ನನಗೆ ತಾಯಿಯಿಲ್ಲ | ಅಮ್ಮನನ್ನ ನೆನೆದು ಭಾವುಕರಾದ ಮಧು ಬಂಗಾರಪ್ಪ! VIDEO STORY

Madhu Bangarappa who remembers his mother and is emotional! VIDEO STORY ಅಮ್ಮನನ್ನ ನೆನೆದು ಭಾವುಕರಾದ ಮಧು ಬಂಗಾರಪ್ಪ! VIDEO STORY

ನನಗೆ ತಾಯಿಯಿಲ್ಲ | ಅಮ್ಮನನ್ನ ನೆನೆದು ಭಾವುಕರಾದ ಮಧು ಬಂಗಾರಪ್ಪ! VIDEO STORY

KARNATAKA NEWS/ ONLINE / Malenadu today/ Oct 27, 2023 SHIVAMOGGA NEWS

ಊರನ್ನೆ ಗೆದ್ದ ರಾಜ ತನ್ನ ಗೆಲವಿನ ಸಂಭ್ರಮವನ್ನು ತನ್ನ ತಾಯಿ ಕಣ್ಣಲ್ಲಿ ನೋಡಬಯುಸುತ್ತಾನೆ. ಸೃಷ್ಟಿಯ ಪ್ರತಿ ಜೀವಿಯು ತನ್ನ ತಾಯಿಯನ್ನ ನೋಡುವ ಪರಿ ಇದೇನೆ. ಇಂತಹದ್ದೊಂದು ತಾಯಿ ಪ್ರೀತಿಯ ಸನ್ನಿವೇಶಕ್ಕೆ ಸಚಿವ ಮಧು ಬಂಗಾರಪ್ಪರವರು ಸಾಕ್ಷಿಯಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಈ ವೇಳೆ ಮಧು ಬಂಗಾರಪ್ಪರವರು ಎರಡೇ ಎರಡು ಮಾತನಾಡಿ, ಮೈಕ್​ ಕೆಳಗಿಟ್ಟು ಭಾವುಕರಾಗಿದ್ದರು. 

READ : ಸರ್ಕಾರಿ ಶಾಲೆಯಲ್ಲಿ ಎಸ್​.ಬಂಗಾರಪ್ಪರವರ ಜನ್ಮದಿನ | ಹುಲಿ ಉಗುರು ಬಗ್ಗೆ ಎಚ್ಚರಿಕೆ ನೀಡಿದ ಮಧು ಬಂಗಾರಪ್ಪ

ಶಿವಮೊಗ್ಗ ಎನ್​ಎಸ್​ಯುಐ ವಿದ್ಯಾರ್ಥಿ ಸಂಘಟನೆಯ ಗ್ರಾಮಾಂತರ ವಿಭಾಗದ ಕಾರ್ಯಕರ್ತರು ನಿನ್ನೆ  ದಿವಂಗತ ಎಸ್.ಬಂಗಾರಪ್ಪನವರ 90 ನೇ ಜಯಂತಿ ಆಚರಣೆಯನ್ನು ಹಮ್ಮಿಕೊಂಡಿದ್ದರು. ಹುಟ್ಟುಹಬ್ಬದ ಆಚರಣೆಗೆ ಸಂಘಟನೆಯ ಕಾರ್ಯಕರ್ತರು ಆಯ್ದುಕೊಂಡಿದ್ದ ಸ್ಥಳ ಶಿವಮೊಗ್ಗ ನಗರದ ಹೊರವಲಯದಲ್ಲಿನ ಭಿಕ್ಷುಕರ ಪುನರ್ವಸತಿ ಕೇಂದ್ರ. ಅಲ್ಲಿನ ಸದಸ್ಯರಿಗೆ ಹೊದಿಕೆಗಳನ್ನು ಸ್ವತಃ ಮಧು ಬಂಗಾರಪ್ಪರವರ ಕೈಯಿಂದಲೆ ಕೊಡಿಸಬೇಕು ಎಂದಿದ್ದ ಕಾರ್ಯಕರ್ತರ ನಂಬಿಕೆಯನ್ನ ಸಚಿವರು ಸಹ ಹುಸಿ ಮಾಡಿರಲಿಲ್ಲ. 

ತರಾತುರಿಯಲ್ಲಿದ್ದ ಅವರು ಚಿಕ್ಕದೊಂದು ಕಾರ್ಯಕ್ರಮ ಮುಗಿಸಿ ಹೋಗೋಣ ಎಂದುಕೊಂಡಿದ್ದರೇನೋ? ಆದರೆ ಅಲ್ಲಿನ ಸನ್ನಿವೇಶಗಳನ್ನ ನೋಡಿದ ಉಸ್ತುವಾರಿ ಸಚಿವರು, ಉಳಿದ ಕಾರ್ಯಕ್ರಮಗಳನ್ನು ಬದಿಗೊತ್ತಿ ಅಲ್ಲಿಯೇ ಇದ್ದ ನಿರಾಶ್ರಿತರ ಜೊತೆಗೆ ಮಾತನಾಡುತ್ತಾ ನಿಂತುಬಿಟ್ಟರು. ಅವರ ಕಷ್ಟಸುಖ, ನೋವು ನಲಿವು, ಅವಶ್ಯಕತೆಗಳನ್ನು ಆಲಿಸಿದ ಮಧು ಬಂಗಾರಪ್ಪ, ಉಚಿತ ಮೊಟ್ಟೆ, ಚಪ್ಪಲಿ ಹಾಗೂ ಕೇಂದ್ರಕ್ಕೆ ಬೇಕಿರುವ ಸೌಲಭ್ಯಗಳನ್ನು ಒದಗಿಸುವ ಆಶ್ವಾಸನೆಯನ್ನು ಕೊಟ್ಟರು. ಅಲ್ಲದೆ ತಮ್ಮ ಆಪ್ತರಿಗೆ ಅಲ್ಲಿಯೇ ಸೂಚನೆ ಕೊಟ್ಟು ಕೇಂದ್ರದಲ್ಲಿ ಆಗಬೇಕಿರುವ ಕೆಲಸಗಳು ಹಾಗೂ ಬೇಕಿರುವ ಸವಲತ್ತುಗಳ ಪಟ್ಟಿ ಮಾಡಿ ದಿನದೊಳಗೆ ನನಗೆ ಕೊಡಬೇಕು ಎಂದು ತಾಕೀತು ಮಾಡಿದರು. 

READ : ಎಸ್​. ಬಂಗಾರಪ್ಪ | ದಿವಂಗತ ನಾಯಕನ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಷಯಗಳು ಇಲ್ಲಿವೆ

ಹೀಗೆ ನಿರಾಶ್ರಿತರ ಜೊತೆಗೆ ಬೆರೆತು ಕಾಲ ಕಳೆದ ಮಧು ಬಂಗಾರಪ್ಪರಿಗೆ ಅಲ್ಲಿದ್ದ ಹಿರಿಯ ವಯಸ್ಸಿನ ನಿರಾಶ್ರಿತರೊಬ್ಬರು ಸಾರ್ ನಾನು ತನ್ನ ತಾಯಿಯನ್ನ ನೋಡಬೇಕು ಎಂದರು. ಎಲ್ಲಿದ್ದಾರಣ್ಣ ನಿಮ್ಮ ತಾಯಿ? ನೀವೇಗೆ ಇಲ್ಲಿಗೆ ಬಂದ್ರಿ ಎಂದು ವಿಚಾರಿಸಿದರು. ಆದರೆ ಅವರು ಅದ್ಯಾವುದಕ್ಕೂ ಉತ್ತರ ಹೇಳಲಿಲ್ಲ. ತನ್ನ ತಾಯಿ ಆಸ್ಪತ್ರೆಯಲ್ಲಿದ್ದಾಳೆ ಎಂದರು. ವಿಧಿ ತಂದಿಟ್ಟ ಪರಿಸ್ಥಿತಿಯನ್ನು ಅರಿತು ಮಾತನಾಡಿದ ಉಸ್ತುವಾರಿ ಸಚಿವರು, ನನಗೆ ತಾಯಿ ಇಲ್ಲ , ಹುಡುಕಿದರೂ ಸಿಗೋದಿಲ್ಲ. ಅವರಿಗೆ ತಾಯಿ ಇದ್ದಾರೆ ನೋಡೋಕೆ ಆಗಲ್ಲ… ಎನ್ನುತ್ತಲೇ ತಮ್ಮ ತಾಯಿಯನ್ನ ನೆನೆದುಕೊಂಡು ಕ್ಷಣ ಭಾವುಕರಾದರು. ಮುಂದೆ ಮತ್ತೇನು ಮಾತನಾಡಲು ಸಾಧ್ಯವಾಗದೆ ಬಿಡಿ ಎಂದು ಮೈಕ್ ಕೆಳಗಿಟ್ಟು ಮೌನದ ದೃಷ್ಟಿ ಬೀರುತ್ತಾ ಕುಳಿತುಬಿಟ್ಟರು. 

ಎಂತಹುದ್ದೆ ರಾಜಕಾರಣ ಇರಲಿ, ಮನಸ್ಸು ಭಾವುಕರಾದಾಗ ಮಾತು ಹೊಮ್ಮಲಾರದು ಅಂತಹ ಸನ್ನಿವೇಶ ಮಧು ಬಂಗಾರಪ್ಪರವರಿಗೆ ನಿರಾಶ್ರಿತರ ಕೇಂದ್ರದಲ್ಲಿ ಎದುರಾಗಿತ್ತು. ಅದೆಕಾರಣಕ್ಕೆ ಯಾರು ಇಲ್ಲಾ ಎಂದುಕೊಳ್ಳಬೇಡಿ..ಈ ಕೇಂದ್ರದ ಜೊತೆಗೆ ನಾನಿದ್ದೇನೆ.. ಡೋಂಟ್​ ವರಿ..ಕೊನೆಯಲ್ಲಿ ಪ್ರತಿಯೊಬ್ಬರನ್ನೂ ಮಾತನಾಡಿಸಿ ಅಲ್ಲಿಂದ ಅವರು ಹೊರಟರು.  


ಇನ್ನಷ್ಟು ಸುದ್ದಿಗಳು 

ಆಸ್ಪತ್ರೆ Appointment ಗಾಗಿ 10 ರೂಪಾಯಿ Pay ಮಾಡಿದ ವ್ಯಕ್ತಿಗೆ ಕಾದಿತ್ತು ಶಾಕ್!

ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ರೇಡ್​ | ಸಿಕ್ತು ಮಂಗಳೂರು ಸ್ಪೇಷಲ್​ 93 ಬೀಡಿ | ಕಾರ್ಬನ್​​ ಮೊಬೈಲ್!

ಮೈಸೂರು ದಸರಾಕ್ಕೆ ಹೋಗಬೇಕಿದ್ದ ನೇತ್ರಾಳ ಪ್ರೆಗ್ನೆನ್ಸಿ ರಿಪೋರ್ಟ್​ ನೆಗೆಟಿವ್ ಇತ್ತು! ಹಾಗಾದರೆ ವಿಸ್ಮಯ ನಡೆಯಿತೆ? JP ಬರೆಯುತ್ತಾರೆ!