ಬಕ್ರೀದ್​ ಹಬ್ಬ ಹಿನ್ನೆಲೆ ಶಾಂತಿ ಸಭೆ! ಎಸ್​ಪಿ ಮಿಥುನ್ ಕುಮಾರ್​ರಿಂದ 6 ಪ್ರಮುಖ ಸೂಚನೆ! ಏನದು ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Jun 22, 2023 SHIVAMOGGA NEWS 

ಭದ್ರಾವತಿ  ಯಲ್ಲಿ ಮುಂಬರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಎಸ್​ಪಿ ಮಿಥುನ್ ಕುಮಾರ್ ರೋಟರಿ ಕ್ಲಬ್ ಸಭಾಂಗಣದಲ್ಲಿ, ಶಾಂತಿ ಸಮಿತಿ ಸಭೆಯನ್ನು ನಡೆಸಿದ್ದಾರೆ. ಅಲ್ಲದೆ ಈ ವೇಳೆ ಆರು ಸೂಚನೆಗಳನ್ನು ನೀಡಿದ್ದಾರೆ .  

ಏನು ಸೂಚನೆ?

1) ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ, ಶಾಂತಿ ಕದಡುವ ಕಿಡಿಗೇಡಿಗಳನ್ನು ತಡೆಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ. ಒಂದು ವೇಳೆ ಯಾವುದೇ  ಕಿಡಿಗೇಡಿಗಳು ಸಮಸ್ಯೆಯನ್ನುಂಟು ಮಾಡುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. 

Malenadu Today

2) ಕಾನೂನು ಬಾಹೀರವಾದ ಕೆಲಸಗಳನ್ನು ಮಾಡಿದರೆ ಅಂತಹ ಸಂದರ್ಭಗಳಲ್ಲಿ ಸಮಸ್ಯೆಗಳು ಉದ್ಭವವಾಗುತ್ತದೆ. ಕಾನೂನಿನ ಚೌಕಟ್ಟಿನ ಒಳಗಿರುವ ಅವಕಾಶಗಳನ್ನು ಬಳಸಿಕೊಂಡಾಗ ಯಾವುದೇ ಸಮಸ್ಯೆಗಳಿಗೆ ಅವಕಾಶವಿರುವುದಿಲ್ಲ. ಆದ್ದರಿಂದ ಎಲ್ಲರೂ ಕಾನೂನನ್ನು ಪಾಲನೆ ಮಾಡುವುದು.  

3) ಆಕ್ಷೇಪಾರ್ಹ ವೀಡಿಯೋ / ಫೋಟೋಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಡುವುದು ಕಾನೂನು ರೀತ್ಯಾ ಅಪರಾಧವಾಗಿದ್ದು, ಅಂತಹವರ ವಿರುದ್ದ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಲಾಗುವುದು.

4) ಯಾವುದೇ ವ್ಯಕ್ತಿಗಳು ಅನಾವಶ್ಯಕವಾಗಿ ತೊಂದರೆಯನ್ನುಂಟು ಮಾಡುತ್ತಿರುವುದು ಕಂಡು ಬಂದಲ್ಲಿ ಪೊಲೀಸ್ ಇಲಾಖಾ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುವುದು.

Malenadu Today

5) ಪೊಲೀಸ್ ಇಲಾಖಾ ವತಿಯಿಂದ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಿದ್ದು, ಎಲ್ಲರೂ ಶಾಂತಿಯುತವಾಗಿ ಹಬ್ಬವನ್ನು ಆಚರಣೆ ಮಾಡುವಂತೆ ಸೂಚಿಸಲಾಯಿತು.

6)  ಸಭೆಯಲ್ಲಿ ಹಿಂದೂ,  ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮುಖಂಡರು, ವಖ್ಫ್ ಬೋರ್ಡ್  ಅಧಿಕಾರಿಗಳು, ಭದ್ರಾವತಿ ನಗರಸಭೆಯ ಚುನಾಯಿತ ಸದಸ್ಯರು ಉಪಸ್ಥಿತರಿದ್ದರು ಮತ್ತು ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಣೆ ಮಾಡುವುದಾಗಿ ಆಶ್ವಾಸನೆ ನೀಡಿದರು. 


