ಮಾಚೇನಹಳ್ಳಿ ಶಾಂತಲಾ ಫ್ಯಾಕ್ಟರಿಗೆ ಹೋಗ್ತಿದ್ದಾಗ ದುರಂತ! ನಿದಿಗೆ ಕೆರೆಬಳಿ ಕಾರುಗಳ ನಡುವೆ ಡಿಕ್ಕಿ! ಓರ್ವ ಸಾವು, ಇಬ್ಬರಿಗೆ ಗಾಯ

Collision between cars near Nidige lake! One killed, two injured Machenahalli Shantala Factory

ಮಾಚೇನಹಳ್ಳಿ ಶಾಂತಲಾ ಫ್ಯಾಕ್ಟರಿಗೆ ಹೋಗ್ತಿದ್ದಾಗ ದುರಂತ!  ನಿದಿಗೆ ಕೆರೆಬಳಿ ಕಾರುಗಳ ನಡುವೆ ಡಿಕ್ಕಿ! ಓರ್ವ ಸಾವು, ಇಬ್ಬರಿಗೆ ಗಾಯ
Machenahalli Shantala Factory

Shivamogga  Apr 8, 2024Machenahalli Shantala Factory  ಶಿವಮೊಗ್ಗದ ನಿದಿಗೆ ಕೆರೆಯ ಬಳಿ ಇವತ್ತು ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ.  ರೆನಾಲ್ಡ್  ಕಾರು ಹಾಗೂ ವ್ಯಾಗನರ್‌ ನಡುವೆ ಸಂಭವಿಸಿದೆ ಮುಖಾಮುಖಿ ಡಿಕ್ಕಿಯಿಂದಾಗಿ ಇಬ್ಬರು ಗಾಯಗೊಂಡಿದ್ದು ಓರ್ವರು ಸಾವನ್ನಪ್ಪಿದ್ದಾರೆ. 

malenadutoday

 

ಇವತ್ತು ಬೆಳಗ್ಗೆ ನಿದಿಗೆ ಕೆರೆಯ ಬಳಿ ಘಟನೆ ಸಂಭವಿಸಿದೆ. ಲಿಂಗದಹಳ್ಳಿಯಿಂದ ಬರುತ್ತಿದ್ದ ರೆನಾಲ್ಡ್‌ ಕಾರು ಶಿವಮೊಗ್ಗದಿಂದ ಮಾಚೇನಹಳ್ಳಿಗೆ ಹೋಗುತ್ತಿದ್ದ ವ್ಯಾಗನರ್‌ ಕಾರಿಗೆ ಡಿಕ್ಕಿಯಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ರೋಡ್‌ ಕ್ರಾಸಿಂಗ್‌ ಮಾಡಿ ಒನ್‌ವೆ ಮಾಡಲಾಗಿದೆ.ಇದರ ಅರಿವು ದಾರಿಯಲ್ಲಿ ಬರುತ್ತಿರುವ ವಾಹನಗಳಿಗೆ ಗೊತ್ತಾಗುತ್ತಿಲ್ಲ. ಇವತ್ತಿನ ಘಟನೆಗೂ ಇದೇ ಕಾರಣ ಎನ್ನಲಾಗುತ್ತಿದೆ. 

malenadutoday

ರೆನಾಲ್ಡ್‌ ಕಾರಿನ ಚಾಲಕ ಇನ್ನೊಂದು ಬದಿಯಲ್ಲಿ ಸಾಗಬೇಕಿತ್ತು, ಒನ್‌ ವೇನಲ್ಲಿ ಬಂದ ಕಾರು ಎದುರಿಗೆ ಬರುತ್ತಿದ್ದ ವ್ಯಾಗನರ್‌ಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ವ್ಯಾಗನರ್‌ ಕಾರು ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ತೀವ್ರ ಪೆಟ್ಟಿನಿಂದ ಸಾವನ್ನಪ್ಪಿರುವ ಅವರನ್ನ ಶಾಂತಲಾ ಫ್ಯಾಕ್ಟರಿಯ ಮಾರ್ಕೆಟಿಂಗ್‌ ಮ್ಯಾನೇಜರ್‌ ಮೇಘರಾಜ್‌ ಎಂದು ಗುರುತಿಸಲಾಗಿದೆ. 

malenadutoday



ಇನ್ನೂ  ವಿಷಯ ತಿಳಿಯುತ್ತಲೇ ಶಾಂತಲಾ ಫ್ಯಾಕ್ಟರಿ ಅಧಿಕಾರಿಗಳು ದೌಡಾಯಿಸಿದ್ದು ಸದ್ಯ ಮೆಗ್ಗಾನ್‌ ಆಸ್ಪತ್ರೆಯ ಆವರಣದಲ್ಲಿದ್ದಾರೆ

ಗಾಯಾಳುಗಳ ಬಗ್ಗೆ ಇನ್ನಷ್ಟೆ ಮಾಹಿತಿ ಲಭ್ಯವಾಗಬೇಕಿದ್ದು ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಸ್ಟೇಷನ್‌ನಲ್ಲಿ ಕೇಸ್‌ ದಾಖಲಿಸಲಾಗಿದೆ.