ವಿಡಿಯೋ ಲೀಕ್ ಬೆದರಿಕೆ ! ಕಾರು ಚಾಲಕನ ವಿರುದ್ಧ ಸಿಇಎನ್​ ಠಾಣೆಯಲ್ಲಿ ದಾಖಲಾಯ್ತು ಕೇಸ್!

Video leak threat! A case has been registered against the driver of the car at CEN police station.

ವಿಡಿಯೋ ಲೀಕ್  ಬೆದರಿಕೆ ! ಕಾರು ಚಾಲಕನ ವಿರುದ್ಧ ಸಿಇಎನ್​ ಠಾಣೆಯಲ್ಲಿ ದಾಖಲಾಯ್ತು ಕೇಸ್!

SHIVAMOGGA |  Dec 16, 2023  |  ಮಹಿಳೆಯೊಂದಿಗೆ ಸಲುಗೆ ಬೆಳೆಸಿ ವಿಡಿಯೋ ಕಾಲ್‌ನಲ್ಲಿ ಮಾತನಾಡುವಾಗ ಆಕೆಯ ನಗ್ನ ಚಿತ್ರಗಳನ್ನು ರೆಕಾರ್ಡ್ ಮಾಡಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದ ಕಾರು ಚಾಲಕನ ವಿರುದ್ಧ  ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಸಿಇಎನ್ ಪೊಲೀಸ್ ಸ್ಟೇಷನ್

ಈ ಸಂಬಂಧ ಭದ್ರಾವತಿ ತಾಲ್ಲೂಕು ನ ನಿವಾಸಿಯೊಬ್ಬರು ದೂರು ನೀಡಿದ್ದು ಶಿವಮೊಗ್ಗದ ವ್ಯಕ್ತಿ ವಿರುದ್ಧ ಕೇಸ್ ದಾಖಲಾಗಿದೆ.  ಕಳೆದ ವರ್ಷ ಮಹಿಳೆಯ ಕುಟುಂಬದವರು ದೇವಸ್ಥಾನಕ್ಕೆ ಹೋಗುವ ಸಲುವಾಗಿ ಕಾರೊಂದನ್ನ ಬಾಡಿಗೆ ಪಡೆದಿದ್ದರಂತೆ. ಆನಂತರ ಕಾರಿನ ಚಾಲಕ ಪರಿಚಯವಾಗಿ ಮಹಿಳೆಯ ಜೊತೆ ವಿಡಿಯೋ ಕಾಲ್ ಚಾಟ್​ ನಡೆದಿದೆ. 

READ : ಶಿವಮೊಗ್ಗ ನಗರ ನಾಗರಿಕರ ಗಮನಕ್ಕೆ | ಎರಡು ದಿನ ನೀರು ಪೂರೈಕೆ ಬಂದ್ ! ಕಾರಣವೇನು ಗೊತ್ತಾ?

ಈ ಮಧ್ಯೆ ಮಹಿಳೆಯ ವಿಡಿಯೋ ಕಾಲ್​ನ ನಗ್ನ ವಿಡಿಯೋ ಇಟ್ಟುಕೊಂಡು ಕಾರು ಚಾಲಕ 20 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದಲ್ಲದೆ ವಿಡಿಯೋವನ್ನ ಆಕೆಯ ಪತಿಗೆ ಕಳುಹಿಸಿದ್ದನಂತೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತ ನಿವಾಸಿ ಶಿವಮೊಗ್ಗ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೇ ನಡೆಸ್ತಿದ್ದಾರೆ.