ಶಿವಮೊಗ್ಗ ಭದ್ರಾವತಿ-ಮಸರಹಳ್ಳಿ ರೈಲ್ವೆ ಮಾರ್ಗದಲ್ಲಿ ರೈಲಿಗೆ ಸಿಲುಕಿ ವೃದ್ಧ ಸಾವು!

Shimoga: Elderly man dies after being hit by train on Bhadravathi-Masarahalli railway line

ಶಿವಮೊಗ್ಗ ಭದ್ರಾವತಿ-ಮಸರಹಳ್ಳಿ ರೈಲ್ವೆ ಮಾರ್ಗದಲ್ಲಿ  ರೈಲಿಗೆ ಸಿಲುಕಿ ವೃದ್ಧ ಸಾವು!

ಶಿವಮೊಗ್ಗ ಜಿಲ್ಲೆ ಭದ್ರಾವತಿ ಸಮೀಪ ರೈಲ್ವೆ ಹಳಿಗೆ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಈ ಸಂಬಂದ ರೈಲ್ವೆ ಪೊಲೀಸರು ಪ್ರಕಟಣೆಯನ್ನು ನೀಡಿದ್ದಾರೆ. 

ಭದ್ರಾವತಿ – ಮಸರಹಳ್ಳಿ ರೈಲ್ವೆ ಮಾರ್ಗ (bhadravati masarahalli rail) ದಲ್ಲಿ ಸುಮಾರು 50 ರಿಂದ 55 ವರ್ಷದ ಅಪರಿಚಿತ ಪುರುಷ ರೈಲಿಗೆ ಸಿಕ್ಕು ಮೃತಪಟ್ಟಿದ್ದಾನೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

READ : ಶಿವಮೊಗ್ಗ ಜಿಲ್ಲಾ ಪಂಚಾಯಿತಿಯಲ್ಲಿ ಒಟ್ಟು 39 ಕ್ಷೇತ್ರಗಳು ಫೈನಲ್! ಮೀಸಲು ಎಷ್ಟು? ಕರ್ನಾಟಕ ರಾಜ್ಯ ಪತ್ರದಲ್ಲಿರುವ ಪ್ರಕಟಣೆಯಲ್ಲಿ ಏನಿದೆ !

ಸುಮಾರು 5.5 ಅಡಿ ಎತ್ತರ, ಸಾಧಾಕಪ್ಪು ಮೈ ಬಣ್ಣ, ತಲೆಯಲ್ಲಿ 2 ಇಂಚು ಕಪ್ಪು ಕೂದಲು ಬಿಟ್ಟಿದ್ದು, ಅರ್ಧ ಇಂಚು ಉದ್ದದ ಕಪ್ಪು ಬಿಳಿ ಮಿಶ್ರಿತ ಗಡ್ಡ, ಮೀಸೆ ಇರುತ್ತದೆ. ಒಂದು ಕೆಂಪು ಬಣ್ಣದ ಕಪ್ಪು ಚುಕ್ಕೆಯುಳ್ಳ ಸ್ವೇಟರ್, ಒಂದು ಬಿಳಿ ಬಣ್ಣದ ಕಪ್ಪು ಗೆರೆಯುಳ್ಳ ಉದ್ದ ತೋಳಿನ ಶರ್ಟ್, ಸಿಮೆಂಟ್ ಕಲರ್ ಪ್ಯಾಂಟ್, ಒಂದು ಬಣ್ಣದ ಉಡುದಾರ, ಕಪ್ಪು ಬಣ್ಣದ ಚಪ್ಪಲಿಗಳು ಮತ್ತು ಕೆಂಪು, ಬಿಳಿ ಬಣ್ಣದ ಟವೆಲ್ ಧರಿಸಿರುತ್ತಾರೆ. ಮೃತನ ದೇಹವು ಮೆಗ್ಗಾನ್ ಆಸ್ಪತ್ರೆಯ ಶೈತ್ಯಾಗಾರದಲ್ಲಿರುತ್ತದೆ.

ಮೃತರ ವಾರಸುದಾರರು ಯಾರಾದರೂ ಇದ್ದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ದೂ.ಸಂ.08182-222974, 9480802124 ನ್ನು ಸಂಪರ್ಕಿಸಬಹುದೆಂದು ಶಿವಮೊಗ್ಗ ರೈಲ್ವೆ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.