Shivamogga airpirt / ಗುಡ್ ನ್ಯೂಸ್ ! ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಿಕ್ತು ಅಂತಾರಾಷ್ಟ್ರೀಯ ಕೋಡ್! ಏನಿದು ಗೊತ್ತಾ? ಯಾವಾಗ ವಿಮಾನ ಹಾರಾಟ ಆರಂಭ!?

Shivamogga airpirt / Good news ! Shimoga airport gets international code! Do you know what it is? When will the flight start flying??

ಹಂಚಿಕೊಳ್ಳಿ
WhatsApp Facebook X Telegram
ಸುದ್ದಿ ಸಾರಾಂಶ

Shivamogga airpirt / Good news ! Shimoga airport gets international code! Do you know what it is? When will the flight start flying??

KARNATAKA NEWS/ ONLINE / Malenadu today/ May 19, 2023 SHIVAMOGGA NEWS

ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ(shivamogga airport)

ಉದ್ಘಾಟನೆಗೊಂಡು ಎರಡು ತಿಂಗಳೇ ಆಗ್ತಾ ಬಂದರೂ ಇನ್ನೂ ಸಹ ಚಾಲನೆ ಕಂಡಿಲ್ಲ. ಈ ಮಧ್ಯೆ ವಿಮಾನ ನಿಲ್ದಾಣದ ವಿಚಾರಣವಾಗಿ ಸುದ್ದಿಯೊಂದು ಹೊರಬಿದ್ದಿದೆ.  ಸೋಗಾನೆಯಲ್ಲಿ ನಿರ್ಮಾಣಗೊಂಡಿರುವ  ನೂತನ ವಿಮಾನ ನಿಲ್ದಾಣಕ್ಕೆ ಐಎಟಿಆರ್ (ಇಂಟರ್‌ನ್ಯಾಶನಲ್ ಏರ್‌ ಟ್ರಾಫಿಕ್ ಆರ್ಗನೈಸೇಶನ್‌) ಕೋಡ್ ದೊರಕಿದೆ. ಈ ಕೋಡ್​ ಸಿಕ್ಕ ನಂತರವಷ್ಟೆ ವಿಮಾನ ಹಾರಾಟಕ್ಕೆ ಅಧಿಕೃತ ಅನುಮತಿ ದೊರೆಯಲಿದೆ. 

ಏನಿದು ಕೋಡ್​

ಸದ್ಯ ಈ ಕೋಡ್​ ನೀಡಿರುವ ಬಗ್ಗೆ ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಘಟನೆ (ಐಸಿಎಒ)ಯ  ಎಐಪಿ ಮ್ಯಾಗಜಿನ್‌ನಲ್ಲಿ (Aeronautical Information Publication) ನಲ್ಲಿ ಕಳೆದ ಒಂದು ವಾರದ ಹಿಂದೆ ಮಾಹಿತಿ ಪ್ರಕಟವಾಗಿದೆ. ಈ ಕೋಡ್​ ದೊರೆತ 45 ದಿನಗಳ ನಂತರ ವಿಮಾನ ಹಾರಾಟಕ್ಕೆ ಚಾಲನೆ ನೀಡಬಹುದಾಗಿದೆ. 

ಮುಂಬೈ ಗೋವಾ ಚೆನ್ನೈ ವಿಮಾನ

ಪ್ರಾರಂಭಿಕ ಹಂತದಲ್ಲಿ ಮುಂಬೈ ಹಾಗೂ ಬೆಂಗಳೂರಿಗೆ ವಿಮಾನಗಳು ಹಾರಾಟ ನಡೆಸಲಿದ್ದು, ಈ ಸಂಬಂಧ ಪ್ರಕ್ರಿಯೆಗಳು ನಡೆಯುತ್ತಿವೆ. ಗೋವಾ, ಚೆನ್ನೈಗೆ ವಿಮಾನಗಳ ಹಾರಾಟಕ್ಕೂ ಸಿದ್ಧತೆ ನಡೆದಿದೆ ಎನ್ನಲಾಗಿದೆ. ಇನ್ನೂ ತಾಂತ್ರಿಕ ಸಮಸ್ಯೆಗಳೆಲ್ಲಾ ಕಳೆದು, ಅಂತಾರಾಷ್ಟ್ರೀಯ ಕೋಡ್​ನ ಗಡಿ ಮುಗಿದು ಏರ್​ಪೋರ್ಟ್​ ಆಗಸ್ಟ್​ನ ಹೊತ್ತಿಗೆ ಆರಂಭವಾಗುವ ಸಾಧ್ಯತೆ ಇದೆ. 

 ಚುನಾವಣೆಗೆ ನೆರವಾಗಿದ್ದ ನಿಲ್ದಾಣ

ಸಾರ್ವಜನಿಕರಿಗೆ ಇನ್ನೂ ತೆಗೆದುಕೊಳ್ಳದ ವಿಮಾನ ನಿಲ್ದಾಣ, ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ರಾಹುಲ್‌ ಗಾಂಧಿ ಓಡಾಟಕ್ಕೆ ನೆರವಾಗಿತ್ತು. 

 ಸಿಇಟಿ ಪರೀಕ್ಷೆ ಮತ್ತು ದ್ವಿತೀಯ ಪಿಯು ಪೂರಕ ಎಕ್ಸಾಮ್​ಗೆ ಶಿವಮೊಗ್ಗದಲ್ಲಿ ಹೇಗಿದೆ ಸಿದ್ಧತೆ ! ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಸೂಚನೆ ಏನು

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಹಾಗೂ ವೃತ್ತಿಪರ ಕೋರ್ಸ್​​ಗಳಿಗೆ ಪ್ರವೇಶಕ್ಕಾಗಿ ಸಿಇಟಿ ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾಳಿಂಗಕ್ಕೆ ಮುತ್ತುಕೊಟ್ಟ ಯುವಕ! ವೈರಲ್ ಆಗ್ತಿದೆ ವಿಡಿಯೋ

ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಕುರಿತು ವಿವಿಧ ಇಲಾಖೆಗಳ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು. ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಮೇ 23ರಿಂದ ಜೂನ್ 3ರವರೆಗೆ ಜಿಲ್ಲೆಯ ಒಟ್ಟು 8 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, 3312 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಶಿವಮೊಗ್ಗದಲ್ಲಿ ಎರಡು ಹಾಗೂ ಭದ್ರಾವತಿ, ತೀರ್ಥಹಳ್ಳಿ, ಹೊಸನಗರ, ಸಾಗರ, ಶಿಕಾರಿಪುರ ಮತ್ತು ಸೊರಬದಲ್ಲಿ ತಲಾ ಒಂದು ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ. ಪ್ರಶ್ನೆ ಪತ್ರಿಕೆಗಳನ್ನು ವಿತರಿಸಲು ಒಟ್ಟು 6 ಮಾರ್ಗಗಳನ್ನು ಗುರುತಿಸಲಾಗಿದೆ. 

ತೀರ್ಥಹಳ್ಳಿ ಜೋಡಿ ಕೊಲೆ! ಎಸ್​ಪಿ ಮಿಥುನ್​ ಕುಮಾರ್ ಸ್ಥಳಕ್ಕೆ ಭೇಟಿ ! ಅಸಲಿಗೆ ನಡೆದಿದ್ದೇನು? ಆರೋಪಿ ಯಾರು!?

ಸೂಕ್ತ ಭದ್ರತೆಯೊಂದಿಗೆ ಪಶ್ನೆ ಪತ್ರಿಕೆ ಸಾಗಾಟ

ಪ್ರಶ್ನೆ ಪತ್ರಿಕೆಗಳನ್ನು ಸಾಗಾಟ ಮಾಡಲು ತ್ರಿಸದಸ್ಯ ಸಮಿತಿಯನ್ನು ರಚಿಸಲಾಗಿದ್ದು, ಪ್ರಶ್ನೆ ಪತ್ರಿಕೆ ಸಾಗಾಟ ವಾಹನಕ್ಕೆ ಸೂಕ್ತ ಪೊಲೀಸ್ ಭದ್ರತೆಯನ್ನು ಒದಗಿಸಬೇಕು. ಈ ವಾಹನಕ್ಕೆ ಜಿಪಿಎಸ್ ಅಳವಡಿಸಿ ನಿಗಾ ವಹಿಸಲು ವ್ಯವಸ್ಥೆ ಮಾಡಬೇಕು. ಇದೇ ರೀತಿ ಪರೀಕ್ಷಾ ಕೇಂದ್ರಕ್ಕೆ ಸೂಕ್ತ ಬಂದೋಬಸ್ತು ಒದಗಿಸಲು ಕ್ರಮ ಕೈಗೊಳ್ಳಬೇಕು. ಮುಖ್ಯ ಅಧೀಕ್ಷಕರು ಹಾಗೂ ಉತ್ತರ ಪತ್ರಿಕೆ ಪಾಲಕರನ್ನು ಈಗಾಗಲೇ ನೇಮಿಸಲಾಗಿದ್ದು, ಪರೀಕ್ಷಾ ಕೇಂದ್ರದ ಸುತ್ತಮುತ್ತ 200ಮೀಟರ್ ವ್ಯಾಪ್ತಿಯಲ್ಲಿ 144ಸೆಕ್ಷನ್ ಜಾರಿಗೊಳಿಸಿ ಆದೇಶಿಸಲಾಗಿದೆ ಎಂದು ಅವರು ಹೇಳಿದರು.

