ಕವಿಶೈಲದ ಬಂಡೆಯ ಮೇಲೆ ಏಕಾಂಗಿಯಾಗಿ ಕೂರಲು ಯಾರಿಂದಲೂ ಸಾಧ್ಯವಿಲ್ಲ.. ಸತ್ಯವೇನು ಗೊತ್ತಾ? ಈ ಸ್ಟೋರಿ ಮಾನಪ್ಪರಿಗೆ ಅರ್ಪಣೆ

Malenadu Today

ಕಲೆಯ ಕಣ್ಣಿಲ್ಲದವನಿಗೆ ಕವಿಶೈಲ ಒಂದು ಕಲ್ಲುಕಾಡು.ಕಲಾವಂತನಿಗೆ ಅದು ಸಗ್ಗವೀಡು ಎಂದ ಜಗದ ಕವಿ ಕುವೆಂಪುಗೆ ಬಾಲ್ಯದಿಂದಲೇ ಆಕರ್ಷಿಸಿದ ಸ್ಪೂರ್ತಿಯ ತಾಣವದು.ಕುವೆಂಪುರವರ ಸಾಹಿತ್ಯ ಕೃಷಿಗೆ ಪ್ರೇರಣೆಯಾದ ಕವಿಶೈಲದ ಬಂಡೆಯ ಆ ಸ್ಥಳದಲ್ಲಿ ಈವರೆಗೂ ಬೇರ್ಯಾರು ಏಕಾಂಗಿಯಾಗಿ ಕೂರಲು ಸಾಧ್ಯವೇ ಆಗಿಲ್ಲ.ಕುವೆಂಪು ಕೂತು ಬರೆಯುತ್ತಿದ್ದ ಸ್ಥಳ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿದ್ದರೂ..ಆ ಸ್ಥಳ ಮೆಟ್ಟಲು ಯಾರಿಂದಲೂ ಸಾಧ್ಯವಾಗಿಲ್ಲ,.ಇದು ಅಚ್ಚರಿಯಾದರೂ ನಿಜ.ಹಾಗಂತ ಇದು ಮೂಡನಂಬಿಕೆ ಬಿತ್ತುವ ಪ್ರಯತ್ನವಲ್ಲ…

ಇದನ್ನು ಸಹ ಓದಿ : ಕುವೆಂಪುರವರ ಸಾಹಿತ್ಯಕ್ಕೆ ಪ್ರೇರಣೆ ನೀಡಿದ ಕವಿಶೈಲದ ಬಂಡೆ ಮೇಲೆ ಹಾಡು ಹಾಡಿದ್ದೀರಾ!? ಕವಿನಮನದ ಹಳೆ ನೆನಪಿನ ವಿಡಿಯೋ ನೋಡಿ

ಕವಿಯ ಪಾವಿತ್ರ ಕ್ಷೇತ್ರದ ಮೇಲೆ ಸಾಹಿತ್ಯಾಸಕ್ತರು ಇಟ್ಟಿರುವ ಪ್ರೀತಿ ಎಂದರೂ ತಪ್ಪಾಗುವುದಿಲ್ಲ…ಹಾಗೆಯೇ ಈ ಸ್ಥಳದ ಕುತುಹಲವನ್ನು ಒಮ್ಮೆ ಮೆಲಕು ಹಾಕಿದರೆ…ಕವಿಶೈಲದ ನಿಸರ್ಗದ ರಹಸ್ಯಗಳು ಅನಾವರಣಗೊಳ್ಳುತ್ತೆ…ಇದೇ ಈ ಹೊತ್ತಿನ ವಿಶೇಷ ಕವಿಶೈಲ-ತಫೋಭೂಮಿ..ರಾಷ್ಟ್ರಕವಿ ಕುವೆಂಪುರವರ ಬರಹಗಳಿಗೆ ಸ್ಪೂರ್ತಿ ನೀಡಿದ ಕುಪ್ಪಳಿಯ ಕವಿಶೈಲ ಈಗ ಕುತುಹಲದ ಕೇಂದ್ರಬಿಂದುವಾಗಿದೆ.ಕುವೆಂಪುರವರ ತಪೋನೆಲದಲ್ಲಿ ಈವರೆಗೂ ಏಕಾಂಗಿಯಾಗಿ ಕೂರಲು ಸಾಧ್ಯವಾಗಿಲ್ಲ ಎಂಬ ಅಚ್ಚರಿಯ ಅಂಶವನ್ನು ಹೊರಹಾಕಿದ್ರು, ಅಂದಿನ ಗೈಡ್  ದಿವಂಗತ ಮಾನಪ್ಪ. 

