KARNATAKA | Jan 6, 2024 | shivamogga viral video ಶಿವಮೊಗ್ಗ ನಗರದದಲ್ಲಿ ಎರಡು ಕರೆಂಟ್ ಶಾಕ್ ಪ್ರಕರಣಗಳು ವರದಿಯಾಗಿವೆ. ಒಂದು ಪ್ರಕರಣ ಹಳೆ ಶಿವಮೊಗ್ಗದಲ್ಲಿ ನಡೆದಿದ್ದು ಎನ್ನಲಾಗಿದ್ದು, ಮೊನ್ನೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಅದಲ್ಲದೇ ಈ ಸಂಬಂಧ ವಿಡಿಯೋವೊಂದು ವೈರಲ್ ಆಗಿದೆ. ಆದರೆ ಪ್ರಕರಣ ಸಂಬಂಧ ಎಫ್ಐಆರ್ ಆದಂತಿಲ್ಲ. ಹೆಚ್ಚಿನ ಮಾಹಿತಿಯು ಲಭ್ಯವಾಗಿಲ್ಲ. ಮೂಲಗಳು ಈ ಬಗ್ಗೆ ಇನ್ನಷ್ಟೆ ಸ್ಪಷ್ಟನೆ ಸಿಗಬೇಕಿದೆ ಎನ್ನುತ್ತಿದೆ.
shivamogga viral video
ಎರಡುವರೆ ನಿಮಿಷದ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಆರ್ಸಿಸಿ ಮೇಲಿನಿಂದ ಗೋಡೆಯ ಒಂದು ಭಾಗಕ್ಕೆ ರೋಲರ್ನ್ನ ಉದ್ದದ ಪೈಪ್ಗೆ ಸಿಕ್ಕಿಸಿಕೊಂಡು ಬಣ್ಣ ಬಳಿಯುತ್ತಿರುವಾಗ, ಅಲ್ಲಿಯೇ ಇದ್ದ ಲೈಟ್ ಕಂಬದ ತಂತಿ ಕೋಲಿಗೆ ತಗುಲಿ ಅವರಿಗೆ ಶಾಕ್ ಹೊಡೆದಿದೆ.
READ :ಚಿಕನ್ ಸ್ಟಾಲ್ನಲ್ಲಿ ಸಿಕ್ತು ಕದ್ದ ಕೋಳಿ! ಕೇಳಿದ್ದಕ್ಕೆ ಮಚ್ಚಿ ಬೀಸಿದ ಮಾಲೀಕ! VIRAL NEWS
ಅವರನ್ನ ತಪ್ಪಿಸಲು ಅಲ್ಲಿದ್ದವರು ಪ್ರಯತ್ನಿಸ್ತಿರುವಾಗ ಮತ್ತೊಮ್ಮೆ ವಿದ್ಯುತ್ ಬೆಂಕಿಯೊಂದಿಗೆ ಸ್ಫೋಟಿಸುವ ಸದ್ದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾಗಳಾದ ವಾಟ್ಸ್ಯಾಪ್ ಹಾಗೂ ಫೇಸ್ಬುಕ್ನಲ್ಲಿ ಹರಿದಾಡುತ್ತಿದೆ.
ಹಳೇ ಶಿವಮೊಗ್ಗದ ರಸ್ತೆ ಯೊಂದರಲ್ಲಿ ಘಟನೆ ನಡೆದಿರುವ ಬಗ್ಗೆ ಹೇಳಲಾಗುತ್ತಿದೆಯಾದರೂ, ಈ ಸಂಬಂಧ ಹೆಚ್ಚಿನ ಮಾಹಿತಿ ಲಭ್ಯವಾಗುತ್ತಿಲ್ಲ. ಪೊಲೀಸ್ ಮೂಲಗಳಲ್ಲಿಯು ಸಹ ಅಸ್ಪಷ್ಟ ಮಾಹಿತಿಯಿದ್ದು ಎಫ್ಐಆರ್ ಆದಂತಿಲ್ಲ ಎನ್ನಲಾಗುತ್ತಿದೆ.
ಇನ್ನೊಂದು ವೈರಲ್ ವಿಡಿಯೋದಲ್ಲಿ ಜೈಲ್ ಸರ್ಕಲ್ ಬಳಿ ಇರುವ ಸ್ಮಾರ್ಟ್ ಸಿಟಿ ಕಾಮಗಾರಿ ಬಳಿಕ ಹಾಕಲಾಗದ ಬೃಹತ್ ವಿದ್ಯುತ್ ಕಂಬದಲ್ಲಿ ಇದ್ದಕ್ಕಿದ್ದಂತೆ ವಿದ್ಯುತ್ ಬೆಂಕಿಯಾಗಿ ಹೊತ್ತಿಕೊಂಡು ಬಳಿ ಸ್ಫೋಟಗೊಂಡಿದೆ. ಮೂವತ್ತು ಸೆಕೆಂಡ್ ಗಳ ಈ ದೃಶ್ಯ ವಾಟ್ಸ್ಯಾಪ್ನಲ್ಲಿ ಹರಿದಾಡುತ್ತಿದೆ.