ಹರತಾಳು ಹಾಲಪ್ಪ ಅಥವಾ ಬೇಳೂರು ಗೋಪಾಲಕೃಷ್ಣ! ಅಭಿಮಾನಿಯ ಫೋನ್ ಯಾರು ರಿಸೀವ್ ಮಾಡುತ್ತಾರೆ! ಹೀಗೊಂದು ಬಿಯರ್ ಬೆಟ್ಟಿಂಗ್ ಕಥೆ

Malenadu Today

KARNATAKA NEWS/ ONLINE / Malenadu today/ May 19, 2023 SHIVAMOGGA NEWS

 ಸಾಗರ/ ಯಾರ ಅಭಿಮಾನಿ ಫೋನ್​ ಕಾಲ್ ಯಾವ ನಾಯಕ ರಿಸೀವ್ ಮಾಡುತ್ತಾರೆ ಎಂಬ ವಿಚಾರಕ್ಕೆ ಸಾಗರ ತಾಲ್ಲೂಕಿನ ಬಾರ್​ವೊಂದರಲ್ಲಿ ಬೆಟ್ಟಿಂಗ್​ ನಡೆದಿದ್ದು, ಸದ್ಯ ಈ ಬಗ್ಗೆ ಸಾಗರದಲ್ಲಿ ಲೋಕಾರೂಡಿ ಚರ್ಚೆ ನಡೆಯುತ್ತಿದೆ. 

Public Nuisance / ತುಂಗಾ ನಗರ ಪೊಲೀಸರಿಂದ ಮುಂದುವರಿದ ಸ್ಪೆಷಲ್ ಕಾರ್ಯಾಚರಣೆ! 11 ಜನರು ಸ್ಟೇಷನ್​ಗೆ 8 ಮಂದಿ ವಿರುದ್ಧ ಕೇಸ್

ಹರತಾಳು ಹಾಲಪ್ಪರವರು ತಮ್ಮ ಅಭಿಮಾನಿಯ ಫೋನ್ ರಿಸೀವ್ ಮಾಡುತ್ತಾರೋ? ಅಥವಾ ಹಾಲಿ ಶಾಸಕ ಬೇಳೂರು ಗೋಪಾಲಕೃಷ್ಣರವರು ತಮ್ಮ ಅಭಿಮಾನಿಯ ಫೋನ್ ರಿಸೀವ್ ಮಾಡುತ್ತಾರೋ ಎಂಬುದರ ಬಗ್ಗೆ ಇಬ್ಬರು ಅಭಿಮಾನಿಗಳು ಪರಸ್ಪರ ಬೆಟ್ಟಿಂಗ್ ಕಟ್ಟಿದ್ದಾರೆ. ಎರಡು ಬಾಟ್ಲಿ ಬಿಯರ್ ಬೆಟ್ಟಿಂಗ್ ಆಗಿತ್ತು.

ತೀರ್ಥಹಳ್ಳಿ ಪಟ್ಟಣದ ಸಮುದಾಯ ಭವನದಲ್ಲಿ ಇಬ್ಬರ ಬರ್ಬರ ಹತ್ಯೆ

ಈ ಬೆಟ್ಟಿಂಗ್​ ಮಾತುಕತೆ ನಡೆದಿದ್ದು ಬಾರ್​ವೊಂದರಲ್ಲಿ, ಇಬ್ಬರು ಅಭಿಮಾನಿಗಳು ಒಟ್ಟಿಗೆ ಬಂದು ಕುಳಿತು ಮೇಲಿನಂತೆ ಮಾತನಾಡಿಕೊಂಡಿದ್ಧಾರೆ. ಆನಂತರ ತಮ್ಮ ತಮ್ಮ ನಾಯಕರಿಗೆ ಫೋನ್ ಹಚ್ಚಿದ್ಧಾರೆ. ಈ ಪೈಕಿ ಬೇಳೂರು ಗೋಪಾಲಕೃಷ್ಣರವರು ಫೋನ್ ರಿಸೀವ್ ಮಾಡಿದ್ದರಿಂದ ಅವರ ಅಭಿಮಾನಿ ಗೆದ್ದಿದ್ದಾರೆ. ಸದ್ಯ ಈ ವಿಚಾರ, ಸಾಗರದಲ್ಲಿ ಹಿಂಗಂತೆ ಎಂಬ ರೀತಿಯಲ್ಲಿ ಚರ್ಚೆಯಾಗ್ತಿದೆ. ಅಲ್ಲದೆ  ಈ ಬಗ್ಗೆ ಸ್ಥಳೀಯ ಪತ್ರಿಕೆಯೊಂದು ಸಹ ವರದಿ ಮಾಡಿದೆ.ಆದಾಗ್ಯು ಇಂತಹದ್ದೊಂದು ಷರತ್ತಿನ ಪಂದ್ಯ ಕಟ್ಟಿದ್ದು ಯಾರು? ಎಲ್ಲಿ ನಡೆದಿದ್ದು ಎಂಬುದು ಸ್ಪಷ್ಟವಾಗಿಲ್ಲ. 

 

Share This Article