ಎಸ್​. ಬಂಗಾರಪ್ಪ | ದಿವಂಗತ ನಾಯಕನ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಷಯಗಳು ಇಲ್ಲಿವೆ

unknown facts about Bangarappa/ ಎಸ್​.ಬಂಗಾರಪ್ಪರವರ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಇಲ್ಲಿದೆ

ಎಸ್​. ಬಂಗಾರಪ್ಪ | ದಿವಂಗತ ನಾಯಕನ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಷಯಗಳು ಇಲ್ಲಿವೆ

KARNATAKA NEWS/ ONLINE / Malenadu today/ Oct 26, 2023 SHIVAMOGGA NEWS

ರಾಜಕಾರಣಿಗಳಲ್ಲಿ ಪಂಪನಿಂದ ಹಿಡಿದು ಕುವೆಂಪುವರೆಗೂ ಮಾತನಾಡಬಲ್ಲ ಪ್ರಭುದ್ದತೆ ಇರುವ ವ್ಯಕ್ತಿಯಿದ್ದರೆ ಅದು ಬಂಗಾರಪ್ಪ ಮಾತ್ರ.ಕನ್ನಡದ ಬಗ್ಗೆ ಬಂಗಾರಪ್ಪರಿಗಿದ್ದ ಕಾಳಜಿ,ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಏನೆಂಬುದು ಅರ್ಥವಾಗುತ್ತದೆ.ಕರ್ನಾಟಕದ ಕನ್ನಡಿಗರ ಏಳಿಗೆಗೆ ಬಂಗಾರಪ್ಪರ ಕೊಡುಗೆಯೇನು ಎಂಬುದಕ್ಕೆ ಇಲ್ಲಿದೆ ವಿಶೇಷ ವರದಿ.

ವಿಶೇಷ ವರದಿ| ಸಾರೆಕೊಪ್ಪ ಬಂಗಾರಪ್ಪರವರ ಅಂತ್ಯ ಸಂಸ್ಕಾರದ ನೆನಪುಗಳ ಮಾಲಿಕೆ-ಭಾಗ-01/ ಮಲೆನಾಡು ಟುಡೆಯ ತಂಡ ಸರಣಿ ವಿಡಿಯೋ/ ಸೋಲಿಲ್ಲದ ಸರದಾರನಿಗೆ ಅರ್ಪಣೆ 

ಕನ್ನಡ ಅಭಿವೃದ್ಧಿ ಪ್ರಾಧಿಕಾರ,ಕನ್ನಡ ಪುಸ್ತಕ ಪ್ರಾಧಿಕಾರ,ಹಂಪಿ ಕನ್ನಡ ವಿಶ್ವವಿದ್ಯಾನಿಲಯ,ಹೀಗೆ ಹತ್ತು ಹಲವು ಬಂಗಾರಪ್ಪರ ಕಾಳಜಿಗೆ ನಿದರ್ಶನಗಳಾಗಿವೆ.ಕನ್ನಡಿಗರ ಪಾಲಿಗೆ ಬಂಗಾರಪ್ಪ ಕೂಡ ವಿಶೇಷ ವ್ಯಕ್ತಿಯೇ.ಅಧಿಕಾರ ಇರಲಿ ಇಲ್ಲದಿರಲಿ ಸರಳ ಸೀದಾ ನಡವಳಿಕೆಯ ವ್ಯಕ್ತಿಯಾಗಿ  ಕಂಡುಬರುವ ಎಸ್ ಬಂಗಾರಪ್ಪ ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಯುವ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳದೆ ಅದ್ಭುತವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು.

ವಿಶೇಷ ವರದಿ  | bangarappa life story/ ಸಾರೆಕೊಪ್ಪ ಬಂಗಾರಪ್ಪರವರ ಬಗ್ಗೆ ಗೊತ್ತಿರದ ಅಪರೂಪದ ಸತ್ಯ ವಿಚಾರಗಳು ಇಲ್ಲಿವೆ ಓದಿ



ಕನ್ನಡದ ಮೇರು ನಟ ಡಾಕ್ಟರ್ ರಾಜ್ ಕುಮಾರ್ ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ವಿಧಾನಸೌಧದ ಮುಂಭಾಗದಲ್ಲಿ ವಿಧಿವತ್ತಾಗಿ ನಡಿಸಿಕೊಟ್ಟರು.ಹಾಡಿ ಕುಣಿದರು. ಶಾಂತವೇರಿ ಗೋಪಾಲಗೌಡರ ಪ್ರಭಾವದಲ್ಲಿ ಅರಳಿದ ಎಸ್.ಬಂಗಾರಪ್ಪ ಕನ್ನಡ ನಾಡು ಕಂಡ ಅಪರೂಪದ ಮುಖ್ಯಮಂತ್ರಿ.ಸೊರಬದ ಕುಬಟೂರೆಂಬ ಕುಗ್ರಾಮದಲ್ಲಿ ಹುಟ್ಟಿದ ಎಸ್ ಬಂಗಾರಪ್ಪನವರ ಎಸ್ ಪದದ ಅರ್ಥ ಸಾರೆಕೊಪ್ಪ.ಸಾರೆಕೊಪ್ಪದಿಂದ ಬಂಗಾರಪ್ಪರ ಪೂರ್ವಜರು ಕುಬಟೂರಿಗೆ ವಲಸೆ ಬಂದಿದ್ದರು.

ವಿಶೇಷ ವರದಿ | ಸಾರೆಕಕೊಪ್ಪ ಬಂಗಾರಪ್ಪ ಪಾರ್ಥೀವ ಶರೀರದ ಅಂತಿಮ ದರ್ಶನ ಮತ್ತು ಯಾತ್ರೆ ಕುಬಟೂರಿನಿಂದ ಸೊರಬದವರೆಗಿನ ಮನಕಲುಕುವ ದೃಷ್ಯ?! ಸಾರೇಕೊಪ್ಪ ಬಂಗಾರಪ್ಪರ ನೆನಪಿನ ಸ್ಮರಣೆ

1939 ರಲ್ಲಿ ಶಾಲೆ ಮೆಟ್ಟಲೇರಿದ್ದು ಆನವಟ್ಟಿಯಲ್ಲಿ.ಶಿರಾಳಕೊಪ್ಪದಲ್ಲಿ ಪ್ರೌಢಶಾಲೆ ಮುಗಿಸಿದರು.ದಾವಣಗೆರೆಯಲ್ಲಿ ಇಂಟರ್ ಮೀಡಿಯಟ್ ಮುಗಿಸಿ,ಮೈಸೂರು ಮಹರಾಜ ಕಾಲೇಜಿನಲ್ಲಿ ಬಿ.ಎ ಓದಿದರು.ಅಂದು ಅವರಿಗೆ ಕುವೆಂಪು ಪ್ರಾಂಶುಪಾಲರಾಗಿದ್ದರು.ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು.ಇವರಿಗೆ ಸಾಹಿತ್ಯದ ನಂಟು ಬೆಳೆಯಲು ಕಾರಣವಾಗಿದ್ದು  ಬಿ.ಎ ಯಲ್ಲಿ ಕನ್ನಡ ಐಚ್ಚಿಕ ವಿಷಯ.

ಸಾಹಿತ್ಯ ಸಂಗೀತವೆಂದರೆ ಬಂಗಾರಪ್ಪರಿಗೆ ಕ್ರೀಡೆಯಷ್ಟೆ ಪಂಚಪ್ರಾಣ.ಪಂಪನ ಬಗ್ಗೆ ತಾಸುಗಟ್ಟಲೆ ಮಾತನಾಡಬಲ್ಲರು.ಕುವೆಂಪು ಬೇಂದ್ರೆ,ಕತೆಗಳನ್ನು ಮೈ ಮರೆತು ಹೇಳಬಲ್ಲರು.ಹಾಡುವುದಲ್ಲಿ,ಡೊಳ್ಳು ಭಾರಿಸುವುದರಲ್ಲಿ ಬಂಗಾರಪ್ಪ ಹಿಂದೆ ಬಿದ್ದಿಲ್ಲ.ತ.ಸು ಶಾಮರಾಯರು,ದೇ,ಜವರೇಗೌಡರು ಇವರ ಸಾಹಿತ್ಯದ ಗುರುಗಳು.ಬಂಗಾರಪ್ಪ ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಸಾಹಿತಿ ಕಲಾವಿದರಿಗೆ ಸುವರ್ಣಯುಗ.

ವಿಶೇಷ ವರದಿ | ಜಾತಿ, ಧರ್ಮದ ವಿಚಾರ, ವಿವಾದಗಳ ನಡುವೆ ಬಂಗಾರಪ್ಪರನವರು ನೆನಪಾಗುತ್ತಾರೆ ಕಾರಣವೇನು ಗೊತ್ತಾ!? jp ಬರೆಯುತ್ತಾರೆ!



1992 ರಲ್ಲಿ ಪ್ರೋ,ಹಂಪನಾ,ಪ್ರೋ,ಸಿ.ಡಿ ನರಸಿಂಹಯ್ಯ,ಪ್ರೋ,ತ.ಸು ಶಾಮರಾವ್,ದೇಜಗೌ.ಅವರಂಥ ಗುರುಗಳೇ ಸೇರಿ ಅಭಿನಂದನೆ ಸಲ್ಲಿಸಲು ಶಿಷ್ಯನ ಕುರಿತು ಅಭಿನಂದನಾ ಗ್ರಂಥ ಸಿದ್ದಪಡಿಸಿದ್ದು ಇತಿಹಾಸ.

ರಾಜಕಾರಣಿಗಳು ಭಾಷ ಪಂಡಿತರನ್ನು ಸಾಹಿತಿಗಳನ್ನು ಒಲಿಸಿಕೊಳ್ಳಲು ಪ್ರಯತ್ನಿಸಿ ಸೋಲುತ್ತಾರೆ

ವಿಶೇಷ ವರದಿ | ರೋಚಕ ಟ್ವಿಸ್ಟ್​ ಕೊಟ್ಟಿದ್ದ ಆ ಚುನಾವಣೆಯಲ್ಲಿ ಯಡಿಯೂರಪ್ಪರ ಕೈ ಮೇಲಾಗಿತ್ತು! ಬಿಎಸ್​ವೈ ಗೇಮ್​ಪ್ಲಾನ್​ನಲ್ಲಿ ಬಂಗಾರಪ್ಪ ಸೇರಿದಂತೆ ಸ್ಟಾರ್ ರಾಜಕಾರಣಿಗಳೇ ಸೋತಿದ್ದರು! JP Flashback



ಆದರೆ ಬಂಗಾರಪ್ಪ ಕನ್ನಡ ಕನ್ನಡಿಗ ಕರ್ನಾಟಕದ ಮೇಲೆ ನಿಜವಾದ ಕಾಳಜಿ ಹೊಂದಿದ್ದರು.ಇಂದು ರಾಷ್ಟ್ರಕವಿ ಕುವೆಂಪುರವರ ಕುಪ್ಪಳಿ ಪರಿಸರ ಪ್ರವಾಸೋಧ್ಯಮ ತಾಣವಾಗಲು ಕಾರಣರಾದವರು ಬಂಗಾರಪ್ಪ.ಅಂದು ನೆನೆಗುದಿಗೆ ಬಿದ್ದಿದ್ದ ಕುವೆಂಪು ಸ್ಮಾರಕಕ್ಕೆ ಮರುಜೀವ ನೀಡಿವರು ಬಂಗಾರಪ್ಪ.ಕುವೆಂಪು ಪ್ರತಿಷ್ಠಾನಕ್ಕೆ ಬುನಾದಿ ಹಾಕಿದಂತೆಯೆ ಬಂಗಾರಪ್ಪ ಕವಿ ದ.ರಾ ಬೇಂದ್ರೆಯವರ ಹೆಸರಿನಲ್ಲಿನ ಪ್ರತಿಷ್ಟಾನಕ್ಕೂ ಚಾಲನೆ ನೀಡಿದರು.

ಕನ್ನಡ ಅಕಾಡೆಮಿ ಅಧ್ಯಕ್ಷರು ಓಡಾಡಲು ಸರ್ಕಾರದಿಂದ ಕಾರಿನ ಸೌಕರ್ಯ ಕಲ್ಪಿಸಿದ್ದು ಬಂಗಾರಪ್ಪ.ಕನ್ನಡ ಅಭಿವೃದ್ಧಿ ಪ್ರಾಧಿಕಾರ,ಕನ್ನಡ ಪುಸ್ತಕ ಪ್ರಾಧಿಕಾರ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಹೀಗೆ ಬಂಗಾರಪ್ಪ ತಮ್ಮ ಕನ್ನಡದ ಕಾಳಜಿಯನ್ನು ಕಾರ್ಯರೂಪಕ್ಕೆ ತಂದರು.ಕನ್ನಡ ಪುಸ್ತಕಗಳು ಪ್ರಕಟಗೊಂಡು ಕನ್ನಡಿಗರ ಮನಸ್ಸಿನಲ್ಲಿ ಸಾಹಿತ್ಯದ ತೇಜಸ್ಸನ್ನು ಹೆಚ್ಚಿಸಲೆಂದು ಒಂದು ಕೋಟಿ ರೂಪಾಯಿ ಠೇವಣಿಯನ್ನು  ಇಟ್ಟಿದ್ದು ಬಂಗಾರಪ್ಪ ಸಿಎಂ ಆದಾಗಲೇ.

ಹೀಗಾಗಿ ಬಂಗಾರಪ್ಪ ಪ್ರಸ್ಥುತ ಸಂದರ್ಭದಲ್ಲೂ ಕನ್ನಡದ ಮನಸ್ಸುಗಳಿಗೆ ಬಹಳ ಕಾಡುತ್ತಾರೆ.ಈ ಕಾಡುವಿಕೆಯಲ್ಲೂ ಕನ್ನಡದ ಅರಳುವಿಕೆಯಿದೆ.


ಇನ್ನಷ್ಟು ಸುದ್ದಿಗಳು 

ಆಸ್ಪತ್ರೆ Appointment ಗಾಗಿ 10 ರೂಪಾಯಿ Pay ಮಾಡಿದ ವ್ಯಕ್ತಿಗೆ ಕಾದಿತ್ತು ಶಾಕ್!

ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ರೇಡ್​ | ಸಿಕ್ತು ಮಂಗಳೂರು ಸ್ಪೇಷಲ್​ 93 ಬೀಡಿ | ಕಾರ್ಬನ್​​ ಮೊಬೈಲ್!

ಮೈಸೂರು ದಸರಾಕ್ಕೆ ಹೋಗಬೇಕಿದ್ದ ನೇತ್ರಾಳ ಪ್ರೆಗ್ನೆನ್ಸಿ ರಿಪೋರ್ಟ್​ ನೆಗೆಟಿವ್ ಇತ್ತು! ಹಾಗಾದರೆ ವಿಸ್ಮಯ ನಡೆಯಿತೆ? JP ಬರೆಯುತ್ತಾರೆ!