ತೀರ್ಥಹಳ್ಳಿ ಆ ಬೆಟ್ಟದಲ್ಲಿ ನಡೆದ ‘ಸಜೀವ ದಹನ’ ಕೇಸ್​ ಖಲ್ಲಾಸ್ ಆಗ್ತಿದ್ಯಾ? 100 ದಿನ ಕಳೆದರೂ ಪ್ರಕರಣ ತಾರ್ಕಿಕ ಅಂತ್ಯ ಕಾಣ್ತಿಲ್ಲವೇಕೆ!?

Why the investigation into the 'burnt alive' case at Thirthahalli hill has not yet been completed.

ತೀರ್ಥಹಳ್ಳಿ ಆ ಬೆಟ್ಟದಲ್ಲಿ ನಡೆದ ‘ಸಜೀವ ದಹನ’ ಕೇಸ್​ ಖಲ್ಲಾಸ್ ಆಗ್ತಿದ್ಯಾ?  100 ದಿನ ಕಳೆದರೂ ಪ್ರಕರಣ ತಾರ್ಕಿಕ ಅಂತ್ಯ ಕಾಣ್ತಿಲ್ಲವೇಕೆ!?

KARNATAKA NEWS/ ONLINE / Malenadu today/ May 19, 2023 SHIVAMOGGA NEWS

ತೀರ್ಥಹಳ್ಳಿ/ ಶಿವಮೊಗ್ಗ ಅವತ್ತು ಜನವರಿ 27 2023,  ತೀರ್ಥಹಳ್ಳಿಯ ಆನಂದಗಿರಿ ಬೆಟ್ಟದ ಪಕ್ಕದ ಯಡೆಗುಡ್ಡ ಬೆಟ್ಟದಲ್ಲಿ  ವಿಚಿತ್ರವಾದ ಘಟನೆಯೊಂದು ನಡೆದಿದ್ದು,  ಮಹಿಳೆಯೊಬ್ಬರ  ಶವ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅದು ಯಡೆಗುಡ್ಡ ಗ್ರಾಮದ 52 ವರ್ಷ ವಯಸ್ಸಿನ ಜಯಶ್ರಿಯವರ ಮೃತದೇಹ ಎಂದು ಪತ್ತೆ ಮಾಡಲು ಪೊಲೀಸರಿಗೆ ಹಾಗು ಕುಟುಂಬಸ್ಥರಿಗೆ ಬಹಳ ಸಮಯ ಬೇಕಾಗಿರಲಿಲ್ಲ  

ಸದ್ಯ ಈ ಘಟನೆ ಕೊಲೆಯೋ? ಆತ್ಮಹತ್ಯೆಯೋ ಎಂಬ ತೀರ್ಮಾನಕ್ಕೆ ಪೊಲೀಸರಿನ್ನೂ ಬರಲಾಗಿಲ್ಲ. ಮೇಲಾಗಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕೊಡುವುದರಲ್ಲಿ ಪೊಲೀಸ್ ಇಲಾಖೆ ವಿಫಲವಾಗ್ತಿದ್ಯಾ? ಅಥವಾ ಕಾಣದ ಕೈಗಳ ಪ್ರಭಾವ ಪ್ರಕರಣದ ಮೇಲೆ ಬೀಳುತ್ತಿದ್ಯಾ? ಎಂಬ ಅನುಮಾನ ಮೂಡಿದೆ. 

ಬೈಕ್​ಗೆ ಬೆಂಕಿ, ಮನೆಗೂ ತಟ್ಟಿದ ಅಗ್ನಿ ಜ್ವಾಲೆ ! ತೀರ್ಥಹಳ್ಳಿಯಲ್ಲಿ ಅಗ್ನಿ ಆಕಸ್ಮಿಕ!

ಚಿತೆ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡಿದ್ದರಾ? 

ಜಯಶ್ರಿಯವರು ಜನವರಿ 23 ರಂದು ಮನೆಯಲ್ಲಿ ಲೆಟರ್ ಒಂದನ್ನು ಬರೆದಿದ್ದರು. ನಾನು ಬೆಂಗಳೂರಿಗೆ ತೆರಳುತ್ತಿದ್ದೇನೆ ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಲೆಟರ್ ಬರೆದು ಮನೆ ತೊರೆದಿದ್ದರು ಎಂದು ಹೇಳಲಾಗ್ತಿತ್ತು. ಇದನ್ನ ಆಧರಿಸಿದರೇ, ಘಟನೆ ಆತ್ಮಹತ್ಯೆ ಎಂಬ ಥಾಟ್​ ಕಡೆಯಲ್ಲಿ ವಾಲುತ್ತಿತ್ತು ..ಈ ಸಂಬಂಧ ಪೊಲೀಸ್ ಇಲಾಖೆ ಮಿಸ್ಸಿಂಗ್​ ದಾಖಲಿಸಿತ್ತು. ಆದರೆ ಮಹಿಳೆಯ ಮೃತದೇಹ ಇದ್ದಂತಹ ಸನ್ನಿವೇಶ ಹಾಗೂ ಅಲ್ಲಿಂದ ಸೂಕ್ಷ್ಮತೆಗಳು ಪೊಲೀಸ್ ವಲಯದಲ್ಲಿ ಇದೊಂದು ಕೊಲೆ ಎಂಬ ಸಂಶಯವನ್ನು ಬಿಗಿಮಾಡಿತ್ತು. 