ಕಾಳಿಂಗಕ್ಕೆ ಮುತ್ತುಕೊಟ್ಟ ಯುವಕ! ವೈರಲ್ ಆಗ್ತಿದೆ ವಿಡಿಯೋ

ಸಮಸ್ಯೆ ಆಗುವಂತಿಲ್ಲ

ಪರೀಕ್ಷಾ ಸಮಯದಲ್ಲಿ ಯಾವುದೇ ವಿದ್ಯುತ್ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಬೇಕು. ಪರೀಕ್ಷಾ ಕೇಂದ್ರಗಳನ್ನು ಸರಿಯಾಗಿ ಸ್ಯಾನಿಟೈಸ್ ಮಾಡಲು ಮಹಾನಗರ ಪಾಲಿಕೆ ಹಾಗೂ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು. ಖಜಾನೆಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಠೇವಣಿ ಇರಿಸುವ ಹಾಗೂ ವಿತರಿಸುವ ಪ್ರಕ್ರಿಯೆ ನಡೆಯುವ ಸ್ಥಳದಲ್ಲಿ 24ಗಂಟೆ ಕಾಲ ಸಿಸಿಟಿವಿ ವ್ಯವಸ್ಥೆಯನ್ನು ಖಾತ್ರಿಪಡಿಸಬೇಕು ಎಂದು ಹೇಳಿದರು.

ಜೆಡಿಎಸ್​ ಕಾರ್ಯಕರ್ತರ ರೌಡಿಸಂ? ಮಾಜಿ ಶಾಸಕರ ಆರೋಪಕ್ಕೆ ಹಾಲಿ ಶಾಸಕಿ ನೀಡಿದ್ರು ಉತ್ತರ!

ಯಾವಾಗ ಯಾವ ಪರೀಕ್ಷೆ?

ಸಿಇಟಿ ಪರೀಕ್ಷೆ:2023ನೇ ಸಾಲಿನ ಇಂಜಿನಿಯರಿಂಗ್, ಕೃಷಿ ವಿಜ್ಞಾನ ಮುಂತಾದ ವೃತ್ತಿಪರ ಕೋಸ್ರ್ಗಳ ಪ್ರವೇಶಾತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ಮೇ 20 ಮತ್ತು 21ರಂದು ನಡೆಯಲಿದೆ. ಪರೀಕ್ಷೆ ಬೆಳಿಗ್ಗೆ 10.30ರಿಂದ 11.50ರವರೆಗೆ ಹಾಗೂ ಮಧ್ಯಾಹ್ನ 2.30ರಿಂದ 3.50ರವರೆಗೆ ನಡೆಯಲಿದೆ. ಶಿವಮೊಗ್ಗ, ಭದ್ರಾವತಿ ಮತ್ತು ಸಾಗರ ತಾಲೂಕಿನಲ್ಲಿ ಒಟ್ಟು 19 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಪರೀಕ್ಷೆಯಲ್ಲಿ ಯಾವುದೇ ಅಕ್ರಮಕ್ಕೆ ಅವಕಾಶವಾಗದಂತೆ ಸುಸೂತ್ರವಾಗಿ ನಡೆಸಲು ಎಲ್ಲರೂ ಸಹಕರಿಸಬೇಕು ಎಂದು ಅವರು ಹೇಳಿದರು.

ತನ್ನಿಬ್ಬರು ಮಕ್ಕಳ ಜೊತೆಯಲ್ಲಿ ಮಹಿಳೆ ಕಣ್ಮರೆ! ಇವರ ಸುಳಿವು ಸಿಕ್ಕಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ! ವಿವರ ಇಲ್ಲಿದೆ 

 ಅಪರ ಜಿಲ್ಲಾಧಿಕಾರಿ ಎಸ್.ಎಸ್.ಬಿರಾದಾರ್, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಅನಿಲ್‍ಕುಮಾರ್ ಭೂಮರಡ್ಡಿ ಸೇರಿದಂತೆ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor