ಕೂಲಿಗೆಂದು ಕರೆದೊಯ್ದು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಮಹಿಳೆಯ ಮಾರಾಟ | ಜೊತೆಗಾರ್ತಿಯಿಂದಲೇ ಕೃತ್ಯ | ಏನಿದು ಭದ್ರಾವತಿ ಸ್ಟೋರಿ

A woman was taken to work as a labourer and sold in Maharashtra's Solapur | What is bhadravathi storyHonnali, Bhadravathi, Honnali Police Station, Bhadravathi Town, Women's Trafficking

ಕೂಲಿಗೆಂದು ಕರೆದೊಯ್ದು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಮಹಿಳೆಯ ಮಾರಾಟ | ಜೊತೆಗಾರ್ತಿಯಿಂದಲೇ ಕೃತ್ಯ | ಏನಿದು ಭದ್ರಾವತಿ ಸ್ಟೋರಿ
Honnali, Bhadravathi, Honnali Police Station, Bhadravathi Town, Women's Trafficking

SHIVAMOGGA | MALENADUTODAY NEWS | May 22, 2024  ಮಲೆನಾಡು ಟುಡೆ

ಶಿವಮೊಗ್ಗದಲ್ಲಿ ಕೂಲಿ ಕೆಲಸ ಹೆಸರಿನಲ್ಲಿ ಮಹಿಳೆಯೊಬ್ಬರನ್ನ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಮಾರಾಟ ಮಾಡಲಾಯ್ತಾ? ಇಂತಹದ್ದು ಆರೋಪಕ್ಕೆ ಸಂಬಂಧಿಸಿದ ಎಫ್‌ಐಆರ್‌ ನೆರೆ ಜಿಲ್ಲೆಯ ಸ್ಟೇಷನ್‌ ಒಂದರಲ್ಲಿ ದಾಖಲಾಗಿದ್ದು, ಜಿಲ್ಲೆಯಲ್ಲಿ ಮಹಿಳೆಯರ ಮಾರಾಟ ಜಾಲದ ಬಗ್ಗೆ ಸಂಶಯ ಮೂಡಿಸಿದೆ. 

ಏನಿದು ಪ್ರಕರಣ?

ಹೊನ್ನಾಳಿ ಪೊಲೀಸ್‌ ಸ್ಟೇಷನ್‌ ನಲ್ಲಿ : IPC 1860 (U/s-366,370,34) ಅಡಿಯಲ್ಲಿ ಮಹಿಳೆಯೊಬ್ಬರನ್ನ ಬಲವಂತವಾಗಿ ಅಪಹರಿಸಿದ ಹಾಗೂ ಆಕೆಯ ಮೇಲೆ ಬಲವಂತ ಹೇರಿದ ಆರೋಪ ಹಾಗೂ ಮಹಿಳೆ ಮಾರಾಟ ಮಾಡಿದ ಆರೋಪದಡಿಯ್ಲಲಿ ಭದ್ರಾವತಿ ತಾಲ್ಲೂಕಿನ ಮೂವರ ವಿರುದ್ಧ ಕೇಸ್‌ ದರ್ಜ್‌ ಆಗಿದೆ. ಭದ್ರಾವತಿ ನಗರದ ಇಬ್ಬರು ಪುರುಷರು ಎ 2 ಎ3 ಆರೋಪಿಯಾಗಿದ್ದು, ಓರ್ವ ಮಹಿಳೆ ಎ ಒನ್‌ ಆರೋಪಿಯಾಗಿದ್ದಾರೆ. ಕಳೆದ 13 ನೇ ನಡೆದ ಘಟನೆ ಸಂಬಂಧ ಕೇಸ್‌ ದಾಖಲಿಸಿರುವ ಪೊಲೀಸರು ಈ ಬಗ್ಗೆ ತನಿಖೆ ನಡೆಸ್ತಿದ್ದಾರೆ. (ವೈಯಕ್ತಿಕ ವಿವರಗಳು ಗೌಪ್ಯವಾಗಿದೆ)

ಎಫ್‌ಐಆರ್‌ನಲ್ಲಿ ದಾಖಲಿಸಿರುವಂತೆ ಭದ್ರಾವತಿ ಟೌನ್‌ನ ಮಹಿಳೆಯೊಬ್ಬರು ತಾನು ಹೋಗುವ ಚೌಟರಿಯ ಕೂಲಿ ಕೆಲಸಕ್ಕೆ ಹೊನ್ನಾಳಿ ತಾಲ್ಲೂಕು ಗ್ರಾಮವೊಂದರ ಮಹಿಳೆಯನ್ನ ಕರೆದೊಯ್ದಿದ್ದಳು. ಆ ಬಳಿಕ ಆಕೆಗೆ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಕೂಲಿ ಕೆಲಸವಿದೆ ಎಂದು ಹೇಳಿ ಒಳ್ಳೆ ಸಂಬಳ ಸಿಗುವುದು ಎಂದು ನಂಬಿಸಿ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಇತ್ತ ಮನೆಯವರಿಗೆ ವಿಷಯ ತಿಳಿಯದೆ ಮಹಿಳೆಯ ಬಗ್ಗೆ ವಿಚಾರಿಸುತ್ತಿರುವಾಗ, ಅವರಿಗೆ ಸಂತ್ರಸ್ತ ಮಹಿಳೆಯಿಂದಲೇ ಕರೆ ಬಂದಿದೆ. 

ಕರೆಮಾಡಿದ ಮಹಿಳೆ ತನ್ನನ್ನು ಸೊಲ್ಲಾಪುರದಲ್ಲಿ ಓರ್ವರಿಗೆ ಒಂದು ಲಕ್ಷ ರೂಪಾಯಿಗೆ ಮಾರಿದ್ದಾರೆ, ತನ್ನನ್ನು ಕಾಪಾಡುವಂತೆ ಅಲವತ್ತುಕೊಂಡಿದ್ದಾರೆ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಸಂತ್ರಸ್ತೆ ಇದ್ದ ಮನೆಯವರನ್ನ ಸಂಪರ್ಕಿಸಿದ್ದಾರೆ. ಅವರು ಒಂದು ಲಕ್ಷ ರೂಪಾಯಿ ಕೊಟ್ಟು ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ತಕ್ಷಣವೇ ಕುಟುಂಬಸ್ಥರು ಹೊನ್ನಾಳಿ ಪೊಲೀಸರನ್ನ ಸಂಪರ್ಕಿಸಿದ್ದು ಕೇಸ್‌ ನೀಡಿದ್ದಾರೆ. ಇನ್ನೂ ವಿಷಯ ಗಂಭೀರವಾಗಿ ಪರಿಗಣಿಸಿದ್ದಾರೆ. ಆದಾಗ್ಯು  ನಾಪತ್ತೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಕರಣ ಬೇರೆಯದ್ದೆ ಆಯಾಮ ಪಡೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.