ಇದನ್ನು ಸಹ ಓದಿ : ಕುಪ್ಪಳಿಯಲ್ಲಿ ನೋಡಲೇಬೇಕಾದ ಪ್ರಮುಖ ಸ್ಥಳಗಳು ಯಾವುವು ಗೊತ್ತಾ? ಕವಿನಮನ ಭಾಗ 1

ರಾಷ್ಟ್ರಕವಿ ಕುವೆಂಪುರವರು ಜನ್ಮಿಸಿದ..,ಕುಪ್ಪಳಿ ಪರಿಸರದ ಕವಿಮನೆ-ಕವಿಶೈಲ ತಾಣಗಳು ಸಾಹಿತ್ಯಾಸಕ್ತರನ್ನು  ಕೈ ಬೀಸಿ ಕರೆಯುತ್ತಿದೆ.ಕುವೆಂಪುರವರ ಸಾಹಿತ್ಯಕ್ಕೆ ಸ್ಪೂರ್ತಿ ನೀಡಿದ ಕವಿಶೈಲ,ಇಲ್ಲಿನ ನಿಸರ್ಗ  ಸೌಂದರ್ಯ ಅವರನ್ನು ರಾಷ್ಟ್ರಕವಿಯನ್ನಾಗಿಸಿದರೆ,ಮನುಜಮತ ವಿಶ್ವಪಥದ ಚಿಂತನೆಗೆ ಓರೆ ಹಚ್ಚಿದ ಇಲ್ಲಿನ ಪರಿಸರ ವಿಶ್ವಮಾನವನ್ನಾಗಿ ಮಾಡಿದೆ.ಹೌದು ರಸಋಷಿ ಚಿಂತನೆಗಳಿಗೆ ಸ್ಪೂರ್ತಿಯ ಸೆಲೆಯಾದ ಆ ಪರಿಸರ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿ ಎಂಬ ಪುಟ್ಟಗ್ರಾಮ.ಈ ಕುಪ್ಪಳಿ ಪರಿಸರಕ್ಕೆ ಹೋಗುತ್ತಿದ್ದಂತೆ ನಿಮ್ಮನ್ನು ಕವಿ ವಾಣಿ ಸ್ವಾಗತಿಸುವ ಪರಿಯೇ ಬೇರೆ.

ಮಿತ್ರರಿರಾ ಮಾತಿಲ್ಲಿ ಮೈಲಿಗೆ | ಸುಮ್ಮನಿರಿ

ಮೌನವೇ ಮಹತ್ತಿಲ್ಲಿ…, ಈ ಬೈಗು ಹೊತ್ತಿನಲಿ..,

ಕವಿಶೈಲದ ಮುತ್ತಿಬಹ ಸಂಜೆಗತ್ತಲಲಿ…,

ಧ್ಯಾನಾಸ್ಥಯೋಗಿಯಾಗಿದೆ ..,ಮಹಾ ಸಹ್ಯಗಿರಿ………. 

ಎಂದು ವರ್ಣಿಸಿರುವ ರಾಷ್ಟ್ರಕವಿ ಕುವೆಂಪು ಯಾವ ಪರಿಸರವನ್ನು ನೋಡಿ ಈ ರೀತಿ ಕವಿತೆಯನ್ನು ರಚಿಸಿದರೆಂದು ಅಚ್ಚರಿಯಾಗಬಹುದಲ್ಲವೇ.ಹೌದು ಕವಿ ಮನಸ್ಸಿಗೆ ಮುದವನ್ನು ನೀಡಿ ಅವರ ಬರವಣಿಗೆಗೆ ಸ್ಪೂರ್ತಿ ಪ್ರೇರಣೆ ನೀಡಿದ ಆ ಸ್ಥಳ ಕುಪ್ಪಳಿ ಕುಗ್ರಾಮದ ಪರಿಸರ.ತೀರ್ಥಹಳ್ಳಿ ತಾಲೂಕಿನಿಂದ 12 ಕಿಲೋಮೀಟರ್ ದೂರಲ್ಲಿರುವ ಕುಪ್ಪಳಿ ಗ್ರಾಮ,ಪ್ರಕೃತಿ ಸೌಂದರ್ಯದ ನೆಲವೀಡಾದ ಸಹ್ಯಾದ್ರಿ ಶ್ರೇಣಿಯ ಗುಡ್ಡಬೆಟ್ಟಗಳ ನಡುವೆ ಇರುವ ಪುಟ್ಟಹಳ್ಳಿ.ಕುಪ್ಪಳಿ ಪರಿಸರ ರಸರುಷಿಯ ಬಾಲ್ಯದ ರಸ ಜೀವನದ ಬದುಕಿಗೆ, ಉಸಿರನ್ನಿತ್ತು ಪೊರೆದ ಪವಿತ್ರ ಸ್ಥಳ. ಮನುಜಮತ-ವಿಶ್ವಪಥ-ಸರ್ವೋದಯ-ಸಮನ್ವಯ- ಪೂರ್ಣದೃಷ್ಟಿ, ಪಂಚಮಂತ್ರಗಳ ಜ್ಞಾನೋದಯವಾಗುತ್ತದೆ.ನಿಸರ್ಗವೇ ಈ ಮಂತ್ರಗಳನ್ನು ಹೇಳುತ್ತದೆಯೇ ಎಂಬಂತೆ ಕವಿಶೈಲದ ಪರಿಸರ ಹಲವು ಕುತುಹಲಗಳಿಗೆ ಸಾಕ್ಷಿಯಾಗಿದೆ.