ಹರತಾಳು ಹಾಲಪ್ಪ ಅಥವಾ ಬೇಳೂರು ಗೋಪಾಲಕೃಷ್ಣ! ಅಭಿಮಾನಿಯ ಫೋನ್ ಯಾರು ರಿಸೀವ್ ಮಾಡುತ್ತಾರೆ! ಹೀಗೊಂದು ಬಿಯರ್ ಬೆಟ್ಟಿಂಗ್ ಕಥೆ

ಜನವರಿ 23 ಕ್ಯಾಲೆಂಡರ್​ ನಲ್ಲಿ ಅಗ್ನಿಸ್ಪರ್ಶ!

ಈ ಮಧ್ಯೆ ಮಹಿಳೆಯ ಸಾವಿನ ಪ್ರಕರಣದಲ್ಲಿ ಪೊಲೀಸರು ಅವರ ಮನೆಯ ಕ್ಯಾಲೆಂಡರ್​ನಲ್ಲಿ ಅಗ್ನಿಸ್ಪರ್ಶ ಎಂದು ಬರೆದಿದ್ದನ್ನ ಕಂಡಿದ್ದರು , ಆಗ ಇದೊಂದು ಆಧ್ಯಾತ್ಮಿಕ ಮೂಢನಂಬಿಕೆಯ ಫಲವಾಗಿ ನಡೆದ ಘಟನೆಯೇ ಎಂಬ ಪ್ರಶ್ನಿಯು ಕಾಡಿತ್ತು. ಅಲ್ಲದೆ ಮೋಕ್ಷ ಸಿಗುತ್ತದೆ ಎಂದು ಹೇಳಿ , ಮಹಿಳೆಯನ್ನು ಯಾರೋ ಮೋಡಿ ಮಾಡಿದ್ದರಾ? ಅಂತಹ ಮೋಡಿಗೆ ಬಲಿಯಾದರಾ ಎಂಬ ಪ್ರಶ್ನೆ ಉದ್ಭವವಾಗಿತ್ತು. 

ಹುಷಾರ್! ಶಿವಮೊಗ್ಗದಲ್ಲಿ ನಕಲಿ ದಾಖಲೆ ಕೊಟ್ಟು ಸೈಟು ಮಾರುತ್ತಾರೆ! ಇಲ್ಲಿದೆ ನೋಡಿ ಉದಾಹರಣೆ

ಪೆಟ್ರೋಲ್ ಖರೀದಿಸಿದ್ದ ಮಹಿಳೆ

ಪೊಲೀಸರ ತನಿಖೆಯ ಪ್ರತಿಹಂತದಲ್ಲಿ ಹೊಸ ಹೊಸ ಡೌಟ್ ಕ್ರಿಯೆಟ್ ಮಾಡಿದ್ದ ಕೆಸ್​ ಇದಾಗಿತ್ತು. ಮೃತ ಮಹಿಳೆ ತೀರ್ಥಹಳ್ಳಿಯ ಪೆಟ್ರೋಲ್​  ಬಂಕ್​ವೊಂದರಲ್ಲಿ ಪೆಟ್ರೋಲ್ ಖರೀದಿ ಮಾಡಿದ್ದರು ಎಂಬುದು ಹೊಸ ಅನುಮಾನವಾಗಿತ್ತು. ಇದರ ತಲೆಬುಡ ಅರಸುವುದರಲ್ಲಿ ಪೊಲೀಸ್ ಇಲಾಖೆ ಇನ್ನಷ್ಟು ಸಂಶಯದ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿತ್ತು. ಇದಷ್ಟೆ ಅಲ್ಲದೆ ಇನ್ನಷ್ಟು ಅನುಮಾನಗಳು ಪ್ರಕರಣದಲ್ಲಿ ಕಾಡ್ತಿದ್ದವು. ಅವುಗಳನ್ನ ನೋಡುವುದಾದರೆ,   ಮೃತ ಮಹಿಳೆಗೆ ಕಾಲು ನೋವು ತೀವ್ರವಾಗಿತ್ತು. ವಯಸ್ಸಾದ ಮಹಿಳೆ ಕಾಲು ನೋವಿನಲ್ಲಿ ಕಡಿದಾದ ಬೆಟ್ಟಹತ್ತಲು ಸಾಧ್ಯವಾಗಿತ್ತಾ?  

