ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (SIMS) ನಲ್ಲಿ ವೈದ್ಯರ ಹುದ್ದೆಗೆ ಅರ್ಜಿ ಆಹ್ವಾನ!

Shimoga Institute of Medical Sciences (SIMS) invites applications for the post of Doctor!

ಶಿವಮೊಗ್ಗ  ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (SIMS)  ನಲ್ಲಿ ವೈದ್ಯರ  ಹುದ್ದೆಗೆ ಅರ್ಜಿ ಆಹ್ವಾನ!

KARNATAKA NEWS/ ONLINE / Malenadu today/ May 19, 2023 SHIVAMOGGA NEWS

ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಗುತ್ತಿಗೆ ಆಧಾರದ ಮೇಲೆ ಸಂಚಿತ ವೇತನದಡಿಯಲ್ಲಿ ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳ 5 ಹುದ್ದೆಗಳಿಗೆ ಎಂಬಿಬಿಎಸ್ ಮಾಡಿರುವ ಅಭ್ಯರ್ಥಿಗಳಿಂದ ಆರ್ಜಿ ಆಹ್ವಾನಿಸಿದೆ! ಅರ್ಜಿ ನಮೂನೆ ಹಾಗೂ ಹೆಚ್ಚಿನ ವಿವರಗಳಿಗೆ ಸಂಸ್ಥೆಯ ವೆಬ್‍ಸೈಟ್ https://sims.karnataka.gov.in  ನ್ನು ಸಂಪರ್ಕಿಸಬಹುದು. 

ಅರ್ಜಿದಾರರು ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಮೇ 29 ರೊಳಗಾಗಿ ನಿರ್ದೇಶಕರು ಮತ್ತು ಡೀನ್ ಶಿವಮೊಗ್ಗ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಸಾಗರ ರಸ್ತೆ, ಶಿವಮೊಗ್ಗ ಈ ವಿಳಾಸಕ್ಕೆ ಸಲ್ಲಿಸುವಂತೆ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿ.ಸೂ.: ಈ ಹುದ್ದೆಯು ಸಂಪೂರ್ಣವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವುದು. ಯಾವುದೇ ಕಾರಣಕ್ಕೂ ಖಾಯಂ ನೇಮಕಾತಿಯೆಂದು ಪರಿಗಣಿಸುವುದಿಲ್ಲ ಹಾಗೂ ಸರ್ಕಾರಿ ನೌಕರರಿಗೆ ಅನ್ವಯವಾಗುವ ಪಿಂಚಣಿ/ಜಿ.ಪಿ.ಎಫ್/ಪಿ.ಎಫ್. ಇತರೆ ವಿಶೇಷ ರಜೆ ಸೌಲಭ್ಯಗಳು ಅನ್ವಯವಾಗುವುದಿಲ್ಲ. 

ಬೈಕ್​ಗೆ ಬೆಂಕಿ, ಮನೆಗೂ ತಟ್ಟಿದ ಅಗ್ನಿ ಜ್ವಾಲೆ ! ತೀರ್ಥಹಳ್ಳಿಯಲ್ಲಿ ಅಗ್ನಿ ಆಕಸ್ಮಿಕ!

ತೀರ್ಥಹಳ್ಳಿ/  ಇಲ್ಲಿನ ಗ್ರಾಮವೊಂದರಲ್ಲಿ ಬೈಕ್​ಗೆ ತಗುಲಿದ ಆಕಸ್ಮಿಕ ಬೆಂಕಿಯಿಂದಾಗಿ, ಮನೆಗೂ ಬೆಂಕಿ ತಗುಲಿದೆ ಘಟನೆ ಸಂಭವಿಸಿದೆ. ಹಾರೋಗೊಳಿಗೆಯ ಹರಳೀಮಠ ಗ್ರಾಮದ ವಾಸಂತಿ ರಾಮಪ್ಪ ಎಂಬವರ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಘಟನೆ ನಡೆದಿದೆ ಎನ್ನಲಾಗಿದ್ದು,ಘಟನೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಮನೆಯ ಬಳಿ ಪಾರ್ಕ್​ಮಾಡಿದ್ದ ಬೈಕ್​ಗೆ ಬೆಂಕಿಹೊತ್ತಿಕೊಂಡಿದ್ದು, ಅದರ ಜ್ವಾಲೆ ಮನೆಗೂ ತಗುಲಿದೆ. ಘಟನೆಯಲ್ಲಿ ಬೈಕ್​ ಹಾಗೂ ಮನೆಯ ಸಾಮಗ್ರಿಗಳು ಸುಟ್ಟು ಹೋಗಿವೆ. ಸ್ಥಳಿಯರು ಹಾಗೂ ಮನೆಯವರು ಸೇರಿಕೊಂಡು ಬೆಂಕಿ ನಂದಿಸಿದ್ದಾರೆ.  

ಹರತಾಳು ಹಾಲಪ್ಪ ಅಥವಾ ಬೇಳೂರು ಗೋಪಾಲಕೃಷ್ಣ! ಅಭಿಮಾನಿಯ ಫೋನ್ ಯಾರು ರಿಸೀವ್ ಮಾಡುತ್ತಾರೆ! ಹೀಗೊಂದು ಬಿಯರ್ ಬೆಟ್ಟಿಂಗ್ ಕಥೆ

 ಸಾಗರ/ ಯಾರ ಅಭಿಮಾನಿ ಫೋನ್​ ಕಾಲ್ ಯಾವ ನಾಯಕ ರಿಸೀವ್ ಮಾಡುತ್ತಾರೆ ಎಂಬ ವಿಚಾರಕ್ಕೆ ಸಾಗರ ತಾಲ್ಲೂಕಿನ ಬಾರ್​ವೊಂದರಲ್ಲಿ ಬೆಟ್ಟಿಂಗ್​ ನಡೆದಿದ್ದು, ಸದ್ಯ ಈ ಬಗ್ಗೆ ಸಾಗರದಲ್ಲಿ ಲೋಕಾರೂಡಿ ಚರ್ಚೆ ನಡೆಯುತ್ತಿದೆ. 

Public Nuisance / ತುಂಗಾ ನಗರ ಪೊಲೀಸರಿಂದ ಮುಂದುವರಿದ ಸ್ಪೆಷಲ್ ಕಾರ್ಯಾಚರಣೆ! 11 ಜನರು ಸ್ಟೇಷನ್​ಗೆ 8 ಮಂದಿ ವಿರುದ್ಧ ಕೇಸ್

ಹರತಾಳು ಹಾಲಪ್ಪರವರು ತಮ್ಮ ಅಭಿಮಾನಿಯ ಫೋನ್ ರಿಸೀವ್ ಮಾಡುತ್ತಾರೋ? ಅಥವಾ ಹಾಲಿ ಶಾಸಕ ಬೇಳೂರು ಗೋಪಾಲಕೃಷ್ಣರವರು ತಮ್ಮ ಅಭಿಮಾನಿಯ ಫೋನ್ ರಿಸೀವ್ ಮಾಡುತ್ತಾರೋ ಎಂಬುದರ ಬಗ್ಗೆ ಇಬ್ಬರು ಅಭಿಮಾನಿಗಳು ಪರಸ್ಪರ ಬೆಟ್ಟಿಂಗ್ ಕಟ್ಟಿದ್ದಾರೆ. ಎರಡು ಬಾಟ್ಲಿ ಬಿಯರ್ ಬೆಟ್ಟಿಂಗ್ ಆಗಿತ್ತು.

ತೀರ್ಥಹಳ್ಳಿ ಪಟ್ಟಣದ ಸಮುದಾಯ ಭವನದಲ್ಲಿ ಇಬ್ಬರ ಬರ್ಬರ ಹತ್ಯೆ

ಈ ಬೆಟ್ಟಿಂಗ್​ ಮಾತುಕತೆ ನಡೆದಿದ್ದು ಬಾರ್​ವೊಂದರಲ್ಲಿ, ಇಬ್ಬರು ಅಭಿಮಾನಿಗಳು ಒಟ್ಟಿಗೆ ಬಂದು ಕುಳಿತು ಮೇಲಿನಂತೆ ಮಾತನಾಡಿಕೊಂಡಿದ್ಧಾರೆ. ಆನಂತರ ತಮ್ಮ ತಮ್ಮ ನಾಯಕರಿಗೆ ಫೋನ್ ಹಚ್ಚಿದ್ಧಾರೆ. ಈ ಪೈಕಿ ಬೇಳೂರು ಗೋಪಾಲಕೃಷ್ಣರವರು ಫೋನ್ ರಿಸೀವ್ ಮಾಡಿದ್ದರಿಂದ ಅವರ ಅಭಿಮಾನಿ ಗೆದ್ದಿದ್ದಾರೆ. ಸದ್ಯ ಈ ವಿಚಾರ, ಸಾಗರದಲ್ಲಿ ಹಿಂಗಂತೆ ಎಂಬ ರೀತಿಯಲ್ಲಿ ಚರ್ಚೆಯಾಗ್ತಿದೆ. ಅಲ್ಲದೆ  ಈ ಬಗ್ಗೆ ಸ್ಥಳೀಯ ಪತ್ರಿಕೆಯೊಂದು ಸಹ ವರದಿ ಮಾಡಿದೆ.ಆದಾಗ್ಯು ಇಂತಹದ್ದೊಂದು ಷರತ್ತಿನ ಪಂದ್ಯ ಕಟ್ಟಿದ್ದು ಯಾರು? ಎಲ್ಲಿ ನಡೆದಿದ್ದು ಎಂಬುದು ಸ್ಪಷ್ಟವಾಗಿಲ್ಲ.