ಆಕ್ಸಿಡೆಂಟ್ ನ್ಯೂಸ್​ : ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ಮೂರು ಆಕ್ಸಿಡೆಂಟ್​/ ಬಸ್​ಗಳ ಡಿಕ್ಕಿ/ ಬೈಕ್​ ಆಕ್ಸಿಡೆಂಟ್/ ಓರ್ವನ ಸಾವು

ಕವಿಗೆ ಸ್ಪೂರ್ತಿ ನೀಡಿದ ಕುಪ್ಪಳಿ ಪರಿಸರದ ಹಲವು ಕುತುಹಲ ಕೆರಳಿಸುವ ಕೌತುಕಗಳು ಹಾಗೆಯೇ ನಿಘೂಡವಾಗಿ ಉಳಿದಿದೆ.ಆ ಕುತೂಹಲದ ಕೇಂದ್ರಬಿಂದುವೇ ಕವಿ ಶೈಲ ಹೇಗಂತಿರಾ  ಮುಂದೆ ಓದಿ. ಕುಪ್ಪಳಿ ಗ್ರಾಮಕ್ಕೆ ಭೇಟಿ ನೀಡಿದಾಗ ಪ್ರವಾಸಿಗರನ್ನು ಕೈಬಿಸಿ ಕರೆಯುವ ಸ್ಥಳವೇ ಕವಿಶೈಲ…ಈ ಕಲ್ಲುಬಂಡೆಯ ಮೇಲೆ ಹಸಿರಿನ ಸೌಂದರ್ಯವೇ ಹೊದ್ದು ಮಲಗಿದೆ,ಕುವೆಂಪುರವರ ಬರಹಗಳಿಗೆ ಸ್ಪೂರ್ತಿಯಾದ ಕವಿಶೈಲದ ಬಗ್ಗೆ ಒಂದು ಸುತ್ತು ಹಾಕೋಣ ಬನ್ನಿ,.

ಕಲೆಯ ಕಣ್ಣಿಲ್ಲದವರಿಗೆ ಕವಿಶೈಲ ಒಂದು ಕಲ್ಲು ಕಾಡು.

ಕಲಾವಂತನಿಗೆ ಅದು ಸಗ್ಗವೀಡು.

ಕುವೆಂಪು ಎಳವೆಯಿಂದಲೇ ಆಕರ್ಷಿತರಾಗಿ ಪದೇ ಪದೇ ಭೇಟಿ ನೀಡುತ್ತಿದ ಸ್ಥಳ ಕವಿಶೈಲ.ಮಹಾಕವಿಯ ಸ್ಪೂರ್ತಿಯ ತಾಣ.ದಟ್ಟ ಹಸಿರಿನ ಬೆಟ್ಟಗಳ ನೆತ್ತಿಯಲ್ಲಿ ವಿಶಾಲವಾದ ಬಂಡೆಗಳಿದ್ದು,ಸುತ್ತಲಿನ ನಿಸರ್ಗ ಸೌಂದರ್ಯವನ್ನು  ನೋಡುವುದೇ ಒಂದು ಸೊಗಸು.ಮಲೆನಾಡಿನ ಪರ್ವತಗಳಲ್ಲಿ ಅಂತಹ ಸ್ಥಾನಗಳು ಅಪೂರ್ವ.ಆ ಸ್ಥಳಕ್ಕೆ ಕವಿಶೈಲವೆಂದು ಕುವೆಂಪು ಅವರೇ ನಾಮಕರಣ ಮಾಡಿದ್ದಾರೆ.