ಸಿಇಟಿ ಪರೀಕ್ಷೆ ಮತ್ತು ದ್ವಿತೀಯ ಪಿಯು ಪೂರಕ ಎಕ್ಸಾಮ್​ಗೆ ಶಿವಮೊಗ್ಗದಲ್ಲಿ ಹೇಗಿದೆ ಸಿದ್ಧತೆ ! ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಸೂಚನೆ ಏನು

ಯಾರದ್ದಾದ್ದರೂ ಸಹಾಯ ಪಡೆದು ಪ್ರೆಟೋಲ್ ಕ್ಯಾನ್​ನೊಂದಿಗೆ ಬೆಟ್ಟಕ್ಕೆ ಬಂದಿದ್ದರೇ, ಅವರು ಮಹಿಳೆಯನ್ನು ಅಂತಹದ್ದೊಂದು ಸಜೀವ ದಹನಕ್ಕೆ ಗುರಿಯಾಗುವದನ್ನ ತಡೆಯುತ್ತಿರಲಿಲ್ಲವೇ! ಅಥವಾ ಹಾಗೆ ಸಹಾಯದ ನೆಪದಲ್ಲಿ ಬಂದವರೇ ಕೊಲೆಗಾರರಾಗಿದ್ದರೇ? ಚೂರು ಬೆಂಕಿ ತಾಗಿದರು, ಜೀವ ಹೋದಷ್ಟು ನೋವಾಗುತ್ತದೆ. ಹಾಗಿದ್ದು ಸಜೀವವಾಗಿ ಚಿತೆ ಮೇಲೆ ಬೆಂಕಿ ಹಾಕಿಕೊಂಡು ಸಾಯಲು ಸಾಧ್ಯವಾ? ಮೊದಲೇ ಯಾರಾದರೂ ಪ್ರಜ್ಞೆ ತಪ್ಪಿಸಿ ಕೃತ್ಯವೆಸಗಿದ್ದರಾ? ಮಹಿಳೆಯ ಮೃತದೇಹ ಸಿಕ್ಕ ಜಾಗದಲ್ಲಿ ಪೆಟ್ರೋಲ್ ಕ್ಯಾನ್ ಪತ್ತೆಯಾಗಿಲ್ಲ. ಹಾಗಾದರೆ ಅದೆಲ್ಲಿ ಹೋಯಿತು!

ಭಕ್ತರ ಸಂಭ್ರಮದಲ್ಲಿ ಕಣಿವೆ ಮಾರಮ್ಮ ದೇವಿಯ ರಥೋತ್ಸವ! ಜಾತ್ರೆಗೆ ಹೋಗಿದ್ರಾ!

ಇನ್ನೂ ಪ್ರಕರಣದ ತನಿಖೆ ವಿಳಂಭವಾಗುತ್ತಿದೆ! ಗಟ್ಟಿಯಾದ ಎನ್​ಕ್ವೈರಿ ನಡೆಯುತ್ತಿಲ್ಲವೇ? ಕೇಸ್​ ತಿಳಿಯಾಗಿಸುವ ಪ್ರಯತ್ನ ನಡೆಯುತ್ತಿದೆಯೇ? ಎಂಬ ಪ್ರಶ್ನೆಗಳ ಜೊತೆಗೆ  ಒಂಟಿ ಮನೆಯ ಹಿಂದಿನ ಕಾಡಿನ ಬೆಟ್ಟದಲ್ಲಿ ನಡೆದಿದ್ದರ ಎಫ್​ಎಸ್​ಎಲ್​ ರಿಪೋರ್ಟ್​ ಇನ್ನೂ ಪೊಲೀಸ್ ಇಲಾಖೆಗೆ ಲಭ್ಯವಾಗಿಲ್ಲ!ಇವುಗಳು ಸಹ ಇನ್ನಷ್ಟು ಸಂಶಯನ್ನ ಹುಟ್ಟುಹಾಕುತ್ತಿದೆ. 

ಭದ್ರಾವತಿಯಲ್ಲಿ ಕೇಳುವವರು ದಿಕ್ಕಿಲದೇ ದೇವರನ್ನೆ ನಂಬಿ ದೇವಸ್ತಾನದಲ್ಲಿ ಮಲಗಿದ್ದ ವೃದ್ಧೆಯೊಬ್ಬರ ಸಾವಿಗೆ ನ್ಯಾಯ ಕೊಡಿಸಿದವರು ಎಸ್​ಪಿ ಮಿಥುನ್ ಕುಮಾರ್! ಅದೇ ರೀತಿಯಲ್ಲಿ ತೀರ್ಥಹಳ್ಳಿ ಪ್ರಕರಣಕ್ಕೂ ತಾರ್ಕಿಕ ಅಂತ್ಯ ಕೊಡುತ್ತಾರಾ?