Shivamogga police / ಆನ್​ಲೈನ್​ ಕ್ರಿಕೆಟ್​ ಬೆಟ್ಟಿಂಗ್​ ಅಡ್ಡೆ ಮೇಲೆ ಶಿವಮೊಗ್ಗ ಪೊಲೀಸರ ರೇಡ್ ! ಹೊಸಮನೆ ಸತೀಶ್​ ಸೇರಿ ಮೂವರ ಅರೆಸ್ಟ್​! 25 ಲಕ್ಷ ರೂಪಾಯಿ ಸೀಜ್​

Shivamogga police / Shimoga police raid online cricket betting racket Satish and three others arrested Rs 25 lakh seized

Shivamogga police /  ಆನ್​ಲೈನ್​ ಕ್ರಿಕೆಟ್​ ಬೆಟ್ಟಿಂಗ್​ ಅಡ್ಡೆ ಮೇಲೆ ಶಿವಮೊಗ್ಗ ಪೊಲೀಸರ ರೇಡ್ ! ಹೊಸಮನೆ ಸತೀಶ್​ ಸೇರಿ ಮೂವರ ಅರೆಸ್ಟ್​! 25 ಲಕ್ಷ ರೂಪಾಯಿ ಸೀಜ್​
Shivamogga police / ಆನ್​ಲೈನ್​ ಕ್ರಿಕೆಟ್​ ಬೆಟ್ಟಿಂಗ್​ ಅಡ್ಡೆ ಮೇಲೆ ಶಿವಮೊಗ್ಗ ಪೊಲೀಸರ ರೇಡ್ ! ಹೊಸಮನೆ ಸತೀಶ್​ ಸೇರಿ ಮೂವರ ಅರೆಸ್ಟ್​! 25 ಲಕ್ಷ ರೂಪಾಯಿ ಸೀಜ್​

MALENADUTODAY.COM/ SHIVAMOGGA / KARNATAKA WEB NEWS  

ಕರ್ನಾಟಕ ಚುನಾವಣೆ 2023

ಚುನಾವಣೆಯ ಚಟುವಟಿಕೆಗಳ ನಡುವೆ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್​ ಕೂಡ ಜೋರಾಗಿದೆ. ಈ ಸಂಬಂಧ ಶಿವಮೊಗ್ಗ ಪೊಲೀಸ್ ಆನ್‌ ಲೈನ್ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ದಂಧೆಗೆ ಕಡಿವಾಣ ಹಾಕಿದ್ದಾರೆ. 

ಬೆಟ್ಟಿಂಗ್​ ಟೀಂ ಮೇಲೆ ಪೊಲೀಸರ ರೇಡ್ 

ಶಿವಮೊಗ್ಗದಲ್ಲಿ ಕ್ರಿಕೆಟ್ ಬೆಟ್ಟಿಂಗ್​(ipl betting) ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಸಿಇಎನ್​ ಪೊಲೀಸ್​ ಸ್ಟೇಷನ್​ ಪಿಐ ಸಂತೋಷ್ ಪಾಟೀಲ್ ನೇತೃತ್ವದಲ್ಲಿ ಟೀಂವೊಂದನ್ನ ರಚಿಸಲಾಗಿತ್ತು. ಸದ್ಯ ಈ ಟೀಂ ಕಳೆದ  15-04-2023 ರಂದು ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಆಡುತಿದ್ದವರ ಮೇಲೆ ದಾಳಿ ನಡೆಸಿದೆ. 

Read / ಪತ್ನಿಗೆ ಸಾಲ, ಅಣ್ಣನಿಂದ ಲೋನ್/ ಸ್ವಂತ ಕಾರು ಹೊಂದಿಲ್ಲದ ಬಿ.ವೈ.ವಿಜಯೇಂದ್ರರ ಆಸ್ತಿ ಎಷ್ಟು ಗೊತ್ತಾ?

ದಾಳಿಯಲ್ಲಿ ಸಿಕ್ಕಿದ್ದೇನು? 

  • ಪೊಲೀಸ್​ ರೇಡ್​ನಲ್ಲಿ ಸತೀಶ ಹಾಗು ಇತರೆ 03 ಜನ ಆರೋಪಿಗಳನ್ನು ಬಂಧಿಸಲಾಗಿದೆ.  

  • ಒಟ್ಟು ರೂ. 7,20,000/- ನಗದು ಹಣ, 13 ಮೊಬೈಲ್ ಫೋನ್ ಗಳು ಮತ್ತು 1 ಮೊಪೆಡ್ ಬೈಕ್ ಅನ್ನು ವಶ ಪಡಿಸಿಕೊಳ್ಳಲಾಗಿದೆ. 

  • ಆರೋಪಿತರ ವಿರುದ್ಧ ಗುನ್ನೆ ಸಂಖ್ಯೆ 34/2023 ಕಲಂ 78(1) (ಎ)(6) ಕರ್ನಾಟಕ ಪೊಲೀಸ್ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿದೆ. 

Read / ಪತ್ನಿಗೆ ಸಾಲ, ಅಣ್ಣನಿಂದ ಲೋನ್/ ಸ್ವಂತ ಕಾರು ಹೊಂದಿಲ್ಲದ ಬಿ.ವೈ.ವಿಜಯೇಂದ್ರರ ಆಸ್ತಿ ಎಷ್ಟು ಗೊತ್ತಾ?

ಸ್ನೇಹಿತನಿಗೆ ದೋಖಾ ಮಾಡಿದ್ದ ಸತೀಶ್​

ಇನ್ನೂ ಈ ಪ್ರಕರಣದ ಆರೋಪಿ ಸತೀಶ್ ವಿರುದ್ಧ ಪೊಲೀಸರಿಗೆ ಕಳೆದ 16 ನೇ ತಾರೀಖು ಮತ್ತೊಂದು ದೂರು ದಾಖಲಾಗಿತ್ತು. ಕಾರ್ತಿಕ್​ ಎಂಬುವವರು ತನ್ನ ಸ್ನೇಹಿತನಾದ ಸತೀಶ್​ ಆನ್ ಲೈನ್ ವೆಬ್ ಸೈಟ್ / ಆಪ್‌ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಆಡಿಸುತಿದ್ದು, ಆತನಿಗೂ ಇದರಿಂದ ಹಣ ಮಾಡಿಕೊಡುವ ಐಡಿಯಾ ಕೊಟ್ಟಿದ್ದ ಎಂದು ದೂರಿದ್ದಾರೆ. ಅಲ್ಲದೆ, ಆತ ಹೇಳಿದ ಕಾರಣಕ್ಕೆ  3 ರಿಂದ 4 ವರ್ಷಗಳಿಂದ ಸತೀಶನಿಗೆ ಕಾರ್ತಿಕ್​ ನಿರಂತರವಾಗಿ ಹಣ ಕೊಡುತ್ತಾ ಬಂದಿದ್ದರಂತೆ. ಕೊನೆಗೆ  ಕೊಟ್ಟ ಹಣ ಕೇಳಿದ್ದಕ್ಕೆ , ಬೆಟ್ಟಿಂಗ್‌ನಲ್ಲಿ ನಿಮ್ಮ ಹಣ ಹೋಯಿತು ಅಂತ ಹೇಳಿ ಸುಮಾರು ರೂ. 3,00,000  ಹಣವನ್ನು ಹಿಂದಿರುಗಿಸದೇ ನಂಬಿಸಿ ಮೋಸ ಮಾಡಿದ್ದ ಎಂದು ಪೊಲೀಸರಿಗೆ ಕಾರ್ತಿಕ್ ದೂರು ನೀಡಿದ್ದ. 

Read / ಪತ್ನಿಗೆ ಸಾಲ, ಅಣ್ಣನಿಂದ ಲೋನ್/ ಸ್ವಂತ ಕಾರು ಹೊಂದಿಲ್ಲದ ಬಿ.ವೈ.ವಿಜಯೇಂದ್ರರ ಆಸ್ತಿ ಎಷ್ಟು ಗೊತ್ತಾ?