ಸರಣಿ ಸುದ್ದಿ : DYSP ಬಾಲ್​ರಾಜ್​ಗೆ ಸಿಕ್ತು ಕೇಂದ್ರ ಮಂತ್ರಿ ಪದಕ/ ಅತ್ಯುನ್ನತ ಪ್ರಶಸ್ತಿ ಸಿಗಲು ಕಾರಣವಾದ ಕೇಸ್​ ಯಾವುದು ಗೊತ್ತಾ? ಇಲ್ಲಿದೆ ಪ್ರಕರಣ ರೋಚಕ ತನಿಖೆಯ ಸರಣಿ

ಕುವೆಂಪು ಸಾಹಿತ್ಯದ ವೈವಿದ್ಯ ಮತ್ತು ಎತ್ತರಗಳು ಅವರು ಮೂಡಿಬಂದ ಸಹ್ಯಾದ್ರಿಯ ಪರ್ವತಾರಣ್ಯ ಪ್ರಪಂಚದಂತೆ ಬೆರಗು ಹುಟ್ಟಿಸುತ್ತವೆ.ಇದೆಲ್ಲದಕ್ಕೂ ಸ್ಪೂರ್ತಿಯಾದದ್ದು ಕವಿಶೈಲ.ಕವಿಶೈಲದಲ್ಲಿ ಕಂಡ ದೃಶ್ಯಗಳನ್ನು ಕುವೆಂಪು ಹಲವಾರು ಕವನಗಳಲ್ಲಿ ಕಡೆದಿಟ್ಟಿದ್ದಾರೆ.ಕವಿಯೇ ಹೇಳುವಂತೆ ಕಲೆಯ ಕಣ್ಣಿಲ್ಲದವರಿಗೆ ಕವಿಶೈಲ ಒಂದು ಕಲ್ಲು ಕಾಡು.ಕಲಾವಂತನಿಗೆ ಅದು ಸಗ್ಗವೀಡು.ಕವಿಶೈಲದಲ್ಲಿ ಕಂಡ ಎಲ್ಲಾ ದೃಷ್ಯ ವೈವಿಧ್ಯಗಳನ್ನು ಕವನದಲ್ಲಿ ಹಿಡಿದಿಡಲು ಸಾದ್ಯವೇ ಎಂದು ಸ್ವತ ಕವಿಯೇ ಪ್ರಶ್ನಿಸಿದ್ದಾರೆ.

ರಣಿ ಸುದ್ದಿ 15 ದಿನದ ಹಿಂದೆ ನಡೆದಿದ್ದ ಘಟನೆ ಬೆನ್ನಲ್ಲೆ ನಡೆದಿತ್ತು ಭೀಕರ ಘಟನೆ/ ಜ್ಞಾನಭಾರತಿ ಕಾಡಲ್ಲಿ ಅಂದು ನಡೆದಿದ್ದು ಏನು? DYSP ಬಾಲರಾಜ್​ Investigation part-2

ಹಾಗಾಗಿ ಕವಿಗೆ ಕವಿಶೈಲ ಒಂದೊಂದು ಸಲವೂ ಕಲಾದೃಷ್ಠಿಯ ದರ್ಶನವನ್ನು ಉದ್ದೀಪನಂಗೈಯುವ ತಾಣವಾಗಿದೆ.ಶತಮಾನಗಳಿಂದ ಕವಿಶೈಲ ಇಂದಿಗೂ ಸಹ ಧ್ಯಾನಸ್ಥ ಯೋಗಿಯಂತೆ ಎಲ್ಲರನ್ನು ತನ್ನತ್ತ ಸೆಳೆಯುತ್ತಾ ತನ್ನ ಸೊಬಗನ್ನು ಉಳಿಸಿಕೊಂಡಿದೆ.ಈ ಪರಿಸರದಲ್ಲಿ ಮೌನ ಕ್ರಾಂತಿಯನ್ನು ನಡೆಸುತ್ತಿದೆ.ಕುವೆಂಪು ಬರಹಕ್ಕೆ ಕಲಿಶೈಲ ಪರಿಸರ ಎಷ್ಟು ಸ್ಪೂರ್ತಿಯಾಗಿತ್ತು ಎಂಬುದಕ್ಕೆ ಅವರ ದೂರದೃಷ್ಟಿಯುಳ್ಳ ಬರಹಗಳೇ ಸಾಕ್ಷಿಯಾಗಿದೆ.ಇಂದಿಗೂ ಕವಿಶೈಲದಲ್ಲಿ ಕೂತು,ಪ್ರವಾಸಿಗರು ಕುವೆಂಪುರವರ ಕವನಗಳನ್ನು ಹಾಡುತ್ತಾ ಮೈ ಮರೆಯುತ್ತಾರೆ.

ಸಾಗರ ಸುದ್ದಿ :  Exclusive / ಸಾಗರ ಟೌನ್​ನಲ್ಲಿ ನಡೆದ ಭೀಕರ ಲಾರಿ ಅಪಘಾತ ಸಂಭವಿಸಿದ್ದೇಗೆ ನೋಡಿ ಸಿ.ಸಿ.ಟಿವಿ ವಿಡಿಯೋದಲ್ಲಿ!

ಕುವೆಂಪುರವರಿಗೆ ಪ್ರೇರಣೆ ನೀಡಿದ ತಪೋಭೂಮಿ ಇಲ್ಲಿನ ಪ್ರವಾಸಿಗರಿಗೂ ಪ್ರೇರಣೆ ನೀಡುತ್ತದೆ.ಹೀಗಾಗಿ ಇಲ್ಲಿಗೆ ಭೇಟಿ ನೀಡುವ ಮೊದಲ ಪ್ರವಾಸಿಗನೂ ಇಲ್ಲಿ ಕವಿಯಾಗುತ್ತಾನೆ. ಕುವೆಂಪು ಆಪ್ತ ಸ್ನೇಹಿತರು ಸಾಹಿತಿಗಳು ಆಗಾಗ ಕಪ್ಪಳಿಯ ಕವಿಶೈಲಕ್ಕೆ ಭೇಟಿ ನೀಡುತ್ತಿದ್ದರು.1936ರಲ್ಲಿ ಕವಿಶೈಲದ ಬಂಡೆಯ ಮೇಲೆ ದೇವರ ರುಜುವಿನ ಸಮ್ಮುಖದಲ್ಲಿ ತಮ್ಮ ಭೇಟಿಯ ನೆನಪುಗಳನ್ನು ಉಳಿಸಿಹೋಗಿದ್ದಾರೆ. ಬಾಲ್ಯದ ಒಡನಾಡಿಯಾಗಿ ನಂತರ ಸ್ಮೃತಿಕೋಶದ ಭಾಗವಾಗಿ ಕುವೆಂಪುರವರನ್ನು ಜೀವನದುದ್ದಕ್ಕೂ ಪ್ರಭಾವಿಸಿದ ಕವಿಶೈಲದಲ್ಲಿಯೇ 11.11.1994ರಂದು ಅವರ ಭೌತಿಕ ಶರೀರ ಲೀನವಾಯಿತು.ಕವಿಯ ಪ್ರೀತಿಯ ಕವಿಶೈಲದ ಹಾಸು ಬಂಡೆಯ ಮೇಲೆ ಕುವೆಂಪುರವರ ಅಂತಿಮ ಸಂಸ್ಕಾರ ನಡೆಯಿತು.ಆ ಜಾಗವೀಗ ಇಲ್ಲಿನ ಪ್ರಕೃತಿಯ ಚೆಲುವಿನೊಡನೆ ಸೇರಿ ಪವಿತ್ರ ಪ್ರಭಾವಲಯವೊಂದನ್ನು ಸೃಷ್ಟಿಸಿದೆ.

ಇದನ್ನು ಸಹ ಓದಿ :ಚಿರತೆ ಇದೆ ಎಂದಿದಕ್ಕೆ ಸಾಯುವ ಹಾಗೆ ಹೊಡೆದ ಪರಿಯಸ್ಥರು/ ಇದೆಂತದ್ರಿ ಅನ್ಯಾಯ? ವಿವರ ಇಲ್ಲಿದೆ

ಕವಿಶೈಲ ಈಗ ಪ್ರವಾಸಿ ತಾಣವಾಗಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.ಕವಿಯ ನಿಧನದ ನಂತರ ನಿರ್ಮಾಣಗೊಂಡಿರುವ ಶಿಲಾ ಸ್ಮಾರಕಗಳು ಅವರಿಗೆ ಗೌರವ ನಮನಗಳನ್ನು ಸಲ್ಲಿಸುತ್ತಿವೆ.ಇವು ಪಾರಂಪಾರಿಕಾ ಸ್ಮಾರಕಗಳಿಗೆ ಭಿನ್ನವೋ ಎಂಬಂತಿವೆ.ಕವಿಯ ಕವನಗಳು ಕೆತ್ತನೆ ರೂಪದಲ್ಲಿ ರಾರಾಜಿಸುತ್ತವೆ.ಕವಿಶೈಲದ ಸೂರ್ಯಸ್ಥ,ಹಚ್ಚ ಹಸಿರಿನ ಬೆಟ್ಟಗಳ ನೋಟ,ಕವಿ ಕೂತು ಬರೆಯುತ್ತಿದ್ದ ಜಾಗ,ಕವಿ ಸಮಾದಿ ಎಲ್ಲವೂ ಪವಿತ್ರತಾಣವಾಗಿದೆ. ಆದರೆ ಕವಿಶೈಲದ ಬಂಡೆಹಾಸಿನ ಮೇಲೆ ಕೂತು ಬರಹಕ್ಕೆ ಮುನ್ನುಡಿಯಿಡುತ್ತಿದ್ದ ಆ ಪವಿತ್ರ ಸ್ಥಳದಲ್ಲಿ ಏಕಾಂಗಿಯಾಗಿ ಕೂರಲು ಯಾರಿಗೂ ಸಾಧ್ಯವಿಲ್ಲ…ಇದು ಅಚ್ಚರಿಯಾದರೂ…ನಿಜ. 

ಜಗದ ಕವಿಗೆ ಪ್ರೇರಣೆಯಾದ ಸ್ಥಳ ಕವಿಶೈಲ.

ಕವಿ ಕೂತು ಬರೆಯುತ್ತಿದ್ದ ಆ ಬಂಡೆಯ ಸ್ಥಳದಲ್ಲಿ ಯಾರು ಕೂರಲು ಸಾಧ್ಯವಿಲ್ಲ.

ಕವಿಶೈಲದಲ್ಲಿ ಕಂಡ ದೃಶ್ಯಗಳನ್ನು ಕುವೆಂಪು ಹಲವಾರು ಕಥೆ ಕಾದಂಬರಿ ಕವನಗಳಲ್ಲಿ ಕಡೆದಿಟ್ಟಿದ್ದಾರೆ. ಕವಿಗೆ ಪ್ರೇರಣೆಯಾದ ಈ ಬಂಡೆಯ ಸ್ಥಳ ಈಗಲೂ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿದೆ.1936 ರಲ್ಲಿ ಕುವೆಂಪು ಬಿ.ಎಂ ಶ್ರೀಕಂಠಯ್ಯ ನವರು ಭೇಟಿಗೆ ಸಾಕ್ಷಿಯಾದ ಕವಿಶೈಲದ ಕಲ್ಲು ಬಂಡೆಯ ಮೇಲೆ ಅಂದಿನ ನೆನಪುಗಳನ್ನು ಕೆತ್ತಲಾಗಿದೆ.ಕವಿಗೆ ಪ್ರೇರಣೆಯಾದ..ಸರಸ್ವತಿ ಒಲಿದ ಈ ಬಂಡೆಯ ಮೇಲೆ ಈವರೆಗೂ ಏಕಾಂಗಿಯಾಗಿ ಯಾರು ಕೂರಲು ಸಾಧ್ಯವಾಗಿಲ್ಲ. ಈ ರೀತಿಯ ಅಚ್ಚರಿಯ ಸಂಗತಿಯನ್ನು ಹೊರಹಾಕಿದ್ರು . ಕುಪ್ಪುಳಿಯ ಅಂದಿನ ಗೈಡ್ ಮಾನಪ್ಪ.

Exclusive / ಸಾಗರ ಟೌನ್​ನಲ್ಲಿ ನಡೆದ ಭೀಕರ ಲಾರಿ ಅಪಘಾತ ಸಂಭವಿಸಿದ್ದೇಗೆ ನೋಡಿ ಸಿ.ಸಿ.ಟಿವಿ ವಿಡಿಯೋದಲ್ಲಿ!

ಕುಪ್ಪಳಿಯ ಪರಿಸರ ಕುವೆಂಪು ಪ್ರತಿಷ್ಠಾನವಾದ ನಂತರ ಇಲ್ಲಿನ ಕವಿಮನೆ ಮತ್ತು ಕವಿಶೈಲ ಜೈವಿಕ ದಾಮ ಹೇಮಾಂಗಣವೆಲ್ಲಾ ಪ್ರವಾಸಿ ತಾಣವಾಯಿತು.ಈ ಪ್ರದೇಶವನ್ನು ಪರಿಚಯಿಸುವುದಕ್ಕೆ ಗೈಡ್ ಮಾನಪ್ಪ ನೇಮಕವಾಗ್ತಾರೆ. ಆದ್ರೆ ಗೈಡ್ ಮಾನಪ್ಪ ಈಗಿಲ್ಲ. ಈ ಹಿಂದೆ ಅವರು ಪತ್ರಕರ್ತರ ಜೊತೆ ಕವಿಶೈಲದ ಬಂಡೆಯ ಬಗ್ಗೆ ಹಂಚಿಕೊಂಡ ಅನುಭವ ಮಾತ್ರ ಎಂದಿಗೂ ಮರೆಯಲಾಗದು. 1996 ರಲ್ಲಿ ಇಲ್ಲಿಗೆ ಗೈಡ್ ಆಗಿ ಬಂದ ಮಾನಪ್ಪ ಇಂದು ಕುವೆಂಪುರವರ ಬಗ್ಗೆ ಬಹಳಷ್ಟು ತಿಳಿದುಕೊಂಡಿರುವುದು ಅವರ ಬಾಯಿಂದ ನಿರರ್ಗಳವಾಗಿ ಬರುವ ಕುವೆಂಪು ಸಾಹಿತ್ಯವೇ ಸಾಕ್ಷಿಯಾಗಿದೆ.

ಮಾನಪ್ಪ ಗೈಡ್ ಆದ ನಂತರ ಅವರನ್ನು ಹೆಚ್ಚು ಆಕರ್ಷಿಸಿದ್ದು ಇದೇ ಕವಿಶೈಲದ ನೆಲ.ಕುವೆಂಪು ಕೂತು ಬರೆಯುತ್ತಿದ್ದ ಕಲ್ಲುಬಂಡೆಯನ್ನು ನೋಡುತ್ತಾ ನಿಸರ್ಗದ ಸವಿಯನ್ನು ಸವಿಯುತ್ತಿದ್ದ ಮಾನಪ್ಪಗೆ…ಕವಿಶೈಲದ ಕಲ್ಲುಬಂಡೆಯ ಮೇಲೆ ಏಕಾಂಗಿಯಾಗಿ ಕೂರುವ ತವಕವಿತ್ತಂತೆ…ಎಲ್ಲಾ ಪ್ರವಾಸಿಗರು ಇರುವ ಸಂದರ್ಭದಲ್ಲಿ ಕೂತರೆ..ಸರಿಯಾಗಿ ಕಾಣುವುದಿಲ್ಲ..

ಪ್ರವಾಸಿಗರೂ ಕೂಡ ಅದನ್ನೇ ಮಾಡುತ್ತಾರೆ ಎಂಬ ಕಾರಣಕ್ಕೆ ಮಾನಪ್ಪ…ಯಾರು ಇಲ್ಲದ ವೇಳೆ ಕವಿಶೈಲದ ಬಂಡೆಯಲ್ಲಿ ಕುವೆಂಪುರವರು ಕೂತು ಬರೆಯುತ್ತಿದ್ದ ಸ್ಥಳದಲ್ಲಿ ಕೂರುವ ತವಕ ಹೆಚ್ಚಾಗುತ್ತೆ.ಆದರೆ ಎಂದಿಗೂ ಸಾಧ್ಯವಾಗದ ಸಂದರ್ಭದಲ್ಲಿ ಅಂದುಕೊಂಡಂತೆ ಒಂದು ದಿನ ಬೆಳಿಗ್ಗೆ 11 ಗಂಟೆ ಹೊತ್ತಿಗೆ ಬಂಡೆಯ ಮೇಲೆ ಕೂತಾಗ ಬೇರೆಯದ್ದೇ ರೀತಿಯ ಅನುಭವವಾಯಿತು ಎಂದಿದ್ರು  ಮಾನಪ್ಪ,

ಪ್ರವಾಸಿಗರು ಗುಂಪಿನಲ್ಲಿ ಬಂದು ಬಂಡೆ ಮೇಲೆ ಕೂತರೂ ಏನು ಅನುಭವವಾಗದು.

ಆದರೆ ಏಕಾಂಗಿಯಾಗಿ ಏಕಾಂತದಲ್ಲಿ ಕೂರಲು ಸಾಧ್ಯವಿಲ್ಲ.

ಅಂದು ಮಾನಪ್ಪ ಹೇಳಿದ ರೀತಿ ..ಪ್ರವಾಸಿಗರು  ಕವಿಶೈಲಕ್ಕೆ ಗುಂಪಿನಲ್ಲಿ ಬಂದು ಪೋಟೋ ಕ್ಲಿಕ್ಕಿಸಿಕೊಳ್ಳುವಾಗ ಬಂಡೆ ಹತ್ತುತ್ತಾರೆ ಇಳಿಯುತ್ತಾರೆ.ಇನ್ನು ಕೆಲವರು ಕುವೆಂಪು ಕೂತ ಜಾಗದಲ್ಲಿಯೇ ಕೂತು ಸೆಲ್ಪಿ ಕ್ಲಿಕ್ಕಿಸಿಕೊಳ್ಳುತ್ತಾರೆ.ಗುಂಪಿನಲ್ಲಿದ್ದಾಗ ಆಗುವ ಸಾಧ್ಯತೆಗಳು…ಏಕಾಂತದಲ್ಲಿ ಏಂಕಾಂಗಿಯಾಗಿರುವಾಗ ಆಗಲು ಏಕೆ ಸಾಧ್ಯವಿಲ್ಲ ಎಂಬ ಪ್ರಶ್ನೆ ಅವರನ್ನು ಕಾಡಿದ್ದಂತೂ ಸುಳ್ಳಲ್ಲ.ಮಾನಪ್ಪ ಗಮನಿಸಿರುವ ಪ್ರಕಾರ ಯಾರೊಬ್ಬರು ಈವರೆಗೂ ಏಕಾಂಗಿಯಾಗಿ ಕವಿ ಕೂತ ಬಂಡೆಯ ಮೇಲೆ ಕೂರಲು ಸಾದ್ಯವಾಗಿಲ್ಲ.ಕೂತ ಊದಾಹರಣೆಗಳು ಇಲ್ಲ ಅದೊಂದು ರೀತಿಯಲ್ಲಿ ಕವಿಗೆ ಪ್ರೇರಣೆಯಾದ ಪವಿತ್ರ ಸ್ಥಳವಾಗಿದೆ ಎಂದಿದ್ರು ಮಾನಪ್ಪ. .

ಇದನ್ನು ಓದಿ : ಕುಪ್ಪಳಿಯಲ್ಲಿ ನೋಡಲೇಬೇಕಾದ ಪ್ರಮುಖ ಸ್ಥಳಗಳು ಯಾವುವು ಗೊತ್ತಾ?

ಗೈಡ್ ಮಾನಪ್ಪ ಹಗಲು ರಾತ್ರಿ ಇದೇ ಪರಿಸರದಲ್ಲಿ ಓಡಾಡಿಕೊಂಡಿದ್ದು,,ಕುವೆಂಪುರವರ ಕವನ ಅವರ ಬಗೆಗೆ ಜ್ಞಾನ ಸಂಪಾದನೆ ಮಾಡಿದ್ರು. ಕುವೆಂಪು ಬಗ್ಗೆ ನಿರರ್ಗಳವಾಗಿ ಮಾತನಾಡುವ ಮಾನಪ್ಪ ಪ್ರವಾಸಿಗರ ಆಕರ್ಷಣೆಯೂ ಆಗಿದ್ರು.  ಕವಿಯ ತಪೋಭೂಮಿ ಮೇಲೆ ಪೂಜ್ಯ ಭಾವನೆ ಇರುವ ಕಾರಣಕ್ಕೂ ಕೂಡ ಪ್ರವಾಸಿಗರು ಇಲ್ಲಿ ಏಕಾಂಗಿಯಾಗಿ ಕೂರಲು ಮನಸ್ಸು ಮಾಡುವುದಿಲ್ಲ ಎಂಬುದು ನಿರ್ವಿವಾದ..ಆದರೆ ವೈಚಾರಿಕತೆಗೆ ನಾಂದಿ ಹಾಡಿದ…ವಿಶ್ವಮಾನವ ಸಂದೇಶ ಸಾರಿದ ನೆಲದಲ್ಲಿ ಇಂದತ ಕುತೂಹಲದ ಸಂಗತಿಗಳು ಅಡಗಿರುವುದು ನಿಜಕ್ಕು ಅಚ್ಚರಿಯನ್ನುಂಟುಮಾಡುತ್ತದೆ.

ಕುವೆಂಪುರವರ ಸಾಹಿತ್ಯಕ್ಕೆ ಪ್ರೇರಣೆ ನೀಡಿದ ಕವಿಶೈಲದ ಬಂಡೆ ಮೇಲೆ ಹಾಡು ಹಾಡಿದ್ದೀರಾ!? ಕವಿನಮನದ ಹಳೆ ನೆನಪಿನ ವಿಡಿಯೋ ನೋಡಿ

Share This Article