ಹುಷಾರ್! ಶಿವಮೊಗ್ಗದಲ್ಲಿ ನಕಲಿ ದಾಖಲೆ ಕೊಟ್ಟು ಸೈಟು ಮಾರುತ್ತಾರೆ! ಇಲ್ಲಿದೆ ನೋಡಿ ಉದಾಹರಣೆ

A man has been arrested in Shivamogga for allegedly selling a site by giving fake documents.

ಹುಷಾರ್! ಶಿವಮೊಗ್ಗದಲ್ಲಿ ನಕಲಿ ದಾಖಲೆ ಕೊಟ್ಟು ಸೈಟು ಮಾರುತ್ತಾರೆ!  ಇಲ್ಲಿದೆ ನೋಡಿ ಉದಾಹರಣೆ

KARNATAKA NEWS/ ONLINE / Malenadu today/ May 19, 2023 SHIVAMOGGA NEWS

ಶಿವಮೊಗ್ಗ/ ನಗರದಲ್ಲಿ ರಿಯಲ್​ ಎಸ್ಟೇಟ್ ವಹಿವಾಟಿನ ಅಂತರಾಳದಲ್ಲಿ ರಾಶಿಗಟ್ಲೇ ಮೋಸ ನಡೆಯುತ್ತಿದೆ ಎಂಬುದಕ್ಕೆ ಪೂರಕವಾದ ಘಟನೆಯೊಂದು ನಡೆದಿದೆ. ಇಲ್ಲಿನ  ಶುಭಮಂಗಳ ಸಮೀಪ 20x30 ಅಳತೆಯ ನಿವೇಶನಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಿದ ಆರೋಪದಡಿಯಲ್ಲಿ ಓರ್ವ ವ್ಯಕ್ತಿಯನ್ನ ಪೊಲೀಸರು ಬಂಧಿಸಿದ್ದಾರೆ. 

ಎನಾಗಿತ್ತು!

ಇಲ್ಲಿನ ನಿವಾಸಿಯೊಬ್ಬರು ಯಾರದ್ದೋ ಸೈಟ್​ಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ನಿವೇಶನಗಳನ್ನು ಮಾರಿದ್ಧಾರೆ. ಆದರೆ ಖಾತೆ ಮಾಡಿಸುವ ಸಂಬಂಧ ಪಾಲಿಕೆಯಲ್ಲಿ ವಿಚಾರಿಸಿದಾಗ, ನಿವೇಶನದ ಸಂಖ್ಯೆಯೇ ಇಲ್ಲದಿರುವುದು ಗೊತ್ತಾಗಿದೆ. ಇದರಿಂದಾಗಿ ನಕಲಿ ದಾಖಲೆ ನೀಡಿ ಮೋಸ ಮಾಡಿದ್ದ ವ್ಯಕ್ತಿಯ ವಿರುದ್ಧ ವಿನೋಬನಗರ ಪೊಲೀಸ್ ಸ್ಟೇಷನ್​ನಲ್ಲಿ ಕಂಪ್ಲೇಂಟ್ ದಾಖಲಾಗಿತ್ತು. ದೂರು ದಾಖಲಿಸಿಕೊಂಡ ಪೊಲೀಸರು ವಂಚನೆ ಪ್ರಕರಣದಡಿಯಲ್ಲಿ ಆರೋಪಿಯನ್ನ ಬಂಧಿಸಿದ್ಧಾರೆ.  

ತೀರ್ಥಹಳ್ಳಿ ಜೋಡಿ ಕೊಲೆ! ಇಡ್ಲಿ ಮತ್ತು ಊಟದ ವಿಚಾರಕ್ಕೆ ನಡೀತಾ ಘಟನೆ! ಎಸ್​ಪಿ ಮಿಥುನ್ ಕುಮಾರ್ , ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದೇನು?



ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣ ಸಂಬಂಧ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 

ಪ್ರಕರಣ ಸಂಬಂಧ ಓರ್ವ ಆರೋಪಿ ರಾಜಪ್ಪ ಎಂಬಾತನನ್ನು ಬಂಧಿಸಲಾಗಿದ್ದು, ಘಟನೆ ನಡೆದ ಕೆಲಹೊತ್ತಿನಲ್ಲಿಯೇ ಆರೋಪಿಯನ್ನು ಸೆರೆ ಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ. 

Shivamogga airpirt / ಗುಡ್ ನ್ಯೂಸ್ ! ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಿಕ್ತು ಅಂತಾರಾಷ್ಟ್ರೀಯ ಕೋಡ್! ಏನಿದು ಗೊತ್ತಾ? ಯಾವಾಗ ವಿಮಾನ ಹಾರಾಟ ಆರಂಭ!?

ನಡೆದಿದ್ದೇನು? 

ತೀರ್ಥಹಳ್ಳಿಯ ಕುರುವಳ್ಳಿ ಪುತ್ತಿಗೆ ಮಠದ ಪಕ್ಕದಲ್ಲಿ ವಿಶ್ವಕರ್ಮ ಸಮುದಾಯ ಭವನ ನಿರ್ಮಾಣವಾಗುತ್ತಿತ್ತು. ಚುನಾವಣೆ ಹಿನ್ನೆಲೆಯಲ್ಲಿ ಅಂತಿಮ ಹಂತದ ಕೆಲಸ ನಿಂತಿತ್ತು. ಆನಂತರ ಮತ್ತೆ ಅಲ್ಲಿಗೆ ಕೆಲಸ ಮಾಡಲು ದಾವಣಗೆರೆಯ ಐವರು ಆಗಮಿಸಿದ್ದರು. ಈ ಐವರಲ್ಲಿ ರಾಜಪ್ಪ ಎಂಬಾತ ಉಳಿದವರಿಗೆ ನಿತ್ಯ ಪ್ರತಿಹೊತ್ತು ಅಡುಗೆ ಮಾಡಿಕೊಡುತ್ತಿದ್ದ. ಘಟನೆ ನಡೆದ ದಿನವೂ ಅಡುಗೆ ಮಾಡಿದ್ದ. ಆದರೆ ರಾತ್ರಿ ಅಡುಗೆ ಮಾಡಲು ನಿರಾಕರಿಸಿದ್ದ.

ಸಿಇಟಿ ಪರೀಕ್ಷೆ ಮತ್ತು ದ್ವಿತೀಯ ಪಿಯು ಪೂರಕ ಎಕ್ಸಾಮ್​ಗೆ ಶಿವಮೊಗ್ಗದಲ್ಲಿ ಹೇಗಿದೆ ಸಿದ್ಧತೆ ! ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಸೂಚನೆ ಏನು

ಊಟ ಮಿಕ್ಕಿದ್ದೇ ಘಟನೆ ಕಾರಣವಾಯ್ತಾ

ಮಧ್ಯಾಹ್ನದ ಊಟವಿನ್ನೂ ಮಿಕ್ಕಿದ್ದು, ಸಮೀಪದಲ್ಲಿಯೇ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದವರು, ಅಲ್ಲಿ ಊಟಕ್ಕೆ ತಯಾರಿಸಿದ್ದ ಇಡ್ಲಿಯನ್ನು ಕಾರ್ಮಿಕರಿಗೆ  ಕೊಟ್ಟಿದ್ದರು. ಹೀಗಾಗಿ ರಾಜಪ್ಪ ಅದನ್ನೆ ಹೊಂದಾಣಿಕೆ ಮಾಡಿ ತಿನ್ನಿ ಎಂದು ಉಳಿದವರಿಗೆ ಹೇಳಿದ್ಧಾನೆ. ಈ ವಿಚಾರದಲ್ಲಿ ಮಂಜಪ್ಪ ಮತ್ತು ಬೀರೇಶ್​ ಹಾಗೂ ರಾಜಪ್ಪ ನಡುವೆ ಜಗಳವಾಗಿದೆ. ಈ ಜಗಳ ತಾರಕಕ್ಕೇರಿದೆ. 

ಭದ್ರಾವತಿಯಲ್ಲಿಯು ದಿ ಕೇರಳ ಸ್ಟೋರಿ (The kerala story) ಸದ್ದು!

ಪಿಕಾಸಿಯಿಂದ ಹೊಡೆದು ಕೊಲೆ

ಆನಂತರವೂ ತನ್ನ ಸಿಟ್ಟನ್ನ ಕಮ್ಮಿ ಮಾಡಿಕೊಳ್ಳದ ರಾಜಪ್ಪ, ಮಂಜಪ್ಪ ಹಾಗೂ ಬೀರೇಶ್ ಮಲಗಿದ್ದಾಗ ಅವರ ಮೇಲೆ ಪಿಕಾಸಿ ತೆಗೆದುಕೊಂಡು ಹಲ್ಲೆ ಮಾಡಿದ್ದಾನೆ. ಪರಿಣಾಮ ಗ್ರೌಂಡ್ ಪ್ಲೋರ್​ನಲ್ಲಿ ಮಲಗಿದ್ದ ಮಂಜಪ್ಪ ಹಾಗೂ ಟೆರೆಸ್ ಮೇಲೆ ಮಲಗಿದ್ದ ಬೀರೇಶ್ ಇಬ್ಬರು ಮಲಗಿದ್ದಲ್ಲೆ ಉಸಿರು ಚೆಲ್ಲಿದ್ದಾರೆ. ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿರುವ ಎಸ್​ಪಿ ಮಿಥುನ್ ಕುಮಾರ್, ಆರೋಪಿಯನ್ನ ಬಂಧಿಸಿದ್ದಾಗಿ ತಿಳಿಸಿದ್ದಾರೆ. 

ಭಕ್ತರ ಸಂಭ್ರಮದಲ್ಲಿ ಕಣಿವೆ ಮಾರಮ್ಮ ದೇವಿಯ ರಥೋತ್ಸವ! ಜಾತ್ರೆಗೆ ಹೋಗಿದ್ರಾ!

ಮಾಜಿ ಗೃಹಸಚಿವರು ಹೇಳಿದ್ದೇನು?

ಇನ್ನೂ ನಿನ್ನೆ ಘಟನೆ ಸ್ಥಳಕ್ಕೆ ಭೇಟಿಕೊಟ್ಟಿದ್ದ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರರವರು, ಘಟನೆಯಲ್ಲಿ ಮಲೆನಾಡಿಗೂ ಸಾವನ್ನಪ್ಪಿದವರಿಗೂ ಹಾಗೂ ಕೊಲೆ ಮಾಡಿದ ಆರೋಪಿಗೂ ಸಂಬಂಧವಿಲ್ಲ. ಅವರು ದಾವಣಗೆರೆ ಜಿಲ್ಲೆಯವರು. ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತದೆ. ಆದರೆ ಇದೇ ತಿಂಗಳು ಉದ್ಘಾಟನೆಯಾಗಬೇಕಿದ್ದ ಸಮುದಾಯ ಭವನದಲ್ಲಿ ಹೀಗಾಯ್ತಲ್ಲ ಎಂಬ ಬೇಸರವಿದೆ. ಹೀಗಾಗಿ ಪೂಜೆ ಮಾಡಿ, ಉದ್ಘಾಟನೆ ಮಾಡಿ ಎಂದು ಸಹಜವಾಗಿ ಸಲಹೆ ನೀಡಿದ್ದೇನೆ ಎಂದಿದ್ಧಾರೆ.