doddapete police station / ಬೆಳಗ್ಗೆ ಮನೆ ಬಾಗಿಲು ತೆಗೆಯುವಾಗ ಮಾಲೀಕನಿಗೆ ಕಂಡಿದ್ದು ಶಾಕ್! ರಾತ್ರಿ ಇದ್ದಿದ್ದು ಬೆಳಗ್ಗೆ ಮಾಯ!

Doddapete Police Station / The owner was shocked when he opened the door of the house

doddapete police station / ಬೆಳಗ್ಗೆ ಮನೆ ಬಾಗಿಲು ತೆಗೆಯುವಾಗ ಮಾಲೀಕನಿಗೆ ಕಂಡಿದ್ದು ಶಾಕ್! ರಾತ್ರಿ ಇದ್ದಿದ್ದು ಬೆಳಗ್ಗೆ ಮಾಯ!
Doddapete Police Station

SHIVAMOGGA  |  Jan 16, 2024  |   ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ​ ವ್ಯಾಪ್ತಿಯಲ್ಲಿ ಶರಾವತಿ ನಗರದಲ್ಲಿ ಬೈಕ್​ ವೊಂದು ಕಳ್ಳತನವಾದ ಬಗ್ಗೆ ವರದಿಯಾಗಿದೆ

ದೊಡ್ಡಪೇಟೆ ಪೊಲೀಸ್ ಸ್ಟೇಷನ್

ಶಿವಮೊಗ್ಗ ಶರಾವತಿ ನಗರದ ನಿವಾಸಿಯೊಬ್ಬರು ತಮ್ಮ ಮನೆ ಮುಂದೆ ಹೀರೋ ಸ್ಲ್ಪೆಂಡರ್ ಬೈಕ್ ನಿಲ್ಲಿಸಿ, ನಿದ್ರೆಗೆ ಜಾರಿದ್ದರು. ಬೆಳಗ್ಗೆ ಎದ್ದು ನೋಡುವಾಗ ಮನೆ ಮುಂದೆ  ನಿಲ್ಲಿಸಿದ್ದ ಬೈಕ್ ಕಾಣೆಯಾಗಿತ್ತು. 

ಅಕ್ಕಪಕ್ಕ ವಿಚಾರಿಸಿದ್ರೂ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ, ದೊಡ್ಡಪೇಟೆ ಪೊಲೀಸ್ ಸ್ಟೇಷನ್​ಗೆ ತೆರಳಿ ಈ ಸಂಬಂಧ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸ್ತಿದ್ದಾರೆ. 

ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಶರಣ, ಅದ್ಭುತ ಚಿಂತಕ - ಮಹಾ ಯೋಗಿ ಸಿದ್ದರಾಮೇಶ್ವರರು : ಮಧು ಎಸ್.ಬಂಗಾರಪ್ಪ 

ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಶರಣ, ಅದ್ಭುತ ಚಿಂತಕ - ಮಹಾ ಯೋಗಿ ಸಿದ್ದರಾಮೇಶ್ವರರು  ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್ ಬಂಗಾರಪ್ಪ ಅವರು ಹೇಳಿದರು.

ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಮಹಾನಗರ ಪಾಲಿಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಬೋವಿ ವಿದ್ಯಾವರ್ಧಕ ಸಂಘ ಇವರ ಸಂಯುಕ್ತಾಕ್ಷರದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ನಡೆದ ಶಿವಯೋಗಿ ಸಿದ್ದರಾಮೇಶ್ವರರ 852ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಕಲ ಜೀವಾವಳಿಯ ನೆಮ್ಮದಿಯ ಬದುಕಿಗಾಗಿ ಕೆರೆ ಕಟ್ಟೆಗಳನ್ನು ಕಟ್ಟಿಸುವ ಕಾಯಕದಲ್ಲಿ ತೊಡಗಿದ್ದ ಕರ್ಮಯೋಗಿ ಎಂದೇ ಖ್ಯಾತನಾಮರಾಗಿದ್ದ ಸಿದ್ಧರಾಮರು ಜಾತಿ, ಧರ್ಮವನ್ನು ಮೀರಿದ ಅನುಭಾವಿಗಳು. ಇವರು ಕಾಲಾನಂತರದಲ್ಲಿ ತಮ್ಮ ನಿರಂತರ ಸಾಧನೆಯಿಂದಾಗಿ ಮಹಾಶಿವಯೋಗಿಯಾದರು ಎಂದರು.

ಭೋವಿ ಸಮುದಾಯದವರು ತಮ್ಮ ಕಾಯಕದಿಂದಾಗಿ ಚದುರಿ ಹೋಗಿದ್ದು, ತಮ್ಮ ಅಸ್ಮಿತತೆಗಾಗಿ, ಸಾಮಾಜಿಕ,  ಆರ್ಥಿಕ, ರಾಜಕೀಯ ಮತ್ತಿತರ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಲು ಸಂಘಟಿತರಾಗಬೇಕಾದ ಅಗತ್ಯವಿದೆ. ಇದು ಶಕ್ತಿಯುತ ಸಂಘಟನೆಯಾಗಿ ಬೆಳೆದಲ್ಲಿ ಕೋರಿಕೆ ಬೇಡಿಕೆಗಳ ಈಡೇರಿಕೆಗೆ ಸಹಕಾರಿಯಾಗಲಿದೆ ಎಂದರು.

ಸಮುದಾಯದ ಜನರ ಕೋರಿಕೆಯಂತೆ ಸರ್ಕಾರದಿಂದ ನಿವೇಶನ ಕೊಡಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ನುಡಿದರು.