ಆರೋಪಿಯಿಂದ 18 ಲಕ್ಷ ಜಪ್ತಿ

ಈ ಸಂಬಂಧ  ಐಪಿಸಿ 78(1) (ಎ)(6) ಕರ್ನಾಟಕ ಪೊಲೀಸ್ ಕಾಯ್ದೆ ಮತ್ತು ಕಲಂ 420 ಐಪಿಸಿ ಕಾಯ್ದೆ  ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಪೊಲಿಸರು ಆರೋಪಿ ಸತೀಶ್​ ನಿಂದ ಒಟ್ಟು  18,26,336 ರೂ ಹಣವನ್ನು ಜಪ್ತಿ ಮಾಡಿ, 02 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದೆ. ಎರಡೂ ಪ್ರಕರಣಗಳಿಗೆ ಸಂಬಂಧಿಸಿದ ಒಟ್ಟು 25,46,336/- ರೂ. ಗಳನ್ನು ಜಪ್ತಿ ಮಾಡಿರುವ ಪೊಲೀಸರು 15 ಮೊಬೈಲ್ ಫೋನ್ ಗಳು ಮತ್ತು 1 ಬೈಕ್ ಅನ್ನು ವ ಪಡಿಸಿಕೊಂಡಿದ್ದಾರೆ.  

ಸಾರ್ವಜನಿಕರ ಗಮನಕ್ಕೆ

  • 1. ಆನ್ ಲೈನ್ ಕ್ರಿಕೆಟ್ ಬೆಟ್ಟಿಂಗ್/ಮಟ್ಕಾ ಜೂಜಾಟ ಮುಂತಾದವುಗಳು ಕಾನೂನು ಬಾಹಿರ ಚಟುವಟಿಕೆಗಳಾಗಿದ್ದು ಅವುಗಳಲ್ಲಿ ತೊಡಗಿದವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.

  • 2. ಆನ್ ಲೈನ್ ಕ್ರಿಕೆಟ್ ಬೆಟ್ಟಿಂಗ್ ಮಟ್ಯಾ/ಜೂಜಾಟ ಮುಂತಾದವುಗಳಿಂದ ಆರ್ಥಿಕ ನಷ್ಟ, ಮಾನ ಹಾನಿ, ಪಾಣ ಹಾನಿ ಉಂಟಾಗುತ್ತದೆ ಆದ್ದರಿಂದ ಇಂತಹ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಬಾರದು.

  • 3. ಯಾರಾದರೂ ನಿಮ್ಮ ಸುತಮುತ್ತಲು ಕಾನೂನು ಚಟುವಟಿಕೆಗಳಾದ ಆನ್ ಲೈನ್ ಕ್ರಿಕೇಟ್ ಬೆಟ್ಟಿಂಗ್/ಮಟ್ಕಾ/ಜೂಜಾಟ ಮುಂತಾದವುಗಳಲ್ಲಿ ತೊಡಗಿರುವ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ತಕ್ಷಣ 112 ತುರ್ತು ಸಹಾಯವಾಣಿ / ಹತ್ತಿರದ ಪೊಲೀಸ್ ಠಾಣೆ / ಪೊಲೀಸ್ ಕಂಟ್ರೋಲ್ ರೂಂ ನಂ 9480803300/ 08182- 261413 ಗೆ ಮಾಹಿತಿ ನೀಡುವುದು.

Read / ಪತ್ನಿಗೆ ಸಾಲ, ಅಣ್ಣನಿಂದ ಲೋನ್/ ಸ್ವಂತ ಕಾರು ಹೊಂದಿಲ್ಲದ ಬಿ.ವೈ.ವಿಜಯೇಂದ್ರರ ಆಸ್ತಿ ಎಷ್ಟು ಗೊತ್ತಾ?



Read / 2018 ಚುನಾವಣೆಗಿಂತಲೂ 2023 ರ ಎಲೆಕ್ಷನ್​ನಲ್ಲಿ ನಾಲ್ಕು ಪಟ್ಟು ಹೆಚ್ಚಳವಾಯ್ತು ಜಪ್ತು ಮಾಲು! ರೌಡಿ ಶೀಟರ್​ಗಳಿಗೆ ಎಸ್​ಪಿ ನೀಡಿದ್ರು ವಾರ್ನಿಂಗ್

ಇದನ್ನು ಸಹ ಓದಿ

Read /ಬಿಜೆಪಿ ಪಕ್ಷಾಂತರ/  ಬಹಿರಂಗ ಪತ್ರ ಬರೆದ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ 

Read /BREAKIN NEWS/  ಜೆಡಿಎಸ್​ನಿಂದ ಸ್ಪರ್ಧೆ ಮಾಡುತ್ತಾರಾ ಆಯನೂರು ಮಂಜುನಾಥ್​ ! ಮಾತುಕತೆ ನಡೆದಿದ್ಯಾ!? 

