ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಅರ್ಹತಾ ಪರೀಕ್ಷೆ! ಕರಾಮುವಿ ಸ್ಟೂಡೆಂಟ್ಸ್​ಗೆ ಮುಖ್ಯ ಸೂಚನೆ! ಡಿಪ್ಲೋಮೋ ಪ್ರವೇಶಕ್ಕೆ ಅರ್ಜಿ! ಇನ್ನಷ್ಟು ಮಾಹಿತಿಗಳು ಇಲ್ಲಿದೆ

Eligibility Test for Scheduled Caste students! Important Note for KSOU Students! Apply for diploma admission! Here's more information

ಪರಿಶಿಷ್ಟ ವರ್ಗದ  ವಿದ್ಯಾರ್ಥಿಗಳಿಗೆ ಅರ್ಹತಾ ಪರೀಕ್ಷೆ!   ಕರಾಮುವಿ ಸ್ಟೂಡೆಂಟ್ಸ್​ಗೆ ಮುಖ್ಯ ಸೂಚನೆ!  ಡಿಪ್ಲೋಮೋ ಪ್ರವೇಶಕ್ಕೆ ಅರ್ಜಿ! ಇನ್ನಷ್ಟು ಮಾಹಿತಿಗಳು ಇಲ್ಲಿದೆ

KARNATAKA NEWS/ ONLINE / Malenadu today/ May 19, 2023 SHIVAMOGGA NEWS

ಶಿವಮೊಗ್ಗ/ ಜಿಲ್ಲಾ ವ್ಯಾಪ್ತಿಯಲ್ಲಿ ಹಲವು ಮಾಹಿತಿಗಳನ್ನ ಅಧಿಕೃತ ಇಲಾಖೆಗಳಿಂದ ಸಾರ್ವಜನಿಕರಿಗೆ ನೀಡಲಾಗಿದ್ದು, ಆ ಪೈಕಿ ಇವತ್ತಿನ ಐದು ಉಪಯುಕ್ತ ಮಾಹಿತಿ ಸುದ್ದಿಗಳು ಇಲ್ಲಿವೆ

ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (SIMS) ನಲ್ಲಿ ವೈದ್ಯರ ಹುದ್ದೆಗೆ ಅರ್ಜಿ ಆಹ್ವಾನ!

ನಿರುಪಯುಕ್ತ ವಾಹನಗಳ ವಿಲೇವಾರಿ

ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿಯ ವಾಹನ ವಿಭಾಗಕ್ಕೆ ಸಂಬಂಧಿಸಿದ 07 ನಾಲ್ಕು ಚಕ್ರದ ಹಾಗೂ 24 ದ್ವಿಚಕ್ರ ವಾಹನಗಳು ಒಟ್ಟು 31 ನಿರುಪಯುಕ್ತ ವಾಹನಗಳನ್ನು ಮೇ-25 ರಂದು ಬೆಳಿಗ್ಗೆ 12 ಗಂಟೆಗೆ ಎಂ.ಎಸ್.ಟಿ.ಸಿ. ಆನ್‍ಲೈನ್ ತಂತ್ರಾಂಶದ ಮೂಲಕ ವಿಲೇವಾರಿ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.  ಬಿಡ್‍ನಲ್ಲಿ ಭಾಗವಹಿಸಲಿಚ್ಚಿಸುವವರು ಎಂಎಸ್‍ಟಿಸಿ ಆನ್‍ಲೈನ್ ತಂತ್ರಾಂಶದ ಮೂಲಕ ಬಿಡ್ ಮಾಡಬಹುದು. ಹೆಚ್ಚಿನ ಮಾಹಿತಿಗೆ ಸಶಸ್ತ್ರ ಮೀಸಲು ಕಚೇರಿ, ಸಾಗರ ರಸ್ತೆ, ಡಿಎಆರ್ ಶಿವಮೊಗ್ಗ ದೂ. ಸಂಖ್ಯೆ 08182-261412, ಮೊ.ಸಂ: 9480803306 ನ್ನು ಸಂಪರ್ಕಿಸಬಹುದೆಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.  

ತೀರ್ಥಹಳ್ಳಿ ಆ ಬೆಟ್ಟದಲ್ಲಿ ನಡೆದ ‘ಸಜೀವ ದಹನ’ ಕೇಸ್​ ಖಲ್ಲಾಸ್ ಆಗ್ತಿದ್ಯಾ? 100 ದಿನ ಕಳೆದರೂ ಪ್ರಕರಣ ತಾರ್ಕಿಕ ಅಂತ್ಯ ಕಾಣ್ತಿಲ್ಲವೇಕೆ!?

ಡಿಪ್ಲೋಮಾ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

2023-24 ನೇ ಸಾಲಿನಲ್ಲಿ ಹೊನ್ನಾಳಿ ಸುಂಕದಕಟ್ಟೆ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿರುವ ಪ್ರಥಮ ಡಿಪ್ಲೋಮೊ ಕೋರ್ಸ್‍ಗಳಿಗೆ ಪ್ರವೇಶ ಬಯಸುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.ಎಸ್‍ಎಸ್‍ಎಲ್‍ಸಿ  ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳೊಂದಿಗೆ ಮೀಸಲಾತಿ ಬಯಸುವ ಅಭ್ಯರ್ಥಿಗಳು ತಮ್ಮ  ಮೀಸಲಾತಿಯ ಪೂರಕ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಂಸ್ಥೆಗೆ ನೇರವಾಗಿ ಸಲ್ಲಿಸಿ ಪ್ರವೇಶವನ್ನು ಪಡೆಯುವಂತೆ ಸರ್ಕಾರಿ ಪಾಲಿಟೆಕ್ನಿಕ್‍ನ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. . ಮೊದಲು ಬಂದವರಿಗೆ ಮೊದಲ ಆದ್ಯತೆ .   ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9482204905/ 9880719412/ 9986072697 / 8867419851 ಗಳನ್ನು ಸಂಪರ್ಕಿಸುವುದು. 

ಬೈಕ್​ಗೆ ಬೆಂಕಿ, ಮನೆಗೂ ತಟ್ಟಿದ ಅಗ್ನಿ ಜ್ವಾಲೆ ! ತೀರ್ಥಹಳ್ಳಿಯಲ್ಲಿ ಅಗ್ನಿ ಆಕಸ್ಮಿಕ!

ಅರ್ಹತಾ ಪರೀಕ್ಷೆಗೆ ಅರ್ಜಿ ಆಹ್ವಾನ

ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು 2023-24ನೇ ಸಾಲಿನಲ್ಲಿ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳನ್ನು ಪ್ರತಿಷ್ಠಿತ ಶಾಲೆಗಳಿಗೆ ಅರ್ಹತಾ ಪರೀಕ್ಷೆಯ ಮೂಲಕ 18 ಸ್ಥಾನಗಳಿಗೆ 6ನೇ ತರಗತಿಗೆ ದಾಖಲಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತರು ಇಲಾಖೆಯ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ಹಾಗೂ ತಾಲೂಕಿನ ಎಲ್ಲಾ ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಮೇ- 25 ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಶಿವಮೊಗ್ಗ ಹಾಗೂ ತಾಲೂಕಿನ ಎಲ್ಲಾ ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ,  ದೂ.ಸಂ.: 9482762350 ನ್ನು ಸಂಪರ್ಕಿಸುವುದು. 

ಹರತಾಳು ಹಾಲಪ್ಪ ಅಥವಾ ಬೇಳೂರು ಗೋಪಾಲಕೃಷ್ಣ! ಅಭಿಮಾನಿಯ ಫೋನ್ ಯಾರು ರಿಸೀವ್ ಮಾಡುತ್ತಾರೆ! ಹೀಗೊಂದು ಬಿಯರ್ ಬೆಟ್ಟಿಂಗ್ ಕಥೆ

ವಾರಾಂತ್ಯ ಸಮಾಲೋಚನಾ ತರಗತಿ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಬಿ.ಎ. ಮತ್ತು ಬಿ.ಕಾಂ. ಪದವಿ ಕೋರ್ಸುಗಳ ವಾರಾಂತ್ಯ ಸಮಾಲೋಚನಾ ತರಗತಿಗಳನ್ನು  ದಿನಾಂಕ: 21/05/2023 ರಿಂದ ಪ್ರತಿ ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳಂದು ಬೆಳಗ್ಗೆ 9.30 ರಿಂದ ಸಂಜೆ 5.00 ರವರೆಗೆ ಡಿ.ವಿ.ಎಸ್ ಕಾಲೇಜಿನಲ್ಲಿ ಏರ್ಪಡಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಂಬಂದಪಟ್ಟ ನೋಂದಾಯಿತ ವಿದ್ಯಾರ್ಥಿಗಳು ಸದರಿ ಸಮಾಲೋಚನಾ ತರಗತಿಗಳಲ್ಲಿ ಪಾಲ್ಗೊಂಡು ಬೋಧನಾ ಸೌಲಭ್ಯಗಳ ಅನುಕೂಲಗಳನ್ನು ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9663568076 & 9449300703 ನಂಬರ್‍ಗಳಿಗೆ ಸಂಪರ್ಕಿಸಬಹುದೆಂದು ಪ್ರಾದೇಶಿಕ ನಿರ್ದೇಶಕರು, ಕ.ರಾ.ಮು.ವಿ ಪ್ರಾಂತೀಯ ಕಾರ್ಯಾಲಯ, ಶಿವಮೊಗ್ಗ ಇವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಜೆಡಿಎಸ್​ ಕಾರ್ಯಕರ್ತರ ರೌಡಿಸಂ? ಮಾಜಿ ಶಾಸಕರ ಆರೋಪಕ್ಕೆ ಹಾಲಿ ಶಾಸಕಿ ನೀಡಿದ್ರು ಉತ್ತರ!

ನವೋದಯ ಶಾಲೆ;  11 ನೇ ತರಗತಿ ಪ್ರವೇಶ ಪರೀಕ್ಷೆಗೆ ಆನ್‍ಲೈನ್ ಅರ್ಜಿ ಆಹ್ವಾನ

ಶಿವಮೊಗ್ಗ, ಮೇ-16, (ಕರ್ನಾಟಕ ವಾರ್ತೆ) :   ಗಾಜನೂರಿನ ಜವಾಹರ್ ನವೋದಯ ವಿದ್ಯಾಲಯದ 11 ನೇ ತರಗತಿಗೆ ಪ್ರವೇಶ ಪಡೆಯಲು ಪ್ರವೇಶ ಪರೀಕ್ಷೆಯನ್ನು ದಿ:22/07/2023 ರಂದು ನಡೆಸಲಾಗುವುದು.  ಆಸಕ್ತ ವಿದ್ಯಾರ್ಥಿಗಳು ವೆಬ್‍ಸೈಟ್ www.navodaya.gov.in ಮೂಲಕ ಮೇ 31 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಶಿವಮೊಗ್ಗ ಜಿಲ್ಲೆಯ ಗಾಜನೂರು ಜವಾಹರ್ ನವೋದಯ ವಿದ್ಯಾಲಯದ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.