ಶಿವಮೊಗ್ಗ ಸಿಟಿಯಲ್ಲಿ ಎರಡು ದಿನ ವಾಟರ್‌ ಸಪ್ಲೆ ಡೌಟ್!‌ ಕಾರಣವೇನು? ಯಾವಾಗ? ವಿವರ ಇಲ್ಲಿದೆ

Water supply doubt for two days in Shimoga City! What is the reason? when Here is the detail

ಶಿವಮೊಗ್ಗ ಸಿಟಿಯಲ್ಲಿ ಎರಡು ದಿನ ವಾಟರ್‌ ಸಪ್ಲೆ ಡೌಟ್!‌  ಕಾರಣವೇನು? ಯಾವಾಗ? ವಿವರ ಇಲ್ಲಿದೆ
Water supply in shivamogga

Shivamogga  Apr 16, 2024  Water supply in shivamogga ಶಿವಮೊಗ್ಗ ನಗರದಲ್ಲಿ ಬೇಸಿಗೆಯ ದಗೆ ನಡುವೆ ಎರಡು ದಿನ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಏಕೆಂದರೆ ಕೃಷ್ಣ ರಾಜೇಂದ್ರ ಜಲಶುದ್ದೀಕರಣ ಘಟಕಕ್ಕೆ ಎರಡು ದಿನ ಮೆಸ್ಕಾಂನಿಂದ ವಿದ್ಯುತ್‌ ಪೂರೈಕೆ ನಿಲುಗಡೆ ಮಾಡಲಾಗ್ತಿದೆ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಸಂಬಂಧ ಪ್ರಕಟಣೆಯನ್ನ ಸಹ ಹೊರಡಿಸಲಾಗಿದೆ. 

ಕೃಷ್ಣರಾಜೇಂದ್ರ ಜಲಶುದ್ಧಿಕರಣ ಘಟಕಕ್ಕೆ ವಿದ್ಯುತ್ ಪೂರೈಕೆಯನ್ನು ನಿಲುಗಡೆ ಮಾಡುವುದರಿಂದ ಏ.18 ಮತ್ತು 19 ರಂದು ಶಿವಮೊಗ್ಗ ನಗರದ ದೈನಂದಿನ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.