UPSC ಪರೀಕ್ಷೆ ಬರೆಯುವವರಿಗೆ ಉಚಿತ ತರಬೇತಿ! ಪೂರ್ತಿ ವಿವರ ಇಲ್ಲಿದೆ

Free training for UPSC exam takers! Here's the full details

UPSC  ಪರೀಕ್ಷೆ ಬರೆಯುವವರಿಗೆ ಉಚಿತ ತರಬೇತಿ! ಪೂರ್ತಿ ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Jun 16, 2023 SHIVAMOGGA NEWS

ಶಿವಮೊಗ್ಗ ನಿವಾಸಿಗಳಿಗೆ ಯುಪಿಎಸ್​ಸಿ(UPSC) ಪರೀಕ್ಷೆ ಬರೆಯಲು ಬೆಂಗಳೂರಿನಲ್ಲಿ ತರಬೇತಿ ನಿಡಲಾಗುತ್ತಿದೆ. ಅದು ಕೂಡ ಉಚಿತವಾಗಿ. ವಾಸವಿ ಅಕಾಡೆಮಿ ವತಿಯಿಂದ 5ನೇ ವರ್ಷದ ಯುಪಿ ಎಸ್‌ಸಿ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ತರಬೇತಿಯು ಸಂಪೂರ್ಣ ಉಚಿತವಾಗಿರುತ್ತದೆ ಎಂದು ಆರ್ಯವೈಶ್ಯ ಮಹಾಸಭಾ ನಿರ್ದೇಶಕ ಎಂ.ಜೆ. ಮಂಜುನಾಥ್  ತಿಳಿಸಿದ್ದಾರೆ. 

 

2024 ರಲ್ಲಿ ಲೋಕಸೇವಾ ಆಯೋಗದ ಪರೀಕ್ಷೆಗಳನ್ನು ಬರೆಯಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ವಾಸವಿ ಅಕಾಡೆಮಿ ಉಚಿತ ತರಬೇತಿ ನೀಡುತ್ತದೆ. ತರಬೇತಿ ಅಲ್ಲದೆ ಊಟ, ವಸತಿ ಸೌಲಭ್ಯ ಕೂಡ ಉಚಿತವಾಗಿರುತ್ತದೆ. 

 

ಈ ತರಬೇತಿಯು ಬೆಂಗಳೂರಿನಲ್ಲಿ ನಡೆಯಲಿದೆ . ಮತ್ತು ತರಬೇತಿಗೆ ಸೇರಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಜು.2ರಂದು ಬೆಂಗಳೂರಿನಲ್ಲಿ ಪ್ರವೇಶ ಪರೀಕ್ಷೆ ಇರಲಿದೆ. ಪರೀಕ್ಷೆಯಲ್ಲಿ ಪಾಸಾದ ಸುಮಾರು 30ರಿಂದ 40 ವಿದ್ಯಾರ್ಥಿ ಗಳಿಗೆ ಉಚಿತ ತರಬೇತಿ ಕಲ್ಪಿಸಲಾಗು ವುದು ಎಂದರು.

 

ನಿರ್ದೇಶಕ ಎಸ್‌.ಕೆ.ಶೇಷಾಚಲ ಮಾತನಾಡಿ, ಆರವೈಶ್ಯ ಸಮಾಜದ ವಿದ್ಯಾರ್ಥಿಗಳಲ್ಲದೆ ಯಾವುದೇ ಸಮಾಜದ ವಿದ್ಯಾರ್ಥಿಗಳು ತರಬೇತಿ ಪಡೆಯಬಹುದು. ನಮ್ಮ ಸಂಸ್ಥೆ ನಡೆಸುತ್ತಿರುವ 5ನೇ ಬ್ಯಾಚ್ ಇದು. ಐಎಎಸ್‌ ಬಿಟ್ಟು ಇತರೆ ಪರೀಕ್ಷೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನುರಿತ ತರಬೇತುದಾರರಿಂದ ಅತ್ಯುತ್ತಮ ಮಾರ್ಗದರ್ಶನ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಜೂ.25 ಕೊನೆಯ ದಿನವಾಗಿದೆ. 




ಶಿವಮೊಗ್ಗದಿಂದ ವಿಮಾನಯಾನ ಆರಂಭದ ದಿನಾಂಕ ಬದಲು! ಸಂಸದರು ಹೇಳಿದ್ದೇನು? ಸಿಗಂದೂರು ಸೇತುವೆ ವಿಚಾರಕ್ಕೂ ನೀಡಿದ್ರು ಬಿ.ವೈ.ರಾಘವೇಂದ್ರ ಸ್ಪಷ್ಟನೆ!

ಶಿವಮೊಗ್ಗ ಮಲೆನಾಡಿನಲ್ಲಿ 6 ವರ್ಷಗಳ ಕಾಲ ಕೆಲಸ ನಿರ್ವಹಿಸಿ ಸಂತೃಪ್ತನಾಗಿದ್ದು, ಈನಾಡಿನ ಬಗ್ಗೆ ನನಗೆ ಇನ್ನೂ ಕುತೂಹಲ ಉಳಿದುಕೊಂಡಿದೆ. ಹೋರಾಟದ ಭೂಮಿ ಎಂಬ ಹೆಗ್ಗಳಿಕೆಗೆ ತಕ್ಕಂತೆ ಇಲ್ಲಿನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರ ಪ್ರತಿಸ್ಪಂದಿಸುತ್ತದೆ ಎಂದು ವಾರ್ತಾ ಇಲಾಖೆ  ಉಪನಿರ್ದೇಶಕ ಶಫಿ ಸಾದುದ್ಧೀನ್ ಹೇಳಿದರು.ಶಿವಮೊಗ್ಗದಿಂದ ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಅವರೊಂದಿಗೆ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಆಯೋಜಿಸಿದ್ದ ಚಹಾ ಕೂಟದಲ್ಲಿ ಅವರು ಮಾತನಾಡಿದರು.  

ವಾರ್ತಾ ಇಲಾಖೆ ಇತಿಮಿತಿಯಲ್ಲಿ  ಶಿವಮೊಗ್ಗದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಆಡಳಿತ ವರ್ಗದ ಗಮನ ಸೆಳೆಯುವ ಕೆಲಸವಾಗಿದೆ. ಇಲ್ಲಿನ ಪತ್ರಕರ್ತರ ಸಂಘಟನೆ ಪ್ರಬಲವಾಗಿದ್ದು, ಜನಪರವಾಗಿ ಕೆಲಸ ಮಾಡುತ್ತಿರುವುದು ಸಂತೋಷದ ಸಂಗತಿ. ಮಲೆನಾಡಿನ ಸಮಸ್ಯೆಗಳ ಬಗ್ಗೆ ಇಲ್ಲಿನ ಪತ್ರಕರ್ತರು ಪ್ರತಿಸ್ಪಂದಿಸುವ ರೀತಿ ನಿಜಕ್ಕೂ ಅಚ್ಚರಿಯಾಗಿದೆ. ಈ ಮಣ್ಣಿನ ಗುಣವೇ ಒಂದು ರೀತಿಯ ಸಾಮಾಜಿಕ ಕಳಕಳಿಯನ್ನು ಬಿಂಬಿಸುತ್ತದೆ ಎಂದರು.ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ ಯಡಗೆರೆ ಮಾತನಾಡಿ, ಶಫಿ ಅವರ ಸಾತ್ವಿಕ ನಡೆ ಅವರನ್ನು ದೊಡ್ಡ ವ್ಯಕ್ತಿತ್ವದ ಮನುಷ್ಯರನ್ನಾಗಿಸಿದೆ ಎಂದೂ ಗಟ್ಟಿಯಾಗಿ ಮಾತನಾಡದ ಅವರು, ಪತ್ರಕರ್ತರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು ಎಂದರು.ಹಿರಿಯ ಪತ್ರಕರ್ತ ಎಸ್.ಚಂದ್ರಕಾಂತ್ ಮಾತನಾಡಿ, ಶಿವಮೊಗ್ಗದಲ್ಲಿ ಕಾರ್ಯ ನಿರ್ವಹಿಸಿದ ವಾರ್ತಾಧಿಕಾರಿಗಳಲ್ಲಿ ಶಫಿ ಅವರು ಮೇರುಪಂಕ್ತಿಯಲ್ಲಿ ಕಾಣುತ್ತಾರೆ. ಅವರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.ಪತ್ರಕರ್ತರಾದ ನಾಗರಾಜ್ ನೇರಿಗೆ, ಹೊನ್ನಾಳಿ ಚಂದ್ರಶೇಖರ್, ಜೇಸುದಾಸ್.ಪಿ, ಶಿವಮೊಗ್ಗ ನಂದನ್, ಗಿರೀಶ್ ಉಮ್ರಾಯ್ ಮಾತನಾಡಿದರು. ಪತ್ರಕರ್ತರಾದ ಆರಗ ರವಿ, ಜಿ.ಟಿ.ಸತೀಶ್, ಆತಿಶ್, ಗೊ.ವ.ಮೋಹನ್, ವಿ.ಸಿ.ಪ್ರಸನ್ನ, ನಿತಿನ್ ಕೈದೊಟ್ಲು, ರಾಕೇಶ್ ಡಿಸೋಜಾ, ಗಣೇಶ, ಭರತ್, ಶರತ್ ಭದ್ರಾವತಿ, ಲಿಯಾಖತ್, ಶರತ್ ಕೋಟೆ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

 


ಶಿವಮೊಗ್ಗದಿಂದ ವಿಮಾನಯಾನ ಆರಂಭದ ದಿನಾಂಕ ಬದಲು! ಸಂಸದರು ಹೇಳಿದ್ದೇನು? ಸಿಗಂದೂರು ಸೇತುವೆ ವಿಚಾರಕ್ಕೂ ನೀಡಿದ್ರು ಬಿ.ವೈ.ರಾಘವೇಂದ್ರ ಸ್ಪಷ್ಟನೆ!

ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣವಾಗಿರುವ ಶಿವಮೊಗ್ಗ ವಿಮಾನ ನಿಲ್ದಾಣ (Shivamogga airport) ನಲ್ಲಿ ವಿಮಾನಗಳ ಹಾರಾಟ ಮೊದಲು ಆಗಸ್ಟ್ 11 ರಿಂದ ಆರಂಭವಾಗಲಿದೆ ಎನ್ನಲಾಗಿತ್ತು. ಇದೀಗ ಆಗಸ್ಟ್ 8 ರಿಂದಲೇ ವಿಮಾನಯಾನ ಆರಂಭವಾಗಲಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ. ವರ್ತಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಸಂಸದರು,  ಇನ್ನೆರಡು ತಿಂಗಳಲ್ಲಿ ಮಲೆನಾಡಿನಿಂದ ವಿಮಾನಯಾನ ಆರಂಭವಾಗಲಿದೆ.  ಇಂಡಿಗೋ ಸಂಸ್ಥೆಯೊಂದಿಗೆ ಒಡಂಬಡಿಕೆ ಪೂರ್ಣಗೊಂಡಿದೆ ಎಂದಿದ್ದಾರೆ. 

ಆಗಸ್ಟ್ 8 ರಿಂದಲೇ ಆರಂಭ ವಿಮಾನಯಾನ

ಶಿವಮೊಗ್ಗದಿಂದ ನಾಗರಿಕ ವಿಮಾನ ಯಾನವು ಆಗಸ್ಟ್ 8 ರಿಂದ ಆರಂಭವಾಗಲಿದೆ. ಅಲ್ಲಿಂದ ಜಿಲ್ಲೆ ಅಲ್ಲದೆ ಮಧ್ಯ ಕರ್ನಾಟಕದ ಅಭಿವೃದ್ಧಿಗೆ ಹೊಸ ಆಯಾಮ ದೊರೆಯಲಿದೆ.  ಕೈಗಾರಿಕೆ, ವಾಣಿಜ್ಯೋದ್ಯಮ, ಪ್ರವಾಸೋದ್ಯಮ, ಶೈಕ್ಷಣಿಕ ಕ್ಷೇತ್ರಗಳ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದರು.

ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರಿಗೆ ನೂತನ ರೈಲು ಸಂಪರ್ಕ 

ರೈಲ್ವೆ ಕ್ಷೇತ್ರದಲ್ಲೂ ಕೂಡ ಮಹತ್ತರ ಬದಲಾವಣೆ ಯಾಗಲಿದೆ ಎಂದ ಸಂಸದ ಬಿ.ವೈ ರಾಘವೇಂದ್ರರವರು,. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರಿಗೆ ನೂತನ ರೈಲು ಸಂಪರ್ಕ ಕಲ್ಪಿಸಲಾಗುತ್ತಿದೆ. ಈ ಮಾರ್ಗವು 10 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇದು ಸಹ ಜಿಲ್ಲೆಯ ಸರ್ವಾ೦ಗೀಣ ಅಭಿವೃದ್ಧಿಗೆ ಸಹಕಾರಿಯಾಗುವುದರಲ್ಲಿ ಅನುಮಾನವಿಲ್ಲಎಂದರು.

ಸಿಗಂದೂರು ಸೇತುವೆ ವಿಚಾರದಲ್ಲಿ ಸ್ಪಷ್ಟನೆ!

ಲಿಂಗನಮಕ್ಕಿ ಜಲಾಶಯದ ನೀರನ್ನು ನಾವು ಕಡಿಮೆ ಮಾಡಿದ್ದೇವೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಆಪಾದಿಸಿದ್ದಾರೆ. ಅದ್ಯಾಕೆ ಆ ರೀತಿ ಆರೋಪ ಮಾಡಿದ್ದಾರೋ ಗೊತ್ತಿಲ್ಲ, ಸೇತುವೆ ನಿರ್ಮಾಣ ಮಾಡಲು, ಸಾಮಗ್ರಿಗಳನ್ನು ಸಾಗಿಸಲು ನೀರು ಬೇಕು. ನೀರು ನಾವು ಕಡಿಮೆ ಮಾಡಲು ಆಗುತ್ತಾ ಎಂದು ಪ್ರಶ್ನಿಸಿದ್ರು. 

ಆಗಸ್ಟ್​ 15 ಕ್ಕೆ ಶಿವಮೊಗ್ಗದ ಪ್ರಮುಖ ಮೇಲ್ಸೇತುವೆ ಉದ್ಘಾಟನೆ! ತುಂಗಾನದಿಯ ಹೊಸ ಬ್ರಿಡ್ಜ್​​ ಓಪನ್​! ಕಡದಕಟ್ಟೆ, ಸವಳಂಗ ರಸ್ತೆ, ಕಾಶಿಪುರ ಓವರ್​ ಬ್ರಿಡ್ಜ್​ ಬಗ್ಗೆ ಸಂಸದರು ಹೇಳಿದ್ದೇನು?

ಶಿವಮೊಗ್ಗದ ರೇಷನ್​ ಕಾರ್ಡ್​ದಾರರಿಗೆ ಮಹತ್ವದ ಮಾಹಿತಿ! ಪಡಿತರ ಪಡೆಯಲು 27 ಲಾಸ್ಟ್​ ಡೇಟ್​! ಇ ಕೆವೈಸಿ ಮಾಡಿಸಿದ್ರಾ?

 

ಶಿವಮೊಗ್ಗ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಲ್ಲಿ ಸರ್ವರ್ ನಿರ್ವಹಣಾ ಕಾರ್ಯವನ್ನು ಜೂ.28 ರಿಂದ ಕೈಗೊಳ್ಳಲಿದ್ದು, ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರು ಜೂನ್-2023ರ ಮಾಹೆಯ ಪಡಿತರವನ್ನು ದಿನಾಂಕ  27/06/2023 ರೊಳಗಾಗಿ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಿಂದ ಪಡೆದುಕೊಳ್ಳುವಂತೆ ಶಿವಮೊಗ್ಗ ತಾಲೂಕು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

 

ಶಿವಮೊಗ್ಗ ತಾಲೂಕು ಗ್ರಾಮಾಂತರ ವ್ಯಾಪ್ತಿಯ ಎಲ್ಲಾ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಜೂ. 27ರೊಳಗಾಗಿ ಪಡಿತರ ವಿತರಣಾ ಕಾರ್ಯವನ್ನು ಕಡ್ಡಾಯವಾಗಿ ಮುಕ್ತಾಯಗೊಳಿಸುವಂತೆ ಹಾಗೂ ಇ-ಕೆವೈಸಿ ಮಾಡಿಸದ ಪಡಿತರ ಚೀಟಿದಾರರು ಕಡ್ಡಾಯವಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ನೋಂದಾಯಿಸಿಕೊಳ್ಳಲು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.