KARNATAKA NEWS/ ONLINE / Malenadu today/ May 18, 2023 SHIVAMOGGA NEWS PAPER ONLINE
ಶಿವಮೊಗ್ಗ/ ತೀರ್ಥಹಳ್ಳಿ ತಾಲ್ಲೂಕಿನ, ಕುರುವಳ್ಳಿ ಪುತ್ತಿಗೆ ಮಠದ ಬಳಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ವಿಶ್ವಕರ್ಮ ಸಮುದಾಯ ಭವನದಲ್ಲಿ ಇಬ್ಬರನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸ್ ಸ್ಟೇಷನ್ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸ್ತಿದ್ಧಾರೆ. ಮೂಲಗಳ ಪ್ರಕಾರ, ಕೊಲೆಯಾದವರು ದಾವಣಗೆರೆ ಜಿಲ್ಲೆ ಕಾರ್ಮಿಕರು ಎನ್ನಲಾಗಿದೆ.

ಶಿವಮೊಗ್ಗ ಕೇಂದ್ರ ಕಾರಾಗೃಹ ಸಿಬ್ಬಂದಿಗೆ ಕೈದಿಯಿಂದ ಧಮ್ಕಿ!
ನಿನ್ನೆ ರಾತ್ರಿ ನಡೆದ ಗಲಾಟೆ, ಕೊಲೆಯಲ್ಲಿ ಅಂತ್ಯವಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಕೆಲವೇ ದಿನದಲ್ಲಿ ಸಮುದಾಯ ಭವನ ಉದ್ಘಾಟನೆಯಾಗಬೇಕಿದ್ದು, ಅದರ ನಡುವೆ ಸಮುದಾಯದ ಭವನದಲ್ಲಿ ಈ ಘಟನೆ ನಡೆದಿದೆ.
ನಡೆದಿದ್ದು ಏನು?
ನಿನ್ನೆ ರಾತ್ರಿ ಕುಡಿದ ಮತ್ತಿನಲ್ಲಿ ಮೂವರು ಕಾರ್ಮಿಕರ ನಡುವೆ ಜಗಳ ನಡೆದಿದೆ. ಈ ವೇಳೆ ಓರ್ವನ ಮೇಲೆ ಹಲ್ಲೆಯಾಗಿದೆ. ಆತ ಮತ್ತೆ ಹೋಗಿ ಕುಡಿದು ಬಂದು ಪಿಕಾಸಿಯಿಂದ ಮಲಗಿದ್ದ ಇನ್ನಿಬ್ಬರ ಮೇಲೆ ಹಲ್ಲೆ ಮಾಡಿದ್ಧಾನೆ ಎನ್ನಲಾಗುತ್ತಿದೆ. ಸದ್ಯ ಘಟನೆ ಸಂಬಂಧ ಮಾಹಿತಿ ನೀಡಿರುವ ಎಸ್ಪಿ ಮಿಥುನ್ ಕುಮಾರ್, ವಿಶ್ವಕರ್ಮ ಸಮುದಾಯ ಭವನದಲ್ಲಿ ಕೆಲಸ ಮಾಡುತ್ತಿದ್ದ ಮಾಡುತ್ತಿದ್ದ ಕಾರ್ಮಿಕರು ಇವಾಗಿದ್ದು, ನಿನ್ನೆಯ ಗಲಾಟೆಯಲ್ಲಿ ಇಬ್ಬರ ಕೊಲೆಯಾಗಿದೆ. ಪ್ರಕರಣ ಸಂಬಂಧ ಓರ್ವನನ್ನ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
