KARNATAKA NEWS/ ONLINE / Malenadu today/ Jul 29, 2023 SHIVAMOGGA NEWS
ಬೆಂಗಳೂರು: ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟದ ಪ್ರಕರಣದ ವೇಳೆ ಎನ್ಐಎ ಅಧಿಕಾರಿಗಳಿಗೆ ಶಿವಮೊಗ್ಗದಲ್ಲಿ ಸ್ಫೋಟಕಕ್ಕೆ ಸಂಬಂಧಿಸಿದ ವಸ್ತುವೊಂದು ಸಿಕ್ಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಎನ್ಐಎ ಅಧಿಕಾರಿಗಳು ಇದೇ ಗುರುವಾರದಂದು ಶಿವಮೊಗ್ಗದಲ್ಲಿ ಶಂಕಿತ ಯಾಸಿನ್ನನ್ನ ಸ್ಥಳ ಮಹಜರ್ಗೆ ಕರೆತಂದಿದ್ದಾರೆ. ಈ ವೇಳೆ ಆತನಿಗೆ ಸಂಬಂಧಿಸಿದ ಮನೆಯೊಂದರಲ್ಲಿ ಸ್ಫೋಟಕದ ವಸ್ತು ಅಧಿಕಾರಿಗಳಿಗೆ ಲಭ್ಯವಾಗಿದೆ.
ಕಳೆದ ಗುರುವಾರದಂದು ಯಾಸಿನ್ನನ್ನ ಕರೆದುಕೊಂಡು ಬಂದಿದ್ದ ಎನ್ಐಎ ಅಧಿಕಾರಿಗಳು ಶಿವಮೊಗ್ಗ, ತೀರ್ಥಹಳ್ಳಿ, ಹೊನ್ನಾಳಿ ಸುತ್ತಮುತ್ತ ಸ್ಥಳಮಹಜರು ನಡೆಸಿದ್ದಾರೆ. ಈ ಮಹಜರ್ ವೇಳೆ ಯಾಸಿನ್ ತನ್ನ ಸಂಬಂಧಿಕರ ಮನೆಯೊಂದರ ಸ್ಲಾಬ್ ಮೇಲೆ ಅಡಗಿಸಿಟ್ಟಿದ್ದ ಸ್ಫೋಟಕಕ್ಕೆ ಸಂಬಂಧಿಸಿದ ವಸ್ತುವೊಂದನ್ನ ತೆಗೆದು ಅಧಿಕಾರಿಗಳಿಗೆ ನೀಡಿದ್ಧಾನೆ. ರೆಡ್ ಪಾಸ್ಪರಸ್ ಪೌಡರ್ ಇದಾಗಿದ್ದು, ಸ್ಫೋಟಕದಲ್ಲಿ ಬಳಸುವ ಗನ್ಪೌಡರ್ಗೆ ಪರ್ಯಾಯವಾಗಿ ಬಳಕೆ ಮಾಡಲಾಗುತ್ತದೆ ಎಂದು ವಿಚಾರಣೆಯಲ್ಲಿ ಗೊತ್ತಾಗಿದ್ದು, ಎನ್ಎಐ ಅಧಿಕಾರಿಗಳು ವಸ್ತುವನ್ನು ಕೋರ್ಟ್ಗೆ ಹಾಜರು ಪಡಿಸಿದ್ದಾರೆ.
SHIVAMOGGA AIRPORT / ಶಿವಮೊಗ್ಗ-ಬೆಂಗಳೂರು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್!
ರೈಲ್ವೆ ಪ್ರಯಾಣಿಕರಿಗೆ ಸೂಚನೆ! ಜನಶತಾಬ್ದಿ ಸೇರಿ ಹಲವು ಟ್ರೈನ್ಗಳ ಸಂಚಾರದಲ್ಲಿ ವ್ಯತ್ಯಯ! ವಿವರ ಇಲ್ಲಿದೆ


