಹೊರಹಾಕುವ ಕಾನೂನು ಪ್ರಕ್ರಿಯೆ ) ಹೊರಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಮೇಲಾಗಿ ವಿವಿಧ ಮುಖಂಡರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಮೂಲಕ ಯಾರಿಂದ ಸಮಸ್ಯೆಯಾಗುತ್ತದೆ ಎಂಬುದನ್ನ ತಿಳಿದುಕೊಂಡು ಅವರ ಮೂಲಕವೇ ಅಂತಹ ವ್ಯಕ್ತಿಗಳು ಖುದ್ದಾಗಿ ನಾಲ್ಕೈದು ದಿನ ಶಿವಮೊಗ್ಗದಲ್ಲಿ ಇರದಂತೆ ಮನವೊಲಿಸಲಾಗಿದೆ. ಅಲ್ಲದೆ ಕ್ರಿಮಿನಲ್​ ಅಫೆಂಡರ್ಸ್​​ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗಿದೆ ಎಂದ ಎಸ್​ಪಿ ಮಿಥುನ್​ ಕುಮಾರ್, ಬಂದೋಬಸ್ತ್​ ವ್ಯವಸ್ಥೆಯು ಸಮರ್ಪಕವಾಗಿದೆ ಎಂದು ತಿಳಿಸಿದ್ದಾರೆ. 

ಇನ್ನೂ ವಿನಾಯಕ ವಿಸರ್ಜನೆಗೆ ಭದ್ರಾವತಿಯಲ್ಲಿ 150 ಕ್ಕೂ ಹೆಚ್ಚು ಸ್ವಯಂಸೇವಕರು ಪೊಲೀಸ್ ಇಲಾಖೆಯೊಂದಿಗೆ ಕೆಲಸ ಮಾಡಿದ್ದಾರೆ. ಇನ್ನೂ ಶಿವಮೊಗ್ಗದ ಸಿಟಿಯಲ್ಲಿ ನಾನೂರು ಜನರು ಸ್ವಯಂಸೇವಕರು ಇಲಾಖೆಯೊಂದಿಗೆ ಕೈ ಜೋಡಿಸಿದ್ದಾರೆ. ಈ ಪೈಕಿ ಮೂನ್ನೂರು ಜನರನ್ನ ಮೆರವಣಿಗೆಯಲ್ಲಿ ಇಲಾಖೆಯೊಂದಿಗೆ ಹೆಜ್ಜೆಹಾಕಲಿದ್ದಾರೆ. ಅಲ್ಲದೆ ಉಳಿದ ನೂರು ಮಂದಿಯನ್ನು  ಆಹಾರ ಸರಭರಾಜಿಗಾಗಿ ಬಳಸಿಕೊಳ್ಳಲಾಗುತ್ತದೆ ಎಂದು ಎಸ್​ಪಿ ತಿಳಿಸಿದ್ದಾರೆ. ಸ್ವಯಂಸೇವಕರಿಗೆ ರಿಪ್ಲೆಕ್ಟೀವ್ ಜಾಕೇಟ್​ನ್ನು ನೀಡಲಾಗಿದೆ ಎಂದ ಮಿಥುನ್ ಕುಮಾರ್ ಐಪಿಎಸ್​ ನಾಳಿನೆ ಮೆರವಣಿಗೆಯಲ್ಲಿ 8 ಡ್ರೋಣ್​ನ್ನ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ನಿವೃತ್ತ ಯೋಧರು ಸೇರಿದಂತೆ ಹಲವರು ಬಂದೋಬಸ್ತ್​ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮೆರವಣಿಗೆ ವೇಳೆ ಯಾವುದೇ ರೀತಿಯ ಡಿಜೆಗೆ ಅವಕಾಶ ಇಲ್ಲ ಎಂದ ಎಸ್​ಪಿ ಮಿಥುನ್​ ಕುಮಾರ್​ರವರು ಈ ನಿಟ್ಟಿನಲ್ಲಿ ಆಯೋಜಕರ ಬಳಿಯಲ್ಲಿಯು ಮಾತನಾಡುತ್ತೇವೆ ಎಂದಿದ್ದಾರೆ. ರಿಪ್ಪನ್​ಪೇಟೆ ಹಿಂದೂ ಮಹಾಸಭಾ ಗಣಪತಿ ಹಾಗೂ ಸಾಗರದಲ್ಲಿಯು ಗಣಪತಿ ಮೆರವಣಿಗೆ ನಡೆಯುತ್ತಿದೆ. ಅಲ್ಲದೆ ಶಿರಾಳಕೊಪ್ಪದಲ್ಲಿ ಈದ್ ಮಿಲಾದ್ ಮೆರವಣಿಗೆ ನಡೆಯಲಿದೆ. ಎಲ್ಲದಕ್ಕೂ ಪೂರಕವಾದ ಬಂದೋಬಸ್ತ್​ ಮಾಡಲಾಗಿದ್ದು, ಪ್ರತ್ಯೇಕವಾದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಎಸ್​ಪಿ ಮಿಥುನ್ ಕುಮಾರ್​ ತಿಳಿಸಿದ್ದಾರೆ. 


ಇನ್ನಷ್ಟು ಸುದ್ದಿಗಳು 

  1. BREAKING NEWS / ಜೋಗದ ಸಮೀಪ ನೀರಿಗಿಳಿದಿದ್ದ ಓರ್ವ ಅಧಿಕಾರಿ ಮತ್ತು ಬ್ಯಾಂಕ್ ಉದ್ಯೋಗಿ ಸಾವು! ಕಾರ್ಗಲ್​ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದ್ದೇನು?

  2. ಲೋಡ್ ಗಾಡಿಯಿಂದ ಬಿದ್ದ ಮರದ ತುಂಡು ಬಡಿದು ಬೈಕ್​ ಸವಾರನ ಸ್ಥಿತಿ ಗಂಭೀರ! ಹೀಗೂ ಆಗುತ್ತೆ ಹುಷಾರು ತಪ್ಪದಿರಿ ವಾಹನ ಸವಾರರೇ?

  3. ದೌರ್ಜನ್ಯ ಪ್ರಕರಣ ! ಶಿವಮೊಗ್ಗ ಡಿಸಿಯಿಂದ 15 ಸೂಚನೆ! ಯುವಕನ ಸಾವು, ಮರಳು, ಅಧಿಕಾರಿಗಳಿಂದ ಕಿರುಕುಳ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದೇನು?