ಮಾರ್ಚ್​ 1 ರಿಂದ ಸರ್ಕಾರಿ ಕೆಲಸಗಳು ಆಗಲ್ಲ! ರಾಜ್ಯ ಸರ್ಕಾರಿ ನೌಕರರು ಕೆಲಸಕ್ಕೆ ಬರಲ್ಲ! ಸಿಎಸ್​ ಷಡಾಕ್ಷರಿ ಹೇಳಿದ್ದೇನು!?

Government work will not be done from March 1! State government employees will not come to work! What did CS Shadakshari say?

ಮಾರ್ಚ್​ 1 ರಿಂದ ಸರ್ಕಾರಿ ಕೆಲಸಗಳು ಆಗಲ್ಲ!  ರಾಜ್ಯ ಸರ್ಕಾರಿ ನೌಕರರು ಕೆಲಸಕ್ಕೆ ಬರಲ್ಲ!  ಸಿಎಸ್​ ಷಡಾಕ್ಷರಿ ಹೇಳಿದ್ದೇನು!?
ಮಾರ್ಚ್​ 1 ರಿಂದ ಸರ್ಕಾರಿ ಕೆಲಸಗಳು ಆಗಲ್ಲ! ರಾಜ್ಯ ಸರ್ಕಾರಿ ನೌಕರರು ಕೆಲಸಕ್ಕೆ ಬರಲ್ಲ! ಸಿಎಸ್​ ಷಡಾಕ್ಷರಿ ಹೇಳಿದ್ದೇನು!?

 MALENADUTODAY.COM | SHIVAMOGGA  | #KANNADANEWSWEB

ಏಳನೇ ವೇತನ ಆಯೋಗದ ಜಾರಿಗೆ ರಾಜ್ಯ ಸರ್ಕಾರಿ ನೌಕರರ ಸಂಘ ಪ್ರತಿಭಟನೆಯ ಹಾದಿ ಹಿಡಿದಿದ್ದು, ಈ ಸಂಬಂಧ ಇದೇ  ಮಾರ್ಚ್​​ 1 ರಿಂದ ರಾಜ್ಯ ಸರ್ಕಾರದ ವಿರುದ್ಧ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಿದೆ. ಈ ಕುರಿತಾಗಿ ಶಿವಮೊಗ್ಗದಲ್ಲಿ ಮಾತನಾಡಿದ  ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ , ಮಾರ್ಚ್​ ಒಂದರಿಂದ  ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಮುಷ್ಕರ ನಡೆಸಲಾಗುವುದು ಎಂದು ತಿಳಿಸಿದ್ಧಾರೆ. 

READ :  ಪ್ರಯಾಣಿಕರಲ್ಲಿ ವಿನಂತಿ! ಫೆಬ್ರವರಿ 26 ಮತ್ತು 27 ಕೆಎಸ್​ಆರ್​ಟಿಸಿ ಬಸ್ ಸಂಚಾರಲ್ಲಿ ವ್ಯತ್ಯಯ! ಕಾರಣ ಇಲ್ಲಿದೆ

ಅನೇಕ ಸಂಕಷ್ಟದ ಸಂದರ್ಭಗಳಲ್ಲಿ ನಾವೆಲ್ಲರೂ ಸರ್ಕಾರದ ಪರವಾಗಿ ಕೆಲಸ ಮಾಡಿದ್ದೇವೆ. ಆದರೆ, ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ. 7 ನೇ ವೇತನ ಆಯೋಗ ಜಾರಿಗೊಳಿಸಿಲ್ಲ.  ಶೇ. 40 ರಷ್ಟು ವೇತನ ಹೆಚ್ಚಳಕ್ಕೆ ಆಗ್ರಹಿಸುತ್ತಿದ್ದೆವೆ. ನಾವು ಸರ್ಕಾರದ ವಿರುದ್ಧ ಪ್ರತಿಭಟನೆಯಾಗಲೀ, ಮುಷ್ಕರವಾಗಲಿ, ಅಥವಾ ಘೋಷಣೆ ಕೂಗುವುದಿಲ್ಲ ಕರ್ತವ್ಯದಿಂದ ದೂರವುಳಿದು, ನಮ್ಮ, ನಮ್ಮ ಮನೆಯಲ್ಲಿರುತ್ತೇವೆ. ನಮ್ಮ ಬೇಡಿಕೆಯನ್ನ  ಸರ್ಕಾರಿ ಆದೇಶ ಹೊರಡಿಸಿದರೆ ಮಾತ್ರ ಮುಷ್ಕರ ಹಿಂಪಡೆಯಲಿದ್ದೇವೆ ಎಂದಿದ್ಧಾರೆ. 

READ : ಆತಂಕ ಮೂಡಿಸಿದ ಕೆಂಜಿಗಾಪುರ ಭಟ್ಟರ ಮನೆಯ ರಾಬರಿ ಕೇಸ್!ಒಬ್ಬರೇ ಟಾರ್ಗೆಟ್! ಒಂದೇ ವಾರದಲ್ಲಿ 2 ಸಲ ರಾಬರಿ ₹5 ಲಕ್ಷಕ್ಕೂ ಹೆಚ್ಚು ರಾಬರಿ! ಸಾಗರ ಪೊಲೀಸರಿಗೆ ಸವಾಲಾಯ್ತಾ ಕೇಸ್​

ಮಾರ್ಚ್ 1 ರಿಂದ ಆಸ್ಪತ್ರೆಯಲ್ಲಿ ತುರ್ತು ವಿಭಾಗ ಹೊರತು ಪಡಿಸಿ ಉಳಿದೆಲ್ಲಾ ರೀತಿ ಸೇವೆ ಸ್ಥಗಿತವಾಗಲಿದೆ, ಪಾಲಿಕೆ  ಹಾಗೂ ಬಿಬಿಎಂಪಿ, ಕೆಪಿಟಿಸಿಎಲ್, ಕಂದಾಯ ಇಲಾಖೆ, ಶಿಕ್ಷಕರು ಹೀಗೆ ಪ್ರತಿಯೊಬ್ಬರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ ಅವರು, ಒಂದು ವಾರದ ವರೆಗೆ ಧರಣಿ ನಡೆಸಲಾಗುತ್ತದೆ. ಆನಂತರ ಸರ್ಕಾರದ ನಿಲುವು ನೋಡಿ ಹೋರಾಟದ ಮುಂದಿನ ಹಾದಿ ನಿರ್ಧರಿಸಲಾಗುವುದು ಎಂದಿದ್ಧಾರೆ. ಹಾಗೊಂದು ವೇಳೆ  ಎಸ್ಮಾ‌ ಜಾರಿಗೊಳಿಸುವುದಾದರೆ, ಅದು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದ ಷಡಾಕ್ಷರಿ  ಚುನಾವಣೆ ನೀತಿ ಸಂಹಿತೆ ಜಾರಿಯಾದರೇ ಎಂಬ ಪ್ರಶ್ನೆಗೆ ಆ ಸಂದರ್ಭದಲ್ಲಿ ನೋಡೋಣ ಎಂದಿದ್ದಾರೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #