ಮೇಳಿಗೆ ವೆಂಕಟರಮಣ ದೇವಸ್ಥಾನದ ರಥೋತ್ಸವದಲ್ಲಿ ಮತ್ತೊಮ್ಮೆ ಆರಗ ಪ್ರಾರ್ಥನೆ!

Malenadu Today

MALENADUTODAY.COM | SHIVAMOGGA NEWS |THIRTHAHALLI TALUK

ತೀರ್ಥಹಳ್ಳಿ ತಾಲ್ಲೂಕಿನ  ಮೇಳಿಗೆಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಜಾತ್ರಾ ರಥೋತ್ಸವವು ವಿಜ್ರಂಭಣೆಯಿಂದ ನಡೆಯುತ್ತಿದೆ. ಸುತ್ತಮುತ್ತಲಿನ ಊರಿನ ಸಮಸ್ತ ಜನರು ಜಾತ್ರೆಯಲ್ಲಿ ಭಾಗಿಯಾಗುವುದರ ಮುಖಾಂತರ ರಥೋತ್ಸವಕ್ಕೆ ಕಳೆ ಹೆಚ್ಚಿತು.

ಕಿಮ್ಮನೆ ರತ್ನಾಕರ್​ ಮತ್ತು R.M. ಮಂಜುನಾಥ್ ಗೌಡರ ಕೈಗಳನ್ನು ಕಾಂತಾರ ಸ್ಟೈಲ್​ನಲ್ಲಿ ಹಿಡಿದು ಒಂದು ಮಾಡಿದ್ರಾ ಕಾರ್ಯಕರ್ತರು!?

ಮೇಳಿಗೆಯ ರಥಬೀದಿಯ ಅಕ್ಕಪಕ್ಕದಲ್ಲಿ ಆಟಿಕೆ ಸಾಮಾನುಗಳು, ಅಲಂಕಾರಿಕ ಗೃಹಪಯೋಗಿ ವಸ್ತುಗಳ ಅಂಗಡಿಗಳು ಮುಂಗಟ್ಟುಗಳಯ ನೆರೆದಿದ್ದವರ ಗಮನ ಸೆಳೆಯಿತು. ದೇವಸ್ಥಾನದ ಆವರಣವು ವಿಶೇಷವಾಗಿ ಹೂವಿನ ಅಲಂಕಾರದೊಂದಿಗೆ ಕಂಗೊಸುತ್ತಿದ್ದು ಭಕ್ತಾದಿಗಳು ರಥೋತ್ಸವಕ್ಕೆ ಹಣ್ಣು ಕಾಯಿ ಮಾಡುವುದರ ಮೂಲಕ ಭಕ್ತಿಯಿಂದ ಜಾತ್ರಾ ಸಂಭ್ರಮದಲ್ಲಿ ಪಾಲ್ಗೊಂಡರು. 

ಜಾತ್ರೆಯ ಸಂಭ್ರಮ ಒಂದೆಡೆಯಾದರೆ ಇತ್ತ ಗೃಹ ಸಚಿವ ಆರಗ ಜ್ಞಾನೇಂದ್ರರವರ ಅಭಿಮಾನಿಗಳು ಬಾಳೆಹಣ್ಣಿನಲ್ಲಿ 2023 ಕ್ಕೆ ಆರಗ ಮತ್ತೊಮ್ಮೆ ಎಂದು ಬರೆದು ಜಾತ್ರೋತ್ಸವದಲ್ಲಿ ರಥಕ್ಕೆ ಹಾಕುವುದರ ಮುಖಾಂತರ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.

*ಶಿವಮೊಗ್ಗ ಜಿಲ್ಲೆಗೆ ಮೋದಿಗಿಫ್ಟ್​! ಮೂರು ರೈಲ್ವೆನಿಲ್ದಾಣ​ಕ್ಕೆ Amrit Bharat Station Yojana ಜಾರಿ! ಏನಿದು ಯೋಜನೆ ಗೊತ್ತಾ?*

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Share This Article