ಚಾಲಕನ ನಿಯಂತ್ರಣ ತಪ್ಪಿ ಲಾರಿಗಳು ಪಲ್ಟಿ! ರಸ್ತೆ ತಗ್ಗಿನಲ್ಲಿ ಮಗುಚಿ ಬಿದ್ದ ವಾಹನಗಳು!
shivamogga driver lost control and the trucks overturned! Vehicles overturned on the road! incident
shivamogga Mar 23, 2024 ಶಿವಮೊಗ್ಗ ಜಿಲ್ಲೆ ಎರಡು ಕಡೆಗಳಲ್ಲಿ ಅಪಘಾತವಾದ ಪರಿಣಾಮ ಲಾರಿಗಳು ಪಲ್ಟಿಯಾಗಿ ರಸ್ತೆ ಬದಿಗೆ ಉರುಳಿರುವ ಘಟನೆ ಬಗ್ಗೆ ವರದಿಯಾಗಿದೆ.
ಹೊಸನಗರದಲ್ಲಿ ಲಾರಿ ಪಲ್ಟಿ
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಹೆದ್ದಾರಿಪುರದ ಟರ್ನಿಂಗ್‌ನಲ್ಲಿ ಬರುತ್ತಿದ್ದ ಲಾರಿಯೊಂದು ಪಲ್ಟಿಯಾಗಿದೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿಯು ಸೆರೆಯಾಗಿದೆ. ರಿಪ್ಪನ್ ಪೇಟೆಯಿಂದ ತೀರ್ಥಹಳ್ಳಿಗೆ ಹೋಗುತ್ತಿದ್ದ ಲಾರಿ ಸ್ಪೀಡಾಗಿತ್ತು. ಟರ್ನಿಂಗ್‌ನಲ್ಲಿ ಕಂಟ್ರೋಲ್‌ಗೆ ಸಿಗದೇ ಕಾರು ಪಲ್ಟಿಯಾಗಿದೆ. ಅದೃಷ್ಟಕ್ಕೆ ಈ ಅಪಘಾತದಲ್ಲಿ ಯಾರಿಗೂ ಹೆಚ್ಚಿನ ಅಪಾಯ ಉಂಟಾಗಿಲ್ಲ.
ನಿದಿಗೆ ಕೆರೆ ಏರಿಯಲ್ಲಿ ಪಲ್ಟಿಯಾದ ಕಲ್ಲಿದಲು ಲಾರಿ
ಇತ್ತ ಶಿವಮೊಗ್ಗ ಭದ್ರಾವತಿ ರಸ್ತೆಯಲ್ಲಿ ಮಂಗಳೂರಿನಿಂದ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಕಲ್ಲಿದ್ದಲು ತುಂಬಿಕೊಂಡು ಬರುತ್ತಿದ್ದ ಲಾರಿಯೊಂದು ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಲಾರಿಯಲ್ಲಿದ್ದ ಕಲ್ಲಿದ್ದಲು ಅಡಿಕೆ ತೋಟಕ್ಕೆ ಸುರಿದಿದೆ. ನಿದಿಗೆ ಕೆರೆ ಏರಿ ಮೇಲೆ ಬರುತ್ತಿದ್ದ ಲಾರಿ ಚಾಲಕನ ನಿಯತ್ರಣ ತಪ್ಪಿಗೆ ರಸ್ತೆಯ ತಗ್ಗಿಗೆ ಉರುಳಿದೆ. ಪರಿಣಾಮ ಪಲ್ಟಿಯಾದ ಲಾರಿಯಿಂದ ಕಲ್ಲಿದಲು ತೋಟಕ್ಕೆ ಬಿದ್ದಿದೆ. ಇನ್ನೂ ಘಟನೆಯಲ್ಲಿ ಕೆಲವು ಅಡಿಕೆ ಮರಗಳು ಸಹ ತುಂಡಾಗಿದ್ದು, ಪ್ರಕರಣ ದಾಖಲಾಗಿದೆ.
ಶಿವಮೊಗ್ಗದಲ್ಲಿ ನಡೆದ ಘಟನೆ