Read / ಕುಡಿಯುವ ನೀರು ಪೂರೈಕೆಗೂ ಡಿಸಿ ಪರ್ಮಿಶನ್​ ಬೇಕಾ!? ಸಹಕಾರಿ ಸಾಲನೂ ಸಿಗೋದಿಲ್ವಾ? ಸೀಜ್ ಆದ ದುಡ್ಡು ವಾಪ್ ಬರಲ್ವಾ?  SP -DC  ಕೊಟ್ಟ ಉತ್ತರವೇನು?

Read / 2018 ಚುನಾವಣೆಗಿಂತಲೂ 2023 ರ ಎಲೆಕ್ಷನ್​ನಲ್ಲಿ ನಾಲ್ಕು ಪಟ್ಟು ಹೆಚ್ಚಳವಾಯ್ತು ಜಪ್ತು ಮಾಲು! ರೌಡಿ ಶೀಟರ್​ಗಳಿಗೆ ಎಸ್​ಪಿ ನೀಡಿದ್ರು ವಾರ್ನಿಂಗ್

Read / BREAKING NEWS /  ಭಾರತೀಯ ಜನತಾ ಪಕ್ಷದ ಮೂರನೇ ಪಟ್ಟಿ ರಿಲೀಸ್​! ಶಿವಮೊಗ್ಗ ನಗರ ಕ್ಷೇತ್ರದ  ಕಥೆ ಇನ್ನಷ್ಟು ನಿಗೂಢ 

Read / ಶಿವಮೊಗ್ಗ ಬಿಜೆಪಿ ಟಿಕೆಟ್​! ಬರ್ತಿದೆ...ಬರ್ತಿದೆ..ಬರ್ತಿದೆ! ರೋಚಕ ಟ್ವಿಸ್ಟ್​ ಗೆ ಸಾಕ್ಷಿಯಾಗುತ್ತಾ ಕ್ಷೇತ್ರ! ಜೆಡಿಎಸ್​ ಟಿಕೆಟ್​ಗೆ​ ಇಬ್ಬಿಬ್ಬರ ಟವಲ್​! ಬರ್ತಾರಾ ಜೆಪಿ ನಡ್ಡಾ?

Read / ಪತ್ನಿಗೆ ಸಾಲ, ಅಣ್ಣನಿಂದ ಲೋನ್/ ಸ್ವಂತ ಕಾರು ಹೊಂದಿಲ್ಲದ ಬಿ.ವೈ.ವಿಜಯೇಂದ್ರರ ಆಸ್ತಿ ಎಷ್ಟು ಗೊತ್ತಾ?

Read / #siddaramaiah #rcbfan ಸಿದ್ದರಾಮಯ್ಯ/ ಮ್ಯಾಚ್​ ನೋಡಿ ಬಂದ ವಿಪಕ್ಷ ನಾಯಕ ಈ ಸಲ ಕಪ್​ ಯಾರದ್ದು ಅಂದ್ರು ನೋಡಿ!

Read/ Shivamogga bjp ticket/ಶಿವಮೊಗ್ಗ ಬಿಜೆಪಿ ಟಿಕೆಟ್​  ಅವರ್​ ಬಿಟ್ಟು ಇವರ್​ ಬಿಟ್ಟು ಇವರಿಗಾ? ಕತೂಹಲ ಮೂಡಿಸುತ್ತಿದೆ  ಕೆ.ಎಸ್​.ಈಶ್ವರಪ್ಪರವರ ನಡೆ!



ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS/ 

kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt,  firstnews kannada,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News  #karnatakaassemblyelection2023  #KarnatakaPolitics #KarnatakaLatestnews #Karanataka #election2023 #karnatakaelections2023 #BJPGovernment #bjpkarnatakanews #bjpvscongress #BYVijayendra #BasavarajBommai #Lakshmansavadi #JagadishShettar #Modi #AmitShah #JPNadda