ಒಂದೇ ದಿನ ನಾಲ್ಕು ಕಡೆಯಲ್ಲಿ ಕಳ್ಳತನ! ಭದ್ರಾವತಿಯಲ್ಲಿ ಸಿಕ್ಕಿಬಿದ್ದ ಪ್ರಜ್ವಲ್​!

Newtown police have arrested the accused who committed serial theft in Bhadravatiಭದ್ರಾವತಿಯಲ್ಲಿ ಸರಣಿ ಕಳ್ಳತನ ನಡೆಸಿದ್ದ ಆರೋಪಿಯನ್ನು ನ್ಯೂಟೌನ್ ಪೊಲೀಸರು ಬಂಧಿಸಿದ್ದಾರೆ

ಒಂದೇ ದಿನ ನಾಲ್ಕು ಕಡೆಯಲ್ಲಿ ಕಳ್ಳತನ! ಭದ್ರಾವತಿಯಲ್ಲಿ ಸಿಕ್ಕಿಬಿದ್ದ ಪ್ರಜ್ವಲ್​!

KARNATAKA NEWS/ ONLINE / Malenadu today/ Sep 14, 2023 SHIVAMOGGA NEWS  



ಭದ್ರಾವತಿ ನಗರದ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ರಾತ್ರಿ ನಡೆದಿದ್ದ ಸರಣಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಕಳುವು ಮಾಡಿದ್ದ ಸ್ವತ್ತುಗಳನ್ನು ಮತ್ತು ನಗದನ್ನು ವಶಪಡಿಸಿಕೊಂಡಿದ್ದಾರೆ.

ಜೇಡಿಕಟ್ಟೆ ನಿವಾಸಿ ಪ್ರಜ್ವಲ್ (20) ಬಂಧಿತ ಆರೋಪಿ. ಸೆ.10ರಂದು ರಾತ್ರಿ ಜೇಡಿಕಟ್ಟೆಯ ಎರಡು ಹೋಟೆಲ್‌ಗಳಲ್ಲಿ, ರಾಜಪ್ಪ ಲೇಔಟ್ ನಲ್ಲಿರುವ ನಂದಿನಿ ಮಿಲ್ಕ್ ಪಾರ್ಲ‌್ರಮತ್ತು ಮಾಚೇನಹಳ್ಳಿ ಭವಾನಿ ಸ್ಟೀಲ್ ಇಂಡಸ್ಟ್ರೀಸ್ ಕಚೇರಿ ಸೇರಿ ಒಟ್ಟು 4 ಕಡೆಗಳಲ್ಲಿ ರಾತ್ರಿ ಸರಣಿ ಕಳವು ಪ್ರಕರಣ ನಡೆದಿತ್ತು.

ಈ ಪ್ರಕರಣಗಳ ಆರೋಪಿಗಳ ಪತ್ತೆಗಾಗಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್‌ಜಿ.ಕೆ. ಮತ್ತು ಎಎಸ್‌ಪಿ ಅನಿಲ್‌ಕುಮಾರ್‌ಭೂಮರೆಡ್ಡಿ ಮಾರ್ಗದರ್ಶನದಲ್ಲಿ ಡಿವೈ ಎಸ್ಪಿನಾಗರಾಜ್‌ಕೆ.ರ್ಆ. ಮತ್ತು ಸಿಪಿಐ ಶ್ರೀಶೈಲಕುಮಾರಜೆ. ಮೇಲ್ವಿಚಾರಣೆಯಲ್ಲಿ ನ್ಯೂಟೌನ್ ಪೊಲೀಸ್ ಠಾಣೆಯ ಪಿಎಸ್‌ಐ ರಮೇಶ್ ಟಿ. ಮತ್ತು ಭಾರತಿ ನೇತೃತ್ವದಲ್ಲಿ ಸಿಬ್ಬಂದಿ ಸಿ.ಎಚ್.ಸಿ. ರಾಘವೇಂದ್ರ, ನವೀನ್ ಟಿ., ಸಿಪಿಸಿ ಪ್ರವೀಣಕುಮಾರ್, ತೀರ್ಥಲಿಂಗಪ್ಪ ಮತ್ತು ಅಶ್ವಿನಿ ಅವರನ್ನು ಒಳಗೊಂಡ ತಂಡವನ್ನು ರಚಿಸಲಾಗಿತ್ತು. ನ್ಯೂಟೌನ್‌ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ, ಆರೋಪಿ ಜೇಡಿಕಟ್ಟೆ ನಿವಾಸಿ ಪ್ರಜ್ವಲ್‌ನನ್ನು ಬಂಧಿಸಿದರು.

ಬಂಧಿತನಿಂದ 4 ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ 134,400 ನಗದು ಮತ್ತು ಅಂದಾಜು 218,665 ಮೌಲ್ಯದ ತಂಬಾಕು ಪದಾರ್ಥಗಳು ಹಾಗೂ ಕೃತ್ಯಕ್ಕೆ ಬಳಸಿದ ಅಂದಾಜು 260,000 ಮೌಲ್ಯದ ದ್ವಿಚಕ್ರ ವಾಹನ ಸೇರಿದಂತೆ 71,13,065 ಮೌಲ್ಯದ ಸ್ವತ್ತು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.


ಇನ್ನಷ್ಟು ಸುದ್ದಿಗಳು