ಮತ್ತೊಂದು ಪೆನ್‌ಡ್ರೈವ್‌ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕೆಎಸ್‌ ಈಶ್ವರಪ್ಪ

KS Eshwarappa expressed doubts about another pen drive

ಮತ್ತೊಂದು ಪೆನ್‌ಡ್ರೈವ್‌ ಬಗ್ಗೆ  ಅನುಮಾನ ವ್ಯಕ್ತಪಡಿಸಿದ ಕೆಎಸ್‌ ಈಶ್ವರಪ್ಪ
KS Eshwarappa , pen drive

SHIVAMOGGA | MALENADUTODAY NEWS | May 22, 2024  ಮಲೆನಾಡು ಟುಡೆ

ನೈರುತ್ಯ ಪದವೀಧರ ಕ್ಷೇತ್ರದಲ್ಲಿ  ಬಿಜೆಪಿಯಿಂದ ಬಂಡಾಯ ಸಾರಿರುವ ಕೆ ರಘುಪತಿ ಭಟ್‌ಗೆ ಬೆಂಬಲ ನೀಡಿರುವ ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ಅವರ ಪರವಾಗಿ ಮಾತನಾಡುತ್ತಾ ಚುನಾವಣೆ ಹಿಂದಿನ ರಾತ್ರಿ ರಘುಪತಿ ಭಟ್‌ ಗೆ ಪಕ್ಷದಿಂದ ನೋಟಿಸ್‌ ಬರಹುದು. ಹಾಗೆ ಚುನಾವಣೆಯ ಹಿಂದಿನ ರಾತ್ರಿ ಯಾವುದಾದರೂ ಪೆನ್‌ ಡ್ರೈವ್‌ ಕೂಡ ಬರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. 

ನಾನು ಮೋಸ ಹೋಗಿದ್ದೇನೆ, ಹಾಗಾಗಿ ಈ ವಿಷಯ ನನಗೆ ಗೊತ್ತಿದೆ ಎಂದ ಅವರು ನಕಲಿ ವಿಡಿಯೋ ವಿಚಾರದಲ್ಲಿ ನಾನು ಚುನಾವಣಾ ಆಯೋಗಕ್ಕೂ ಪತ್ರ ಬರೆದು ಕೋರ್ಟ್‌ಗೆ ಹೋಗಿದ್ದೇನೆ ಎಂದರು ಕರ್ನಾಟಕದಲ್ಲಿ ಬಿಜೆಪಿ ಶುದ್ದೀಕರಣ ಆಗಬೇಕು. ಮಹಾತ್ಮರು ಕಟ್ಟಿದ ಬಿಜೆಪಿಗೆ ಈಗ ಹೊಡೆತ ಬೀಳು ತ್ತಿದೆ. ಅಪ್ಪ-ಮಕ್ಕಳೇ ಕೀರ್ಮಾನ ಮಾಡುವ ವ್ಯವಸ್ಥೆ ಬಂದಿದೆ ಎಂದರು