KARNATAKA NEWS/ ONLINE / Malenadu today/ May 19, 2023 SHIVAMOGGA NEWS
ಭದ್ರಾವತಿ ತಾಲ್ಲೂಕಿನ ಕಣಿವೆ ಮಾರಮ್ಮ ದೇವಿಯ ಜಾತ್ರಾ ಮಹೋತ್ವದ ಅಂಗವಾಗಿ ದೇವಿಯ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿದೆ. ಜಾತ್ರೆ ಹಿನ್ನೆಲೆಯಲ್ಲಿ ದೇವಾಲಯದ ಸಮೀಪ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ದೇವಿಯ ರಥೋತ್ಸವವನ್ನು ವೀಕ್ಷಿಸಲು ಸೇರಿದ್ದರು.
ತೀರ್ಥಹಳ್ಳಿ ಜೋಡಿ ಕೊಲೆ! ಎಸ್ಪಿ ಮಿಥುನ್ ಕುಮಾರ್ ಸ್ಥಳಕ್ಕೆ ಭೇಟಿ ! ಅಸಲಿಗೆ ನಡೆದಿದ್ದೇನು? ಆರೋಪಿ ಯಾರು!?
ಬೆಳಗಿನ ನಸುಗತ್ತಲಿನ ಜಾವದಲ್ಲಿಯೇ ದೇವಿಯ ಬೆಳ್ಳಿಉತ್ಸವ ಮೂರ್ತಿಯ ಅಡ್ಡೆಉತ್ಸವವು ದೇವಾಲಯದಿಂದ ಮಂಗಳವಾದ್ಯ ಸಹಿತವಾದ ವಾದನದೊಂದಿಗೆ ಹೊರಟು ಗ್ರಾಮದ ಮುಖ್ಯ ಬೀದಿಗಳಲ್ಲಿ ಸಂಚರಿಸಿ ರಥದ ಬಳಿ ಬಂದಿತ್ತು. ಅಲ್ಲಿಂದ ನಂತರ ರಥಪೂಜೆ ನಡೆಸಿ ರಥದಸುತ್ತಾ ದೇವಿಯಪ್ರಾಕಾರ ಉತ್ಸವ ಮಾಡಿ ರಥದೊಳಗೆ ದೇವಿಯ ಉತ್ಸವಮೂರ್ತಿಯನ್ನುಯಿರಿಸುತ್ತಿದ್ದಂತೆಯೇ ಕಡದಕಟ್ಟೆ ಬಂಡಾರಹಳ್ಳಿ ಸೇರಿದಂತೆ ಸುತ್ತಮುತ್ತಲ ಅನೇಕ ಗ್ರಾಮಗಳಿಂದ ಆಗಮಿಸಿದ್ದಸಾವಿರಾರು ಸಂಖ್ಯೆಯ ಭಕ್ತಾದಿಗಳು ದೇವಿಗೆ ಜಯಕಾರಹಾಕಿ ರಥದ ಕಳಸಕ್ಕೆ ಬಾಳೆಹಣ್ಣು ಮತು ಕರಿಮೆಣಸನ್ನು ಬೀರಿದರು.
ತನ್ನಿಬ್ಬರು ಮಕ್ಕಳ ಜೊತೆಯಲ್ಲಿ ಮಹಿಳೆ ಕಣ್ಮರೆ! ಇವರ ಸುಳಿವು ಸಿಕ್ಕಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ! ವಿವರ ಇಲ್ಲಿದೆ
ಬಳಿಕ ರಥವನ್ನು ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯ್ತು ಭಕ್ತಾದಿಗಳು ದೇವಿಗೆ ಹೂವು ಹಣ್ಣು ಕಾಯಿ ಸಮರ್ಪಿಸುವ ಮೂಲಕ ಭಕ್ತಿ ಅರ್ಪಿಸಿದರು. ರಥೋತ್ಸವದ ಅಂಗವಾಗಿ ದೇವಾಲಯಕ್ಕೆ ಸಂಸದ ಬಿ.ವೈ. ರಾಘವೇಂದ್ರ ಮಂಗೋಟೆರುದ್ರೇಶ್ ಸೇರಿದಂತೆ ಅನೇಕ ಗಣ್ಯರು ದೇವಿಯ ದರ್ಶನ ಪಡೆದರು.
ಭದ್ರಾವತಿಯಲ್ಲಿಯು ದಿ ಕೇರಳ ಸ್ಟೋರಿ (The kerala story) ಸದ್ದು!
ಭದ್ರಾವತಿ/ ತಾಲ್ಲೂಕಿನಲ್ಲಿಯು ಕೇರಳ ಸ್ಟೋರಿ (Kerala Story) ಸಖತ್ ಸದ್ದು ಮಾಡುತ್ತಿದೆ. ಇಲ್ಲಿನ ಸಿ.ಎನ್ ರಸ್ತೆಯಲ್ಲಿರುವ ನೇತ್ರಾವತಿ ಚಿತ್ರಮಂದಿರದಲ್ಲಿ ಕೇರಳ ಸ್ಟೋರಿ ಚಲನಚಿತ್ರ ಪ್ರದರ್ಶನಗೊಳ್ಳುತ್ತಿದೆ.
ಜೆಡಿಎಸ್ ಕಾರ್ಯಕರ್ತರ ರೌಡಿಸಂ? ಮಾಜಿ ಶಾಸಕರ ಆರೋಪಕ್ಕೆ ಹಾಲಿ ಶಾಸಕಿ ನೀಡಿದ್ರು ಉತ್ತರ!
ಈ ಮಧ್ಯೆ ಬಜರಂಗದಳ ವತಿಯಿಂದ ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಸಿನಿಮಾ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.ಕೇರಳ ಸ್ಟೋರಿ ಚಲನಚಿತ್ರ ವೀಕ್ಷಣೆಗೆ ಹೆಚ್ಚಿನ ಜನರು ಆಗಮಿಸುತ್ತಿದ್ದು, ಬಜರಂಗದಳ ವತಿಯಿಂದ ಗುರುವಾರ ಮೊದಲ ಪ್ರದರ್ಶನದಲ್ಲಿ ವಿವಿಧ ಕಾಲೇಜುಗಳ ಸುಮಾರು 150 ವಿದ್ಯಾರ್ಥಿನಿಯರಿಗೆ ಉಚಿತ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಯಿತು.
ಕಾಳಿಂಗಕ್ಕೆ ಮುತ್ತುಕೊಟ್ಟ ಯುವಕ! ವೈರಲ್ ಆಗ್ತಿದೆ ವಿಡಿಯೋ
ಮೇ.12 ರಿಂದ ಪ್ರತಿದಿನ ಚಲನಚಿತ್ರ 4 ಶೋಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಬಜರಂಗದಳ ವಿದ್ಯಾರ್ಥಿನಿಯರಿಗೆ ಚಲನಚಿತ್ರವನ್ನ ಉಚಿತವಾಗಿ ತೋರಿಸುವ ಮೂಲಕ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