Malenadu Today

ಭದ್ರಾವತಿಗೆ ಬಂದ ದೊಡ್ಡಣ್ಣ! VISL ಸಂಬಂಧ ಮಹತ್ವದ ಸಭೆ! ಪ್ರಧಾನಿ ನರೇಂದ್ರ ಮೋದಿಯವರನ್ನ ಆಹ್ವಾನಿಸಲು ಚರ್ಚೆ! ಏನಿದು ?

ಅಸ್ತಿತ್ವ ಉಳಿಸಿಕೊಳ್ಳುವ ಹೋರಾಟದ ನಡುವೆ ಭದ್ರಾವತಿ ತಾಲ್ಲೂಕಿನ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ಸಿದ್ದತೆ ನಡೆಯುತ್ತಿದೆ. ಇದಕ್ಕಾಗಿ ತಾಲ್ಲೂಕಿಗೆ ಚಿತ್ರನಟ ದೊಡ್ಡಣ್ಣ ಆಗಮಿಸಿದ್ದರು.  

ಪುರುಷರೇ ಹುಷಾರ್! ಅನಾಥಳೆಂದು ಹೇಳಿ ಲಗ್ನವಾಗಿ ಯುವಕನಿಗೆ ಬೆದರಿಕೆ !7 ವರ್ಷಗಳ ನಂತರ ಬಯಲಾಯ್ತು 4 ಮಕ್ಕಳ ತಾಯಿ ಮದುವೆ. ಸಂಸಾರ, ಮೋಸ 

ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶ ಹೊರಬಿದ್ದ ಬೆನ್ನಲ್ಲಿಯೇ ಭದ್ರಾವತಿಯಲ್ಲಿ ದೊಡ್ಡಮಟ್ಟದ ಹೋರಾಟ ಆರಂಭವಾಗಿತ್ತು. ಈ ಹೋರಾಟ ಇವತ್ತಿಗೂ ಮುಂದುವರಿದಿದೆ.  ಗುತ್ತಿಗೆ ಕಾರ್ಮಿಕರು ಕಳೆದ 5-6  ತಿಂಗಳಿನಿಂದ ಹೋರಾಟ ನಡೆಸುತ್ತಿದ್ದಾರೆ. 

ದೊಡ್ಗಣ್ಣ ನೇತೃತ್ವದಲ್ಲಿ ಸಭೆ

ಇದರ ನಡುವೆ ಕಾರ್ಖಾನೆ ಶತಮಾನೋತ್ಸವ ಸಂಭ್ರಮದಿಂದ ಆಚರಿಸಲು ಸಿದ್ದತೆಗಳು ನಡೆಯುತ್ತಿವೆ.

 ಕಾರ್ಖಾನೆಯ ನಿವೃತ್ತ ನೌಕರ, ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ನೇತೃತ್ವದಲ್ಲಿ ಕಾಯಂ, ಗುತ್ತಿಗೆ ಕಾರ್ಮಿಕ ಸಂಘಟನೆಗಳು ಹಾಗು ಅಧಿಕಾರಿಗಳ ಸಂಘ ಈ ಸಂಬಂಧ ಸಭೆ ನಡೆಸಿವೆ.  ಸಭೆಯಲ್ಲಿ ಶತಮಾನೋತ್ಸವ ಸಮಾರಂಭವನ್ನು ಸಂಭ್ರಮದಿಂದ ಆಚರಿಸುವ ಸಂಬಂಧ ಒಮ್ಮತದ ತಿರ್ಮಾನಗಳನ್ನು ಕೈಗೊಳ್ಳಲಾಗಿದೆ  

ಶತಮಾನೋತ್ಸವ  ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ!

ಇನ್ನೂ  ಶತಮಾನೋತ್ಸವ ಆಚರಣೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರನ್ನು ಆಹ್ವಾನಿಸುವ ಕುರಿತು ಚರ್ಚಿಸಲಾಗಿದೆ. ಒಟ್ಟಾರೆ, ಕಾರ್ಖಾನೆಯ ಶತಮಾನೋತ್ಸವ ಸಮಾರಂಭಕ್ಕಾಗಿ ಆರಂಭಿಕ ಸಭೆ ಅಂತಿಮಗೊಂಡಿದ್ದು, ಈ ಸಂಬಂಧ ಇನ್ನಷ್ಟು ಸಮಾಲೋಚನೆಗೆ ವಿವಿಧ ಸಂಘಟನೆಗಳು ಮುಂದಾಗಿವೆ.   

 

Leave a Comment