ಭದ್ರಾ ಜಲಾಶಯದಲ್ಲಿ ಕಮ್ಮಿಯಾಯ್ತು ಒಳಹರಿವು! ಎಷ್ಟಿದೆ ನೀರಿನ ಮಟ್ಟ ? ವಿವರ ಇಲ್ಲಿದೆ VIDEO ನೋಡಿ

The inflow into Bhadra reservoir has reduced! What is the water level? Here's the details ಭದ್ರಾ ಜಲಾಶಯದಲ್ಲಿ ಕಮ್ಮಿಯಾಯ್ತು ಒಳಹರಿವು! ಎಷ್ಟಿದೆ ನೀರಿನ ಮಟ್ಟ ? ವಿವರ ಇಲ್ಲಿದೆ

ಭದ್ರಾ  ಜಲಾಶಯದಲ್ಲಿ ಕಮ್ಮಿಯಾಯ್ತು ಒಳಹರಿವು! ಎಷ್ಟಿದೆ ನೀರಿನ ಮಟ್ಟ ? ವಿವರ ಇಲ್ಲಿದೆ VIDEO ನೋಡಿ

KARNATAKA NEWS/ ONLINE / Malenadu today/ Jul 29, 2023 SHIVAMOGGA NEWS

ಮಳೆ ಮಲೆನಾಡಿನಲ್ಲಿ ಕೊಂಚ ವಿರಾಮ ನೀಡಿದ್ದು, ಇತ್ತ ಭದ್ರಾ ಜಲಾಶಯಕ್ಕೂ ಒಳಹರಿವು ಕಡಿಮೆಯಾಗಿದೆ. ಭದ್ರಾ ಜಲಾಶಯದ ಇವತ್ತಿನ ನೀರಿನ ಮಟ್ಟ 160.9 ಅಡಿಯಷ್ಟಿದೆ. ನಿನ್ನೆ ಲಭ್ಯವಾಗಿದ್ದ ಹಿಂದಿನ ಅಂಕಿ ಅಂಶಗಳ ಪ್ರಕಾರ,  ಸುಮಾರು 16 ಸಾವಿರ ಕ್ಯೂಸೆಕ್ಸ್​ ನೀರು ಜಲಾಶಯಕ್ಕೆ ಹರಿದು ಬರುತ್ತಿತ್ತು. ಕಳೆದ 24 ಗಂಟೆಯಲ್ಲಿ ಈ ಪ್ರಮಾಣ ಕಡಿಮೆಯಾಗಿದೆ. ಜಲಾಶಯಕ್ಕೆ ಪ್ರಸ್ತುತ 13659 cusecs ನೀರು ಹರಿದು ಬರುತ್ತಿದೆ. ಜಲಾಶಯದಲ್ಲಿ 39.435 ಟಿಎಂಸಿ ನೀರು ಸಂಗ್ರಹವಾಗಿದೆ. ಶಿವಮೊಗ್ಗದಲ್ಲಿ ಮಳೆ ಕೊಂಚ ಬಿಡುವು ನೀಡಿದಂತಿದೆ. ಜಿಲ್ಲೆಯಲ್ಲಿ ಮೋಡಗಳ ನಡುವೆ ಬಿಸಿಲು ಮೂಡುತ್ತಾ, ಆಗಾಗ ಮಳೆಯಾಗುತ್ತಿದೆ . 

ಇನ್ನೂ  ಲಿಂಗನ ಮಕ್ಕಿ ಜಲಾಶಯದಲ್ಲಿ (Lingana Makki Reservoir) ನೀರಿನ ಒಳಹರಿವು ನಿನ್ನೆಗಿಂತಲೂ ಕಡಿಮೆಯಾಗಿದೆ. ನಿನ್ನೆ ಲಿಂಗನ ಮಕ್ಕಿ ಡ್ಯಾಂ ಬರೋಬ್ಬರಿ  25631.00 cusecs  ನೀರು ಹರಿದುಬಂದಿತ್ತು. ಇವತ್ತು ಬೆಳಗ್ಗೆ 8 ಗಂಟೆಗೆ ಲಭ್ಯವಾದ ಮಾಹಿತಿ ಪ್ರಕಾರ, ಲಿಂಗನಮಕ್ಕಿ ಜಲಾಶಯಕ್ಕೆ  19807  cusecs ನೀರು ಹರಿದು ಬಂದಿದೆ. ನಿನ್ನೆ ಡ್ಯಾಂ ಲೆವಲ್​ 1785.55ft   ನಷ್ಟಿತ್ತು. ಇವತ್ತು 1786.30ft   ರಷ್ಟಿದೆ. ಡ್ಯಾಂ ಸಾಮರ್ಥ್ಯದ ಶೇಕಡಾ 43.45 ರಷ್ಟು ಜಲಾಶಯದಲ್ಲಿ ನೀರು ಸಂಗ್ರಹವಾಗಿದೆ. ಇನ್ನೂ ತಳಕಳಲೇ ಡ್ಯಾಂ (Talakalale Dam) ನ ಮಟ್ಟ 1694.85 ರಷ್ಟಿದೆ. 


SHIVAMOGGA AIRPORT / ಶಿವಮೊಗ್ಗ-ಬೆಂಗಳೂರು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್!

ರೈಲ್ವೆ ಪ್ರಯಾಣಿಕರಿಗೆ ಸೂಚನೆ! ಜನಶತಾಬ್ದಿ ಸೇರಿ ಹಲವು ಟ್ರೈನ್​ಗಳ ಸಂಚಾರದಲ್ಲಿ ವ್ಯತ್ಯಯ! ವಿವರ ಇಲ್ಲಿದೆ



 ​